ನಿನ್ನ ಸಿಹಿ ನೆನಪು

Author : ಹೆಚ್.ಜಿ. ರಾಧಾದೇವಿ

Pages 172

₹ 90.00
Year of Publication: 1987
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ರಾಜಾಜಿನಗರ,ಬೆಂಗಳೂರು.

Synopsys

ಕಾದಂಬರಿಗಾರ್ತಿ ಎಚ್. ಜಿ. ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ನಿನ್ನ ಸಿಹಿ ನೆನಪು. ಇದು ನಾಯಕ ಪ್ರಧಾನವಾದ ಕಥೆ.ತ್ರಿವಿಕ್ರಮರಾಯರ ಮತ್ತು ಜಾನಕಮ್ಮ ದಂಪತಿಗಳ ಮಗ "ಜನಾರ್ಧನ " ಇಲ್ಲಿ ನಾಯಕ. ಒಂದು ಕಾಲದಲ್ಲಿ ಜನಾರ್ಧನನ ತಂದೆ ಹತ್ತಿ ವ್ಯಾಪಾರ ಮಾಡುತ್ತಾ ಶ್ರೀಮಂತನಾಗಿದ್ದ. ಹೀಗಿರುವಾಗ ತಮ್ಮ ಸ್ನೇಹಿತ ವಾಮನರಾಯರ ಮಾತಿನಂತೆ ಜನಾರ್ಧನನ ತಂದೆ ಅವನ ವ್ಯವಹಾರದಲ್ಲಿ ಪಾಲುದಾರರಾದರು. ಸ್ವಲ್ಪ ಸಮಯದ ಬಳಿಕ ಅಲ್ಲಿ ಕೆಲ್ಸಗಾರರಿಂದ ಅವ್ಯವಹಾರವಾಗಿ ಜನಾರ್ಧನ ನ ತಂದೆ ನಷ್ಟ ಅನುಭವಿಸಿ ಅದೇ ಕೊರಗಿನಲ್ಲಿ ತೀರಿಕೊಂಡಾಗ ಜನಾರ್ಧನನಿಗೆ ಎರಡು ವರ್ಷ.. ಜನಾರ್ಧನ 7 ನೇ ತರಗತಿಗೆ ವಿದ್ಯಾಭ್ಯಾಸ ನಿಲಿಸಿದ್ದ. ಅವನ 16 ನೇ ವಯಸಿನಲ್ಲಿ ಅವನ ಸ್ನೇಹಿತ ಶಾಮುವಿನ ಅಮ್ಮ ಅಚ್ಚಮ್ಮನ ಮಧ್ಯಸ್ತಿಕೆಯಿಂದ ಮಂಡಿ ಮಲ್ಲಪ್ಪನವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ಧ. ಜನಾರ್ಧನ ಈಗ 20 ರ ಯುವಕ. ಜನಾರ್ಧನನ ತಂದೆಯ ಸ್ನೇಹಿತರಾದ ವಾಮನರಾಯರಿಗೆ ತನ್ನಿಂದ ತನ್ನ ಸ್ನೇಹಿತ ನಷ್ಟ ಅನುಭವಿಸಿದ ಎಂಬ ಕೊರಗು. ಹಾಗಾಗಿ ಅವರು ಕೋರ್ಟ್ ನಲಿ ಹೋರಾಡಿ ಅವನ ತಂದೆಗೆ ಸಲ್ಲ ಬೇಕಾಗಿದ್ದ ಹಣವನ್ನು ಜನಾರ್ಧನನಿಗೆ ದೊರಕಿಸಿಕೊಟ್ಟಾಗ ಇದುವರೆಗೂ ಇಲ್ಲದ ನೆಂಟರೆಲ್ಲಾ ಯೋಗಕ್ಷೇಮ ವಿಚಾರಿಸಲು ಮನೆಗೆ ಬರತೊಡಗಿದರು. ಅದರಲ್ಲಿ ನಾಗಣ್ಣಮಾವ ಕೂಡ ಒಬ್ಬರು. ತಮ್ಮ ಮಗಳಾದ ಮಾಲಿನಿ (ಮಾಲಾ )ಯನ್ನು ಅವನಿಗೆ ಕೊಡಬೇಕು ಅಂತ ಯೋಜನೆ ಹಾಕಿಕೊಂಡಿದ್ದರು. ಮಾಲಾಳ ಗುಣನಡತೆ ಸರಿಯಿಲ್ಲದೆ ಅವಳನ್ನು ಯಾರೂ ವರಿಸಲು ಒಪ್ಪುತ್ತಿರಲಿಲ್ಲ. ಆದರೆ ಜನಾರ್ಧನನಿಗೆ ತನ್ನ ಸ್ನೇಹಿತನ ತಂಗಿ "ವಾಸಂತಿ"ಯನ್ನು ಮದುವೆಯಾಗುವ ಆಸೆ. ಇತ್ತ ಕೋರ್ಟ್ ನಲಿ ಹೋರಾಡಿ ದೊರಕಿದ ಹಣದಲ್ಲಿ ಸ್ವಲ್ಪ ಹಣವನ್ನ ಜನಾರ್ಧನ ತನ್ನ ವಿದ್ಯಾಭ್ಯಾಸ ಮುಂದುವರಿಸಲು ಉಪಯೋಗಿಸುತ್ತಾನೆ. ಹಗಲು ದುಡಿಯುತ್ತಾ ಸಂಜೆ ಮಾಧವರಾಯರ ವಿದ್ಯಾಲಯಕ್ಕೆ ವಿದ್ಯಾಭ್ಯಾಸಕ್ಕೆ ಸೇರ್ಪಡೆಯಾಗುತ್ತಾನೆ. ಅವನ ಮಗಳು ಶೋಭಾ ಈತನಿಗೆ ಪಾಠ ಹೇಳಿಕೊಡುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾಳೆ. ಹೀಗೇ ಜನಾರ್ಧನ ತನ್ನ ವಿದ್ಯಾಭ್ಯಾಸ ಮುಗಿಸಿ ಪದವಿ ಪಡೆದುಕೊಳ್ಳುತಾನೆ. ಈ ಮಧ್ಯೆ ಶೋಭಾಳಿಗೆ ಜನಾರ್ಧನ ಮೇಲೆ ಮನಸ್ಸಾಗುತ್ತದೆ. ನಾಗಣ್ಣಮಾವನ ಮಗಳು "ಮಾಲಿನಿ",ಮಾಧವರಾಯರ ಮಗಳು "ಶೋಭಾ" ಇಬರಿಬ್ಬರ ಮಧ್ಯೆ ಜನಾರ್ಧನ ತಾನು ಇಷ್ಟ ಪಟ್ಟ "ವಾಸಂತಿ "ಯನ್ನು ಮರೆತುಬಿಟ್ಟನೇ??? ಜನಾರ್ಧನನಿಗಿರುವ "ಸಿಹಿ ನೆನಪು" ಯಾವದು? ತಿಳಿಯಲು "ನಿನ್ನ ಸಿಹಿ ನೆನಪು" ಓದಲೇಬೇಕು..

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books