ಸ್ವಾತಂತ್ಯ್ರೋತ್ತರ ಭಾರತದ ಮೊದಲ ಕೆಲ ದಶಕಗಳು ದೇಶದಲ್ಲಿ ಅನೇಕ ಬದಲಾವಣೆಗಳನ್ನು ನಿರೀಕ್ಷಿಸುತ್ತಿದ್ದ ಕಾಲ. ಹಾಗೆ ಸುಧಾರಣೆಯನ್ನು ಬಯಸಿದ್ದವರಿಗೆ ಕಾದಿದ್ದು ಮಾತ್ರ ಭ್ರಮನಿರಸನ. ಬ್ರಿಟಿಷರೇನೋ ಹೋದರು ಆದರೆ ಜನ ಸಾಮಾನ್ಯರಿಗೆ ನಿಜವಾಗಿಯೂ ಸ್ವಾತಂತ್ಯ್ರ ಸಿಕ್ಕಿತೆ ಎಂಬ ಪ್ರಶ್ನೆ ಎದ್ದಿತು. ರಾಜಕಾರಣಿಗಳು ಖುರ್ಚಿ ಗಿಟ್ಟಿಸುವುದಕ್ಕೆ ಗಂಟುಬಿದ್ದರು. ಅಧಿಕಾರಿಗಳು ಹಣದಾಸೆಗೆ ಜೋತು ಬಿದ್ದರು. ಅಂತಹ ಸಂದಿಗ್ಧ ಸ್ಥಿತಿಯನ್ನು ಕಣ್ಣಿಗೆ ಕಟ್ಟಿಕೊಡುತ್ತದೆ ’ಉಕ್ಕಿದ ನೊರೆ’.
ಕೃತಿ ಮೊದಲು ಪ್ರಕಟವಾಗಿದ್ದು 1970ರಲ್ಲಿ. 2000ನೇ ಇಸವಿಯಲ್ಲಿ ರಾಜ್ಯ ಸರ್ಕಾರ ಕಾರಂತರ ಸಮಗ್ರ ಸಾಹಿತ್ಯ ಶ್ರೇಣಿಯ 17ನೇ ಸಂಪುಟದಲ್ಲಿ ಕೃತಿಯನ್ನು ಮರುಪ್ರಕಟಿಸಿದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE