ನಾನು ಕೌಸಲ್ಯೆ

Author : ಗ.ನಾ.ಭಟ್ಟ

Pages 176

₹ 175.00
Year of Publication: 2022
Published by: ಅಂಕಿತ ಪ್ರಕಾಶನ
Address: ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 080-2661 7100

Synopsys

ನಾನು ಕೌಸಲ್ಯೆ ಗ.ನಾ.ಭಟ್ಟ ಅವರ ಕಾದಂಬರಿಯಾಗಿದೆ.ಧಾರ್ಮಿಕ, ವೈದಿಕ ಆಚರಣೆಗಳನ್ನು ಪ್ರಶ್ನೆಯಿಲ್ಲದೆ ಸ್ವೀಕರಿಸಿ, ಸಮರ್ಥಿಸುವಾಗ ಭಟ್ಟರು ಕೌಸಲ್ಯೆಯ ರೂಪದಿಂದ ಕಳಚಿಕೊಂಡು ಗುನಾಭಟ್ಟರೇ ಆಗಿಬಿಡುತ್ತಾರೆ. ಮನಃಶೇಫನ ಪ್ರಕರಣದಲ್ಲಿ ನಿರ್ವಹಣೆಯ ಭಾಗವಾದ 'ನನ್ನ ದುರಸ್ತಿ' (Damage Repair) ಯನ್ನು ಅವರು ನಿಭಾಯಿಸಿದ್ದು ವಿಶೇಷವಾಗಿದೆ. ವೇದಗಳನ್ನೂ, ವೈದಿಕ ಆಚರಣೆಗಳನ್ನೂ ಎತ್ತಿಹಿಡಿದು ಅವುಗಳ ಮೇಲೆ ನೀಡಲಾದ ಅಪವ್ಯಾಖ್ಯಾನಗಳನ್ನು ನಿವಾರಿಸುವ ಆದ್ಯತೆ ಆವಾಹನೆಯಾದಂತೆ ಭಟ್ಟರ ಕೌಸಲ್ಯ ಕೆಲವಡೆ ಕಾಣಿಸುತ್ತಾರೆ. ತನ್ನ ಆತ್ಮಕಥೆಯನ್ನು ಹೇಳಿಕೊಳ್ಳುವಾಗ ಹೆಣ್ಣಾಗಿ ತನ್ನ ಮೂಲಗಳನ್ನು ಹೊರಹಾಕಿದ ಆರಂಭದ ಭಾಗದಲ್ಲಿ ಕೌಸಲ್ಯ ಬಹಳ ಆಪ್ತಳಾಗುತ್ತಾಳೆ. ಆ ಭಾಗದಲ್ಲಿ ಗ.ನಾ.ಭಟ್ಟರು ಕೌಸಲೈಯ ಪರಕಾಯ ಪ್ರವೇಶವನ್ನೇ ಮಾಡಿಬಿಡುತ್ತಾರೆ. ಗ.ನಾ.ಭಟ್ಟರ ಈ ಕೃತಿ ರಾಮಾಯಣದ ವಿಮರ್ಶಾ ಕೃತಿಯಲ್ಲ; ಸಟೀಕಾ ಸಂಪುಟವಲ್ಲ; ಶಾಸ್ತ್ರ ಸಮರ್ಥನೆಯ ವ್ಯಾಖ್ಯಾನ ಗ್ರಂಥವಲ್ಲ. ಕೌಸಲೈಯ ಸ್ವಗತದ ನೆಪದಲ್ಲಿ ಶಾಸ್ತ್ರವ್ಯಾಖ್ಯಾನವೂ ರೂಪುಗೊಳ್ಳುವುದು ಕಾದ೦ಬರಿಯ ಓಘಕ್ಕೆ ತಡೆಯುಂಟುಮಾಡುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಧರಣೀದೇವಿ ಮಾಲಗತ್ತಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಗ.ನಾ.ಭಟ್ಟ

ಗ.ನಾ. ಭಟ್ಟರು ಉತ್ತರ ಕನ್ನಡ ಜಿಲ್ಲೆ, ಶಿರಸಿಯ ಓಣಿಕೈಯವರು, ಇವರು ಸಂಸ್ಕೃತ ವಿದ್ವತ್ತು ಮತ್ತು ಸಂಸ್ಕೃತದಲ್ಲಿ ಎಂ.ಎ. ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ. ಮೂವತ್ತೊಂದು ವರ್ಷಗಳ ಕಾಲ ಶಿಕ್ಷಕರಾಗಿ, ಉಪನ್ಯಾಸಕರಾಗಿ, ಬೋಧಕರಾಗಿ, ಸಹಾಯಕ ಸಂಶೋಧಕರಾಗಿ ಬೇರೆ ಬೇರೆ ಸಂಸ್ಥೆಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. 'ಯಕ್ಷ ಕೌಮುದೀ ಟ್ರಸ್ಟ್' ಮತ್ತು 'ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ'ಯ ಕರ್ಣಧಾರತ್ವದೊಂದಿಗೆ ಬರಹ, ಚಿಂತನೆ, ವಿಮರ್ಶೆ, ಭಾಷಣ, ಉಪನ್ಯಾಸ, ಪ್ರವಚನ, ಸಂಘಟನೆ, ತಾಳಮದ್ದಳೆ ಅರ್ಥಗಾರಿಕೆ, ಅಂಕಣ ಬರಹ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಪ್ಪತ್ತು ಕೃತಿಗಳ ಲೇಖಕ. 'ಸನಾತನ ಸಭೆ'ಯ 'ಪ್ರವಚನ ಭಾಸ್ಕರ' ಮತ್ತು ...

READ MORE

Related Books