ಅಮೇಜಾನ್‌ನಲ್ಲಿ ಅಜ್ಞಾತ

Author : ಬಿ.ಆರ್‌. ಚಂದ್ರಶೇಖರ ಬೇದೂರು

Pages 168

₹ 140.00
Year of Publication: 2020
Published by: ಕೃತಿ ಪ್ರಕಾಶನ
Address: ನಂ. 10, ʻಶ್ರೀಮಾತಾʼ , ಆದಿತ್ಯ ನಗರ, 5ನೇ ಮುಖ್ಯರಸ್ತೆ, 3ನೇ ಕ್ರಾಸ್‌, ಅಂಜನಾಪುರ ಪೋಸ್ಟ್‌, ಜೆ.ಪಿ. ನಗರ 8ನೇ ಹಂತ, ಬೆಂಗಳೂರು- 560108
Phone: 7259283918

Synopsys

ಲೇಖಕ ಬಿ. ಆರ್.‌ ಚಂದ್ರಶೇಖರ್‌ ಬೇದೂರು ಅವರ ಕಾದಂಬರಿ-ʻಅಮೇಜಾನ್‌ನಲ್ಲಿ ಅಜ್ಞಾತʼ. ಈ ಕೃತಿಯಲ್ಲಿ ಬರುವ ಪಾತ್ರ ಅಜ್ಞಾತ.  ಆಧ್ಯಾತ್ಮ ಅಭ್ಯಾಸ ಮಾಡಲು, ಅಮೇಜಾನ್‌ ಮಳೆ ಕಾಡಿಗಿ ಹೊರಡಲು ನಿರ್ಧರಿಸಿ, ಕಾಡು ಸೇರುವ ಮೊದಲೇ ಬ್ರೇಜಿಲ್‌ ದೇಶದಲ್ಲಿ ಡ್ರಗ್‌ ಕಾರ್ಟಲ್‌ ಬಂಧಿಯಾಗಿ ನಂತರ ಅದೇ ಡ್ರಗ್‌ ಕಾರ್ಟಲ್‌ನ ಯಜಮಾನನಾಗಿ ಮೆರೆದು, ನಂತರದಲ್ಲಿ ಎಲ್ಲವನ್ನು ತೊರೆದು ಅಮೇಜಾನ್‌ ಮಳೆಕಾಡು ಸೇರಿದ ಕಥೆಯನ್ನು ರಸವತ್ತಾಗಿ ವಿವರಿಸಿದ ಕಾದಂಬರಿ ಇದು.

ಅಮೇಜಾನ್ ಮಳೆಕಾಡು ,ಕೊಲಂಬಿಯಾದ ರಕ್ತಸಿಕ್ತನಗರ ಬಗೋಟ,ಪೆರು ದೇಶದ ರೈನ್ ಬೋ ಬೆಟ್ಟ ,ಮೆಕ್ಸಿಕೋ ಮರಳುಗಾಡು, ಅಮೇಜಾನ್ ಕಾಡಿನ ಹೆಂಗುನದಿ,ಆಂಡೀಸ್ ಪವ೯ತಗಳ ಚಿತ್ರಣ ಇಲ್ಲಿದೆ. ಕೃತಿಗೆ ಬೆನ್ನುಡಿ ಬರೆದ ಪ್ರಕಾಶಕರು,ʻ ಕ್ಲಿಷ್ಟ ವಿಷಯಗಳನ್ನು ಬಹಳ ಸರಳ ಶೈಲಿಯಲ್ಲಿ ಬರೆದು ಸಾಮಾನ್ಯನಿಗೂ ಮನದಟ್ಟಾಗುವಂತೆ ಬರೆಯುವುದು ಬೇದೂರ್‌ ಅವರ ಕಲೆ. ವಾಸ್ತವಿಕ ಜಗತ್ತಿನ ಆಗುಹೋಗುಗಳ ವಿಷಯ ಎತ್ತಿಕೊಂಡು, ಆಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಪುಸ್ತಕದ ವೈಶಿಷ್ಟ್ಯ. ಪ್ರತಿ ಪುಟಪುಟವೂ ಓದುಗರಿಗೆ ಬೇಸರ ತರಿಸದೆ ಮುಂದೇನು ಮುಂದೇನು ಎಂಬ ಆಸಕ್ತಿ ಕೆರಳಿಸುವಲ್ಲಿ ಈ ಪುಸ್ತಕ ಯಶಸ್ವಿಯಾಗಿದೆʼ. ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಬಿ.ಆರ್‌. ಚಂದ್ರಶೇಖರ ಬೇದೂರು

ಲೇಖಕ ಬಿ. ಆರ್. ಚಂದ್ರಶೇಖರ ಬೇದೂರು ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು ಗ್ರಾಮದವರು. ಕಾನೂನು ಪದವೀಧರರು. ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 16ನೇ ವಯಸ್ಸಿನಲ್ಲೇ ಛಿದ್ರ ಎಂಬ ಕಾದಂಬರಿ ರಚಿಸಿದ್ದರು. 6 ಕನ್ನಡ ಕಾದಂಬರಿ ಹಾಗೂ ‘A Brilliant shadow’ ಎಂಬ ಇಂಗ್ಲಿಷ್  ಕಾದಂಬರಿ ರಚಿಸಿದ್ದಾರೆ. ವಾಸ್ತವಿಕ ಜಗತ್ತಿನ ಆಗು ಹೋಗುಗಳ ವಿಷಯ ಎತ್ತಿಕೊಂಡು ಆಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಕಾದಂಬರಿಗಳ ವೈಶಿಷ್ಟ್ಯ. ‘ಯಮಮಾರ್ಗದಲ್ಲಿ ವೈತರಣೀ ನದಿ’, ‘ನೈಮಿಷಾರಣ್ಯ’, ‘ಅಜ್ಞಾತ’ ಅವರ ಪ್ರಮುಖ ಕಾದಂಬರಿಗಳು.  ...

READ MORE

Related Books