ಈ ಕೃತಿಯಲ್ಲಿ ಇಡೀ ಉತ್ತರ ಭಾರತದ ಭೌಗೊಳಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಚಿತ್ರಿಸಲಾಗಿದೆ. ಇಲ್ಲಿ ಇಬ್ಬರು ಸೂಕ್ಷ್ಮ ಮನಸ್ಸಿನ ಹುಡುಗ ಹುಡುಗಿಯರಿರುತ್ತಾರೆ ಅವರು ಒಂದು ಪುಸ್ತಕವನ್ನು ತಮ್ಮ ನಡುವೆ ಭಾವನೆಗಳನ್ನು ಹಂಚಿಕೊಳ್ಳುವ ಸಾಧನವಾಗಿ ಬಳಸಿಕೊಳ್ಳುತ್ತಾರೆ. ಇದು ಕಾದಂಬರಿಯ ಪ್ರಮುಖ ವಸ್ತು. ಇಲ್ಲಿನ ಸರಳ ನಿರೂಪಣಿ ಮತ್ತು ಶೈಲಿ ಆಕರ್ಷಕವಾಗಿದೆ. ತನ್ಮಯತೆಯಿಂದ ಓದಿಸಿಕೊಂಡು ಹೋಗುವಂತಿದೆ.
ಬಂಗಾಳದಲ್ಲಿ ವಾಸಿಸುತ್ತಿರುವ 'ಸಂತಾಲ್' ಎಂಖ ಬುಡಕಟ್ಟು ಸಂಸ್ಕೃತಿಯ ಹುಡುಗಿ, ಸಮಾಜಸೇವೆಯ ಹಂಬಲವನ್ನು ಹೊತ್ತು ಉತ್ತಮ ವೈದ್ಯೆಯಾಗುವ ಕನಸು ಕಾಣುತ್ತಿರುವವಳು. ಸದ್ಯ ಬಂಗಾಳದಲ್ಲೇ ಇರುವ ಅವಳ ಗೆಳೆಯ ಉನ್ನತ ವ್ಯಾಸಂಗದ ಕನಸು ಕಂಡು ಈಗ ಕೊಲ್ಕತ್ತಾದಲ್ಲಿರುವ ಕರ್ನಾಟಕದ ಹುಡುಗ. ಅವರಿಬ್ಬರ ನಡುವೆ ಹರಿದಾಡುವ ಪತ್ರಗಳು ಓದುಗರ ಚಿಂತನೆಗೆ ಒಂದಷ್ಟು ಗ್ರಾಸವನ್ನು ಒದಗಿಸಿವೆ. ಅವರ ಗೆಳೆತನ ಇನ್ಯಾವುದಾದರೂ ತಿರುವು ಪಡೆಯುತ್ತದೆಯೋ..? ಅದಕ್ಕಾಗಿ ಈ ಪುಸ್ತಕವನ್ನು ಓದಬೇಕು.