ಗೆಜ್ಜೆ ಪೂಜೆ

Author : ಎಂ.ಕೆ. ಇಂದಿರಾ

Pages 220

₹ 5.00




Year of Publication: 1983
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ನೃಪತುಂಗರಸ್ತೆ, ಬೆಂಗಳೂರು- 560002

Synopsys

‘ಗೆಜ್ಜೆ ಪೂಜೆ’ ಎಂ.ಕೆ.ಇಂದಿರಾ ಅವರ ಕಾದಂಬರಿ. ಮಹಿಳಾ ಪ್ರಧಾನವಾದ ಈ ಕಾದಂಬರಿ ವೇಶ್ಯಾವಾಟಿಕೆ ಎಂಬ ಸಾಮಾಜಿಕ ಪಿಡುಗಿನ ಭೀಕರತೆಯನ್ನು ವಿವರಿಸಿತ್ತು. ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಈ ಕಾದಂಬರಿಯನ್ನು ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರು ಅದೇ ಹೆಸರಿನಲ್ಲಿ ಚಲನಚಿತ್ರವನ್ನು ನಿರ್ಮಿಸಿದ್ದರು.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books