ಕಲ್ಲಖಣಿಯಾಗು,ಕರಿಕೀ ಬೇರಾಗು

Author : ದಮಯಂತಿ ನರೇಗಲ್ಲ

Pages 186

₹ 70.00
Year of Publication: 2002
Published by: ಮಹಿಳಾ ಸಾಹಿತ್ಯಿಕಾ
Address: ನವನಗರ, ಹುಬ್ಬಳ್ಳಿ

Synopsys

‘ಕಲ್ಲಖಣಿಯಾಗು, ಕರಿಕೀ ಬೇರಾಗು’ ದಮಯಂತಿ ನರೇಗಲ್ಲ ಅವರ ಕಾದಂಬರಿಯಾಗಿದೆ. ಸ್ವಾತಂತ್ರೋತ್ತರ ಕಾಲದ ಸಾಮಾಜಿಕ ವಸ್ತುವನ್ನುಳ್ಳ ಈ ಕಾದಂಬರಿ ಸುತ್ತಲಿನ ಬದುಕಿನ ವಿವಿಧ ಮುಖಗಳನ್ನು ಬಿಂಬಿಸುತ್ತದೆ. ತುಂಬಿದ ಮನೆಯಲ್ಲಿ ಹಲವು ಹತ್ತು ವಿಧದ ಕೌಟುಂಬಿಕ ಸಂಬಂಧಗಳೊಡನೆ ಮುಖಾಮುಖಿಯಾದಾಗ ಅನುಭವಗಳು ಈ ಕೃತಿಯಲ್ಲಿ ಸಿಗುತ್ತವೆ.

About the Author

ದಮಯಂತಿ ನರೇಗಲ್ಲ
(12 May 1937)

ಕಾದಂಬರಿಗಾರ್ತಿ, ಅನುವಾದಕಿ ದಮಯಂತಿ ನರೇಗಲ್ಲ ಅವರು  ಇಂಗ್ಲಿಷ್ ಪ್ರಾಚಾರ್ಯರಾಗಿದ್ದು 1937 ಮೇ 12 ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆ ಯಲ್ಲಿ ಜನಿಸಿದರು. “ತೇರನೆಳೆಯ ಬಾರಾ ತಂಗಿ, ತ್ರಿವೇಣಿ, ಯಯಾತಿ ಪ್ರಸಂಗ” ಅವರು ಪ್ರಮುಖ ಕಾದಂಬರಿಗಳು.  ತೇರನೆಳೆಯ ಬಾರತಂಗಿ ಕೃತಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಸಾಹಿತ್ಯ ಪರಿಷತ್ತಿನ ಬಹುಮಾನ, ಬೀದಿ ನಾಟಕ ಸ್ಪರ್ಧೆಯಲ್ಲಿ 2ನೇ ಬಹುಮಾನ ಸಂದಿದೆ. ಮಃಆರಾಷ್ಟ್ರದಲಲ್‌ಇ ಸಂಗೀತ ವಿಮರ್ಶಕರೆಂದೇ ಪ್ರಸಿದ್ಧವಾಗಿರುವ ಅರವಿಂದ ಗಜೇಂದ್ರಗಡಕರ ’ಅಸೇ ಸೂರ,.. ಅಶೀ ಮಾಣಸ’ ಎಂಬ ಪುಸ್ತಕವನ್ನು ಕನ್ನಡಕ್ಕೆ ತಂದಿದ್ಧಾರೆ ದಮಯಂತಿ ನರೇಗಲ್ಲ ಅವರು.  ...

READ MORE

Reviews

ಹೊಸತು-  ಅಕ್ಟೋಬರ್‌ -2003

ಒಬ್ಬ ಬರಹಗಾರ್ತಿಯ ಬದುಕನ್ನು ಆಧಾರವಾಗಿಟ್ಟುಕೊಂಡು ಸ್ವಾತಂತ್ರೋತ್ತರ ಕಾಲದ ಸಾಮಾಜಿಕ ವಸ್ತುವನ್ನುಳ್ಳ ಈ ಕಾದಂಬರಿ ಸುತ್ತಲಿನ ಬದುಕಿನ ವಿವಿಧ ಮುಖಗಳನ್ನು ಬಿಂಬಿಸುತ್ತದೆ. ತುಂಬಿದ ಮನೆಯಲ್ಲಿ ಹಲವು ಹತ್ತು ವಿಧದ ಕೌಟುಂಬಿಕ ಸಂಬಂಧಗಳೊಡನೆ ಮುಖಾಮುಖಿಯಾದಾಗ ಅನುಭವಗಳು ಹೊರಲಾರದಷ್ಟು ಸಿಗುತ್ತವೆ. ಕಾದಂಬರಿಯುದ್ದಕ್ಕೂ ಸಮಾಜವು ಇಂಥ ಅಸಹನೀಯ ಸ್ಥಿತಿಯಿಂದ ಪರಿವರ್ತನೆಯಾಗಬೇಕೆಂಬ ಉತ್ಕಟ ಬಯಕೆಯೊಂದು ಹರಿತವಾಗಿ ಪ್ರತಿಪಾದಿಸಲ್ಪಟ್ಟಿದೆ. ಹೆಣ್ಣು ಏಕಕಾಲಕ್ಕೆ ಎಲ್ಲ ಪಾತ್ರಗಳನ್ನೂ ನಿಭಾಯಿಸುವ ಚಿತ್ರಣ.

 

Related Books