ಕಾಯಾ

Author : ಗುರುಪ್ರಸಾದ ಕಾಗಿನೆಲೆ

Pages 345

₹ 350.00
Year of Publication: 2021
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080 26617100

Synopsys

ಗುರುಪ್ರಸಾದ್ ಕಾಗಿನೆಲೆ ಅವರ ‘ಕಾಯಾ’ ಕಾದಂಬರಿ ಮೂರು ಭಾಗಗಳನ್ನು ಹೊಂದಿದ್ದು, 33 ಅಧ್ಯಾಯಗಳ ಸಂಕಲನವಾಗಿದೆ. ಮೊದಲ ಭಾಗದಲ್ಲಿ ಒಂದೇ ಅಧ್ಯಾಯವಿದ್ದು, ಭೀಮಸೇನರಾವ ಜಯತೀರ್ಥಾಚಾರ್ಯ ಮಲಖೇಡ ಎಂಬ ಶೀರ್ಷಿಕೆಯನ್ನು ಹೊಂದಿದೆ. ಎರಡನೇ ಭಾಗದ ಎರಡನೇಯ ಅಧ್ಯಾಯವು ಕುಚೋನ್ನತಿ, ಮೂರನೇಯ ಅಧ್ಯಾಯವು ಕಸ್ತೂರಿ, ಕಸ್ತೂರಿ ರಂಗನ್ , ನಾಲ್ಕನೆಯದು ಮಿ ಟೂ, ಐದನೆಯ ಅಧ್ಯಾಯ ಜಾಂಬೀಸ್ ಹೀಗೆ 33 ಅಧ್ಯಾಯಗಳಿವೆ.

ಕಾಯಾ ಕಾದಂಬರಿಯ ಕುರಿತು ಲೇಖಕಿ ಕಾವ್ಯಾ ಕಡಮೆ, ‘ಕಾಯಾ ಕಾದಂಬರಿ ಬರೆದು ತೋರಲು ಹೊರಟಿರುವುದು ಮನುಷ್ಯ ಬಾಳ್ಮೆಯಲ್ಲೇ ಬೆರೆತು ಹೋಗಿರುವ ಹಪಾಪಿತನವನ್ನು. ಇಲ್ಲಿನ ಮಲೀಕ್, ಕಸ್ತೂರಿ, ಪರಿ, ಸಮಂತಾ, ಹನಿ, ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡತನದಲ್ಲಿ ಆಳವಾಗಿ ಬೇರೂರಿದವರು.ತಿರುವು ಮುರುವಾಗಿ ತೊಟ್ಟ ಬಟ್ಟೆಯ ಗುಂಟ ಹೊಲಿಗೆಯ ಪುಗ್ಗೆ ಕಾಣುವ ಹಾಗೆ ಇಲ್ಲಿನ ಪಾತ್ರಗಳ ದೇಹದ ಮೇಲೂ, ಮನೋವಲಯದ ಒಳಗೂ ಉಬ್ಬುತಗ್ಗುಗಳು ಮೂಡಿವೆ. ಮರೆಯಾಗಿವೆ. ಆ ನೇಯ್ಗೆ ಕಾಣದಂತೆ ಮಾಡಲು ನುರಿತ ಪ್ಲಾಸ್ಟಿಕ್ ಸರ್ಜನನಿದ್ದಾನೆ. ಪಳಗಿದ ರಾಜಕಾರಣಿಯಿದ್ದಾಳೆ. ಕಾದಂಬರಿಯುದ್ದಕ್ಕೂ ಹರಡಿಕೊಂಡಿರುವ ಲೀಸಾ ಸಾಲಿಂಜರ್ ಎಂಬ ವ್ಯಕ್ತಿ ನಮ್ಮಲ್ಲೇ ಯಾರೊಬ್ಬರೂ ಆಗಿರಬಹುದಾದ ಸಾಧ್ಯತೆಯೇ ಬೆಚ್ಚಿ ಬಿಳಿಸುವಂತಿದೆ. ನೀಳಬೆರಳ್ನಿಮಿರ್‍, ನಿಮ್ನಬೆರಳ್ಮಡಿಸ್ ಪದಗಳ ಅರ್ಥವನ್ನು ಈ ಕಥನ ಸಾಗರದಲ್ಲಿ ಧುಮುಕಿಯೇ ತಿಳಿಯಬೇಕು! ’ ಎಂಬುದಾಗಿ ಹೇಳಿದ್ದಾರೆ.

