‘ದೂರದ ಬೆಟ್ಟ’ ಕನ್ನಡದ ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರ ಕಾದಂಬರಿ. ಇದು ಚಲನಚಿತ್ರವಾಗಿಯೂ ಜನ ಮೆಚ್ಚುಗೆ ಪಡೆದಿದೆ. ಹಳ್ಳಿಯ ಮುಗ್ಧ ಜೋಡಿ ಬದುಕು ಕಟ್ಟಿಕೊಳ್ಳಲು ನಗರಕ್ಕೆ ಬಂದು ನಗರದ ಕೆಟ್ಟ ಜನರಿಂದ ಅನುಭವಿಸುವ ನೋವು, ನಗರೀಕರಣದ ಕ್ರೌರ್ಯವನ್ನು ವಿವರಿಸುವ ಈ ಕಾದಂಬರಿ, ಬಡವರ ಬದುಕಿನ ನಂಬಿಕೆ, ಪ್ರೀತಿಗಳ ಕುರಿತೂ ಮಾತನಾಡುತ್ತದೆ. ನಗರವೆಂಬ ಮೋಹ ದೂರದ ಬೆಟ್ಟದಂತೆ ಹತ್ತಿರವೇ ಕಂಡರೂ ಅಲ್ಲಿನ ಬದುಕು, ನಡೆ ಎಷ್ಟು ಕಠಿಣದ್ದು ಎಂಬುದೇ ಈ ಕಾದಂಬರಿಯ ಕಥಾವಸ್ತು.
ಮನಸ್ಸಿನ ಕ್ರಿಯೆಗಳಿಗೆ ಕಥಾರೂಪ ನೀಡಿ ಕಾದಂಬರಿಗಳನ್ನು ರಚಿಸಿದ್ದು ತ್ರಿವೇಣಿ ಅವರ ಹೆಗ್ಗಳಿಕೆ. ಇವರು 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಜನಿಸಿದರು. ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು 20 ಕಾದಂಬರಿಗಳನ್ನು ಹಾಗೂ 3 ಕತಾ ಸಂಕಲನಗಳನ್ನು ರಚಿಸಿದ್ದಾರೆ. ಇವರ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿವೆ. ಇವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ – 'ಅವಳ ಮನೆ' ...
READ MORE