ಸಮಗ್ರ ಅನುವಾದಿತ ಕಾದಂಬರಿಗಳು

Author : ವಿ.ಗಣೇಶ್‌

Pages 492

₹ 490.00




Year of Publication: 2022
Published by: ಕಾರ್ತಿಕ್‌ ಎಂಟರ್‌ ಪ್ರೈಸಸ್‌
Address: ಮೈಸೂರು

Synopsys

"ಸಮಗ್ರ ಅನುವಾದಿತ ಕಾದಂಬರಿಗಳು’ ವಿ.ಗಣೇಶ್‌ ಅವರ ಅನುವಾದಿತ ಕೃತಿಯಾಗಿದೆ. ಈ ಸಮಗ್ರ ಕೃತಿಯಲ್ಲಿ ಶ್ರೀ ಉದಯಕುಮಾರ್ ಹಬ್ಬು ಬರೆದಿರುವ The End of an era ಎಂಬ ಕಾದಂಬರಿಯನ್ನು 'ವಿದುರಪರ್ವ' ಎಂಬ ಹೆಸರಿನಲ್ಲಿ ಅನುವಾದಿಸಿರುತ್ತೇನೆ. ಇಲ್ಲ ವಿದುರನು ಎಲ್ಲ ರೀತಿಯಲ್ಲೂ ಹಸ್ತಿನಾಪುರದ ಸಿಂಹಾಸನವನ್ನು ಅಲಂಕಲಿಸಲು ಅರ್ಹನಾಗಿದ್ದರೂ ಅವನು ಹೇಗೆ ಅದರಿಂದ ವಂಚಿತನಾದ ಎಂಬುದನ್ನು ಕಾಣಬಹುದು. ಖ್ಯಾತ ಲೇಖಕ ಕೆ.ಬಿ ಮಲ್ಯರವರು ತಮ್ಮ ಕೃತಿ 'The Dance School'. ಸೌಂದರ್ಯ ಸ್ಪರ್ಧೆಯ ಏಳುಬೀಳುಗಳ ಮೇಲೆ ರಚಿತವಾಗಿದ್ದರೂ ನಮ್ಮ ಮುಂದೆ ಇದು ಒಂದು ಸುಂದರ ಸಂಸಾರದ ಹಾಗೂ ನಾಟಕದ ಶಾಲೆಯ ಕತೆಯಾಗಿ ರಂಜಿಸುತ್ತಾ ಹೋಗುತ್ತದೆ. ಆತ್ಮಶಕ್ತಿಯಿಂದ ಆರೋಗ್ಯರಕ್ಷಣಿ ಕೃತಿಯಲ್ಲಿ ಶ್ರೀಮತಿ ರಾಜಲಕ್ಷ್ಮಿ ರಮೇಶ್‌ರವರು ಸ್ತನ ಕ್ಯಾನ್ಸರ್ ಮತ್ತು ಮೆದುಆನ ಕ್ಯಾನ್ಸರ್ ಎಂಬ ಎರಡೆರಡು ತೊಂದರೆಗಳಿಂದ ನರಳುತ್ತಿದ್ದರೂ ಅವುಗಆಂದ ತಾನು ಹೇಗೆ ಪಾರಾದೆ ಎಂಬುದನ್ನು ತಮ್ಮ ಸ್ವಂತ ಅನುಭವದ ಮೂಲಕ ಹೇಳುತ್ತಾ ಹೋಗುತ್ತಾರೆ.

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books