ಲೇಖಕಿ ಸೌಮ್ಯ ಕಲ್ಯಾಣ್ ಕರ್ ಕೃತಿಯಲ್ಲಿ ಹೇಳುವಂತೆ, ‘ಮನುಷ್ಯ ತನ್ನ ಬದುಕಿನ ಆಯುಷ್ಯವನ್ನು ಎಳೆದಂತೆ ತನ್ನ ಸೌಂದರ್ಯದ ಆಯುಷ್ಯವನ್ನೂ ಹೆಚ್ಚಿಸುವ ಕಾರ್ಯಕ್ಕೆ ಇಳಿದಿರುವುದು ತೀರಾ ಹೊಸದೇನೂ ಅಲ್ಲವಾದರೂ ಸಿನಿಮಾ ತಾರೆಯರಿಗೋ, ಜಾಹೀರಾತಿನ ರೂಪದರ್ಶಿಗಳಿಗೋ ಸೀಮಿತವಾಗಿದ್ದ ಸೌಂದರ್ಯವರ್ಧಕ/ಸೌಂದರ್ಯೊಪಾಸಕ ಚಿಕಿತ್ಸೆಗಳು ಸಾಮಾನ್ಯ ಜನರಿಗೂ ಎಟುಕುವಂತಾಗಿ ಅವರದಕ್ಕೆ ಹಾತೊರೆಯುವಂತಾಗಿದ್ದು, ಅಚ್ಚರಿಯ ವಿಷಯ. ತನ್ನ ಇಗೋ ಸರ್ವೈವಲ್ಲಿಗಾಗಿ, ಸೋಶಿಯಲ್ ಆಕ್ಸೆಪ್ಟೆನ್ಸಿಗಾಗಿ ತನ್ನ ಅಸ್ತಿತ್ವವನ್ನು ಬದಲಾಯಿಸಿಕೊಳ್ಳುವ ಅವನ ಮಾನಸಿಕ ಸ್ಥಿತಿ, ಪಡುವ ಪ್ರಯಾಸಗಳು ಬೆರಗು,ಹೆದರಿಕೆ ಎರಡೂ ಹುಟ್ಟಿಸಿದವು. ಅಯ್ಯೋ ಮನುಷ್ಯ ಪ್ರಾಣಿಯೇ, ಅದೆಷ್ಟು ಸಂಕೀರ್ಣ ಬದುಕು! ಅಂತೆಯೇ ತಾನೇ ಅಮರಶಿಲ್ಪಿ ಜಕಣಾಚಾರಿಯ ಪುನರ್ಜನ್ಮ ಎಂದು ಭ್ರಮೆಗೆ ಬಿದ್ದ ಮಲೀಕನಂತಹ ವೈದ್ಯನ ಬದುಕು, ಆತನ ಕೈಗೆ ಸಿಕ್ಕ ಸುಮಂತಾಳ ಕಾಯ ಪಲ್ಲಟ, ಕಸ್ತೂರಿ, ಪಪರಿ, ಹನಿ, ಸಿದ್ಧಿಕಿ, ಎಲ್ಲ ಪಾತ್ರಗಳೂ ವಿಚಿತ್ರ ಸಂವೇದನೆ ಹುಟ್ಟಿಸಿದವು. ಕಪ್ಪು, ಬಿಳುಪಿನ ಮಧ್ಯೆಯೇ ಸುಳಿದಾಡುವ ಇವರೆಲ್ಲರೂ ನನಗೆ ವೈಯಕ್ತಿಕವಾಗಿ ಬದುಕು ದೊಡ್ಡದು, ಯಾವುದೇ ತಪ್ಪುಗಳಾದರೂ ಸುಧಾರಿಸಿಕೊಳ್ಳುವ ಅವಕಾಶವನ್ನು ಕೊಟ್ಟೇ ಕೊಡುತ್ತದೆಂಬ ನಂಬಿಕೆಯನ್ನು ಹುಟ್ಟಿಸಿದರು. ಎಷ್ಟು ಬಗೆಯ ಶೇಡ್ಸ್ ಬೂದು ಬಣ್ಣದಲ್ಲಿ! ಕಪ್ಪಾಗುವವರೆಗೂ ಬದುಕನ್ನು ಮತ್ತೆ ಮತ್ತೆ ಕಟ್ಟಿಕೊಳ್ಳಲೇಬೇಕು’ ಎಂದಿದ್ದಾರೆ.

About the Author

ಗುರುಪ್ರಸಾದ ಕಾಗಿನೆಲೆ

ಗುರುಪ್ರಸಾದ್ ಕಾಗಿನೆಲೆ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಡೆಟ್ರಾನ್ಸ್‌ನ ವೇಯ್ಡ್ ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸ, ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ರಕಟಿತ ಕೃತಿಗಳು: 'ನಿರ್ಗುಣ' ಕಥಾಸಂಕಲನ, 'ವೈದ್ಯ, ಮತ್ತೊಬ್ಬ' ಲೇಖನ ಸಂಗ್ರಹ ಮತ್ತು 'ಗುಣ' ಕಾದಂಬರಿ, ಸಂಪಾದಿತ ಕಥಾಸಂಕಲನ 'ಆಚೀಚೆಯ ಕಥೆಗಳು'. ಇತ್ತೀಚಿನ ಕಾದಂಬರಿ 'ಹಿಜಾಬ್ ಸೇರಿದಂತೆ ಹಲವಾರು ...

READ MORE

Conversation

Related Books