ಅವನಿ (ಕಾದಂಬರಿ)

Author : ಆದೆಪ್ಪ ಹೆಂಬಾ ಮಸ್ಕಿ

Pages 108

₹ 100.00




Year of Publication: 2020
Published by: ತೇಜಸ್ ಪ್ರಕಾಶನ
Address: ಮಸ್ಕಿ, ಜಿಲ್ಲೆ ರಾಯಚೂರು

Synopsys

ಲೇಖಕ ಆದೆಪ್ಪ ಹೆಂಬಾ ಮಸ್ಕಿ ಅವರ ಕಾದಂಬರಿ-ಅವನಿ. ಪ್ರೀತಿಯ ಜೊತೆ ಜೊತೆಗೆ ದೇಶಭಕ್ತಿಯನ್ನು ಪ್ರತಿಬಿಂಬಿಸುವ ಕಥಾ ವಸ್ತುವನ್ನು ಒಳಗೊಂಡಿದೆ. ಪಾತ್ರಗಳ ಸೃಷ್ಟಿಯಲ್ಲೂ ಎಚ್ಚರಿಕೆ ಇದೆ. ನಿರೂಪಣೆಯೂ ಆಕರ್ಷವಾಗಿದೆ. ಪ್ರೀತಿ ಸಂಬಂಧಗಳಿಗಿಂತ ದೇಶ ಮುಖ್ಯ ಎನ್ನುವ ಸಂದೇಶ ಈ ಕಾದಂಬರಿಯದ್ದು. ತಾನು ಕೆಲವು ಸಮಯ ತಪ್ಪಿತಸ್ಥನಾಗಿ ಕಂಡರೂ ಪರವಾಗಿಲ್ಲ ಎಂಬ ಅರ್ಮಾನ್, ಐ.ಪಿ.ಎಸ್ ತೇಜಸ್ಗೆ ಸಮನಾಗಿ ನಿಲ್ಲುತ್ತಾನೆ. ತನ್ನ ಪ್ರಾಣ ಲೆಕ್ಕಿಸದೆ ಮಸೂದ್ ನೊಂದಿಗೆ ಹುಸಿ ಗೆಳೆತನ ಮಾಡಿ, ಕಾಲು ಕಳೆದುಕೊಳ್ಳುತ್ತಾನೆ. ಈತನ ದೇಶಭಕ್ತಿಗೆ ಇದು ಸಂಕೇತವೂ ಆಗುತ್ತದೆ. ಮನುಷ್ಯ ಧರ್ಮವೇ ಶ್ರೇಷ್ಠ, ಜಾತಿ ನಿಮಿತ್ತ ಮಾತ್ರ ಎಂದು ನಂಬಿದ ಗಣೇಶನ ಭಕ್ತೆ ಅವನಿ , ತನ್ನ ಇನಿಯನಿಗೆ `ನಿನ್ನ ಮಾತು ಕೇಳುತ್ತೇನೆ, ಆದರೆ ಹೇರಲು ಬಂದರೆ ಸಹಿಸೆನು, ನಿನ್ನ ಧರ್ಮವನ್ನು ಪಾಲಿಸುತ್ತೇನೆ. ಆದರೆ ನನ್ನ ಧರ್ಮವನ್ನು ಬಿಡೆನು' ಎನ್ನುವಲ್ಲಿ ಧರ್ಮ ಸಹಿಷ್ಣುತೆ, ಸ್ವ ಧರ್ಮ ಪಾಲನೆ ಎರಡನ್ನೂ ಸಮದೂಗಿಸಿದ ಕಾದಂಬರಿ ಮನದಲ್ಲಿ ಅಚ್ಚಾಗಿ ನಿಲ್ಲುತ್ತದೆ. ಮಾತು ತಪ್ಪಿದರೂ ತಮ್ಮನ ಪ್ರೇಮ ನೌಕೆ ಮುಳುಗಿದರೂ ಸರಿ, ದೇಶಕ್ಕೆ ದ್ರೋಹ ಬಗೆಯುವವರನ್ನು ಒಪ್ಪಿಕೊಳ್ಳಲು ಅಸಾಧ್ಯ ಎಂದು ನಿರ್ಧರಿಸಿದ ಅವನಿ, ಭೂಮಿಯಷ್ಟೇ ತೂಕದ ಹೆಣ್ಣಾಗುತ್ತಾಳೆ. ಬಲಾತ್ಕರಿಸಿದನೆಂಬ ಕಾರಣಕ್ಕಿಂತಲೂ ದೇಶದ್ರೋಹಿ ಎಂಬುದಕ್ಕಾಗಿ ಅರ್ಮಾನ್ ಎಂಬ ಪಾಪಿಯನ್ನು ಕೊಲ್ಲಲು ಸಿದ್ಧವಾದವಳು, ಅವನು ದೇಶಭಕ್ತನೆಂದೊಡನೆ ಅವನನ್ನು ಒಪ್ಪಿಕೊಳ್ಳುವುದೂ ಅವಳ ದೇಶಪ್ರೇಮಕ್ಕೆ ಸಾಕ್ಷಿಯಾಗುತ್ತದೆ. ಈ ಕಾದಂಬರಿಯ ಕಥಾ ವಸ್ತು ತೆರೆದುಕೊಳ್ಳುವಲ್ಲಿಯೂ ಕಲಾತ್ಮಕತೆ ಮೆರೆದಿದೆ. ಮುಂದೇನು? ಎಂಬ ಕುತೂಹಲ ಕೊನೆಯವರೆಗೂ ಉಳಿಸಿಕೊಂಡು ಹೋಗುತ್ತದೆ. 'ಜಾತಿ ಧರ್ಮಕ್ಕಿಂತ ಮನುಷ್ಯ ಧರ್ಮ ದೊಡ್ಡದು' ಎಂಬ ಸಂದೇಶ ನೀಡುವುದು ಕಾದಂಬರಿಯ ಉದ್ದೇಶವೂ ಆಗಿದೆ.

About the Author

ಆದೆಪ್ಪ ಹೆಂಬಾ ಮಸ್ಕಿ

ಲೇಖಕ ಆದೆಪ್ಪ ಹೆಂಬಾ ಮಸ್ಕಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದವರು. ಹುಟ್ಟೂರಿನಲ್ಲಿ ಪ್ರೌಢಶಾಲೆ ಶಿಕ್ಷಣ, ನಂತರ ಧಾರವಾಡದಲ್ಲಿ ಪಿಯುಸಿ ಹಾಗೂ ಬಿ.ಎಸ್.ಸಿ. ಪದವಿ, ಬಿಎಡ್ ವ್ಯಾಸಂಗವನ್ನು ಧಾರವಾಡದ ಯುನಿವರ್ಸಿಟಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. 1994 ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ನಂತರ 2015 ರಲ್ಲಿ ಬಡ್ತಿ ಹೊಂದಿ ಸದ್ಯ, ಮಸ್ಕಿ ತಾಲೂಕಿನ ಉದ್ದಾಳ ಗ್ರಾಮದ ಸರಕಾರಿ ಪ್ರೌಢಶಾಲೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ, ಕವನ, ಕಾದಂಬರಿ, ಜೀವನ ಚರಿತ್ರೆ ರಚನೆ ಇವರ ಹವ್ಯಾಸ. ...

READ MORE

Related Books