ವೈವಸ್ವತ

Author : ರೇಖಾ ಕಾಖಂಡಕಿ

Pages 432

₹ 350.00
Published by: ಅಂಕಿತ ಪುಸ್ತಕ
Address: #53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮೈನ್ ರೋಡ್, ಅನಿಕಾರ್ ಟೆಕ್ಸ್ಟೆಲ್ಸ್, ಬಸವನಗುಡಿ ಬೆಂಗಳೂರು ಕರ್ನಾಟಕ-560004
Phone: 08026617100

Synopsys

‘ವೈವಸ್ವತ’ ಕೃತಿಯು ರೇಖಾ ಕಾಖಂಡಕಿ ಅವರ ಚಾರಿತ್ರಿಕ ಕಾದಂಬರಿಯಾಗಿದೆ. ಒಂದು ಕುಟುಂಬದ ಚರಿತ್ರೆಯೆಂದೂ ನೋಡಬಹುದು; ಅಷ್ಟರಮಟ್ಟಿಗೆ ರಾಜ್ಯಗಳ ಚರಿತ್ರೆ ಹಾಗೂ ಕುಟುಂಬಗಳ ಚರಿತ್ರೆ ಒಂದರೊಳಗೊಂದು ಹೆಣೆದುಕೊಂಡಿವೆ. ಈ ಕಾದಂಬರಿ ಒಂದಲ್ಲಾ ಒಂದು ಕಾರಣದಿಂದ ಸುಮಾರು ಮೂರ್ನಾಲ್ಕು ಶತಮಾನಗಳ ಕಾಲ ವಲಸೆ ಹೋಗುತ್ತಲೇ, ತಾವಿರುವ ಸ್ಥಳವನ್ನು ಬಿಟ್ಟು ಹೊಸ ಸ್ಥಳವನ್ನು ಹುಡುಕುತ್ತಲೇ ಇದ್ದ ಒಂದು ಸಾಹಸೀ ಕುಟುಂಬದ ಇತಿಹಾಸವನ್ನು ದಕ್ಷಿಣ ಭಾರತದ ಚರಿತ್ರೆಯ ಹಿನ್ನೆಲೆಯಲ್ಲಿ ಆಪ್ತವಾಗಿ ಹಾಗೂ ವಿಶ್ವಸನೀಯವಾಗಿ ದಾಖಲಿಸುತ್ತದೆ.

About the Author

ರೇಖಾ ಕಾಖಂಡಕಿ
(09 June 1951)

ರೇಖಾ ಕಾಖಂಡಕಿಯವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಮೂಲತಃ ಬಾಗಲಕೋಟೆಯವರು. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತು ಇರುವ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಿಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿ ಪಡೆದಿದ್ದರೆ ಲಂಬಾಣಿಗಳ ...

READ MORE

Related Books