ಆಟಗಾರ: ಕಾಲಾಯ ತಸ್ಮೈ ನಮಃ

Author : ಅರ್ಜುನ್ ದೇವಾಲದಕೆರೆ

Pages 274

₹ 220.00
Year of Publication: 2018
Published by: ದೇವಾಲದಕೆರೆ ಪ್ರಕಾಶನ
Address: ದೇವಾಲದಕೆರೆ ಗ್ರಾಮ ಮತ್ತು ಅಂಚೆ, ಹಾನುಬಾಳು ಹೋಬಳಿ, ಸಕಲೇಶಪುರ ತಾಲೂಕು, ಹಾಸನ ಜಿಲ್ಲೆ- 573165

Synopsys

‘ಆಟಗಾರ: ಕಾಲಾಯ ತಸ್ಮೈ ನಮಃ’ ಲೇಖಕ ಅರ್ಜುನ್ ದೇವಾಲದಕೆರೆ ಅವರ ಕಾದಂಬರಿ. ಕೃತಿಯ ಕುರಿತು ಬರೆಯುತ್ತಾ ‘ಕನ್ನಡದ ಯುವಕ-ಯುವತಿಯರು ಕನ್ನಡ ಕಾದಂಬರಿಗಳನ್ನು ಓದುವುದಿಲ್ಲ, ಅದರಲ್ಲೂ ಈ ಕಾರ್ಪೋರೇಟ್ ಕನ್ನಡಿಗರು ಕೇವಲ ಇಂಗ್ಲೀಷ್ ಕಾದಂಬರಿಗಳನ್ನು ಮಾತ್ರ ಓದುತ್ತಾರೆ ಎಂಬ ಆರೋಪಗಳನ್ನು ಸುಳ್ಳಾಗಿಸಿದ್ದು, ಅವಳು..ಬದುಕ ಕಲಿಸಿದವಳು ಕಾದಂಬರಿ. ಜನಸಾಮಾನ್ಯರ ದೃಷ್ಠಿಯಲ್ಲಿ ಯೋಚಿಸಿ, ಜನಸಾಮಾನ್ಯನ ಭಾಷೆಯಲ್ಲಿ ಬರೆದರೆ, ಪ್ರತಿಯೊಬ್ಬ ಕನ್ನಡಿಗನೂ ಕನ್ನಡದ ಪುಸ್ತಕಗಳನ್ನು ಓದುತ್ತಾನೆ ಎಂಬುದನ್ನು ನನ್ನಂತಹ ಚೊಚ್ಚಲ ಕಾದಂಬರಿಕಾರನ ಪುಸ್ತಕವನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಋಜುವಾತುಪಡಿಸಿದ್ದಾನೆ ಕನ್ನಡಿಗ ಎನ್ನುತ್ತಾರೆ ಲೇಖಕ ಅರ್ಜುನ್ ದೇವಾಲದಕೆರೆ. ಆಟಗಾರ ಕಾದಂಬರಿಯಲ್ಲಿ ಎಲ್ಲವೂ ಇದೆ, ನನ್ನ ಸುತ್ತ ನಡೆದ ಹಲವು ಸತ್ಯ ಘಟನೆಗಳನ್ನು ಒಂದು ಸೃಜನಶೀಲ ಚೌಕಟ್ಟಿನಲ್ಲಿಟ್ಟು, ಕಲ್ಪನೆಯ ಕುಂಚದಲ್ಲಿ ಕಾದಂಬರಿಯಾಗಿಸಿದ್ದೇನೆ. ಕಾರ್ಪೋರೇಟ್ ನಿಂದ ಕಾನನದವರೆಗೂ ಕಥೆಯ ವಿಸ್ತಾರವಿದೆ. ಒಂದು ನವಿರು ಪ್ರೇಮದೆಳೆಯ ಜೊತೆ, ಕುತೂಹಲಕಾರಿ ಕಥಾಹಂದರವನ್ನು ಹೆಣೆಯಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ. ಯುವ ಮನಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹೆಣೆದಿರುವ ಹಂದರ ಪ್ರಬುದ್ಧ ಓದುಗರನ್ನು ಕಾಡುವಂತಿವೆ.

About the Author

ಅರ್ಜುನ್ ದೇವಾಲದಕೆರೆ

ಲೇಖಕ ಅರ್ಜುನ್ ದೇವಾಲದಕೆರೆ ಮೂಲತಃ ಸಕಲೇಶಪುರದ ದೇವಾಲದಕೆರೆ ಗ್ರಾಮದವರು, ಮಲೆನಾಡಿನಲ್ಲಿ ಮನೆ ಮಾತಾಗಿರುವ ಅಂಕಣ ಬರಹಗಾರರು, ಕಾದಂಬರಿಕಾರರು ಮತ್ತು ಭಾಷಣಕಾರರು. ಚಿಕ್ಕಮಗಳೂರಿನ ಜಿಲ್ಲಾ ಪತ್ರಿಕೆ ದರ್ಪಣದ ಖಾಯಂ ಅಂಕಣಕಾರರು. ರಾಜ್ಯದ ಮೂಲೆ ಮೂಲೆಗೆ ರಾಷ್ಟ್ರೀಯತೆಯನ್ನು ಪಸರಿಸುತ್ತ, ದೇಶದ ಬಗ್ಗೆ ಸೈನಿಕರ ಬಗ್ಗೆ ಜನಗಳಲ್ಲಿ ಅರಿವು ಮೂಡಿಸುತ್ತಿರುವ ಇವರು ವೃತ್ತಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ. ಸಾಹಿತಿ ಎಂದರೆ ನಯವಾಗಿ ತಿರಸ್ಕರಿಸಿ ನಾನೊಬ್ಬ ಜನಸಾಮಾನ್ಯನ ಬರಹಗಾರ ಎಂದು ನಸುನಗುವ ಇವರ ಮೊದಲನೇ ಕಾದಂಬರಿ 'ಅವಳು' ರಾಜ್ಯದ ಯುವಜನರ ಮನಸ್ಸುಗೆದ್ದು ಈಗ ನಾಲ್ಕನೇ ಮುದ್ರಣ ಕಾಣುತ್ತಿದೆ. ಲೇಖಕರ ಎರಡನೇ ಕಾದಂಬರಿ "ಆಟಗಾರ" ಕೂಡ ಬಿಡುಗಡೆಯಾಗಿ ...

READ MORE

Related Books