ವಿಶ್ವ ಪ್ರಸಿದ್ದ ಕಾದಂಬರಿ 'ಎರೌಂಡ್ ದಿ ವರ್ಲ್ಡ್ ಇನ್ ಎಯ್ಟಿ ಡೇಸ್''ನ್ನು ಯೂಲ್ಡ್ ವೆರ್ನೆ 1873ರಲ್ಲಿ ರಚಿಸಿದರು. ಈ ಕೃತಿಯು ಫ್ರೆಂಚ್ ಬಾಷೆಯಲ್ಲಿದೆ.ಇಂಗ್ಲಿಷ್ ಭಾಷೆಗೆ ಅನುವಾದಗೊಂಡ ಬಳಿಕ ವಿಶ್ವಾದ್ಯಂತ ಹರಡಿಕೊಂಡಿತು. 1872ರಲ್ಲಿ ವಿಮಾನ ಪ್ರಯಾಣದ ಅನುಕೂಲತೆಗಳಿರಲಿಲ್ಲ. ಹಡಗು ಮತ್ತು ರೈಲು ಬಂಡಿಗಳ ಮೂಲಕ ಜಗತ್ತನ್ನು ಎಂಬತ್ತು ದಿನಗಳಲ್ಲಿ ಒಂದು ಸುತ್ತು ಬರುವ ಸಾಹಸದ ಯಾತ್ರೆಯ ಈ ಕಥನವು ಒಂದು ರೋಮಾಂಚಕ ಕಾದಂಬರಿಯಾಗಿ ವಿದ್ಯಾರ್ಥಿ, ಯುವಕರ ಮನಸ್ಸನ್ನು ಸೆಳೆದಿದೆ. ಹಿರಿಯ ಲೇಖಕರಾದ ಬಿ.ಎ.ವಿವೇಕ್ ರೈ ಕನ್ನಡಕ್ಕೆ ತಂದಿದ್ದಾರೆ.
ಸಂಸ್ಕೃತಿ ಚಿಂತಕರಾದ ಡಾ. ಬಿ.ಎ.ವಿವೇಕ ರೈ ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಪುತ್ತೂರು ತಾಲೂಕಿನ 'ಪುಣಚಾ' ರೈ ಅವರ ಹುಟ್ಟೂರು. 1946ರ ಡಿಸೆಂಬರ್ 8ರಂದು ಜನಿಸಿದ ಅವರು ತಮ್ಮ ಊರಿನಲ್ಲಿಯೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಕನ್ನಡ ಮತ್ತು ತುಳು ಭಾಷೆ ಬಗ್ಗೆ ಅಪಾರ ಒಲವು-ಪಾಂಡಿತ್ಯ. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರಾದ ಅವರು ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥರಾಗಿ ...
READ MORE