ಮನೋಲಹರಿ

Author : ಮುಕ್ತಾ ಸಿ. ಎನ್.

Pages 192

₹ 50.00
Year of Publication: 1997
Published by: ರಾಜಲಕ್ಷ್ಮೀ ಪ್ರಕಾಶನ
Address: ಬಳೆಪೇಟೆ ಚೌಕ, ಬೆಂಗಳೂರು-560053

Synopsys

ʼಮನೋಲಹರಿʼ ಲೇಖಕಿ ಸಿ.ಎನ್‌ ಮುಕ್ತಾ ಅವರ ಸಾಮಾಜಿಕ ಕಾದಂಬರಿ. ಸಂಸಾರದಲ್ಲಿ ಸಾಮರಸ್ಯವಿದ್ದಾಗ ಮಾತ್ರ ಬದುಕು ನಂದನವಾಗುತ್ತದೆ ಎಂಬರ್ಥದಲ್ಲಿ ಕಥೆಯು ಸಾಗುತ್ತದೆ. ದಂಪತಿ ತಮ್ಮ ಜವಾಬ್ದಾರಿಗಳು ಅರಿತು ನಡೆದಾಗ ಮಾತ್ರ ಜೀವನ ಚಕ್ರ ಸುಲಲಿತವಾಗಿ ಉರುಳುತ್ತದೆ. ಅವರು ತಮ್ಮ ಕರ್ತವ್ಯ ಮರೆತಾಗ ಉದ್ಭವಿಸಬಹುದಾದ ಸಮಸ್ಯೆಗಳ ಚಿತ್ರಣವನ್ನು ಲೇಖಕಿ ಈ ಕಾದಂಬರಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಕಾದಂಬರಿಗೆ ಕಥಾವಸ್ತುವನ್ನು ರಾಜೇಶ್ವರಿ ಭಾರತಿ ಒದಗಿಸಿದ್ದಾರೆಂದು ಮುಕ್ತಾ ಅವರು ಈ ಪುಸ್ತಕದ ಮುನ್ನುಡಿಯಲ್ಲಿ ಬರೆದಿದ್ದಾರೆ. ಕೌಟುಂಬಿಕ ಹಿನ್ನಲೆಯಲ್ಲಿ ಸಾಗಿ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ಸಾರಾಂಶವನ್ನು ಈ ಕಾದಂಬರಿ ಒಳಗೊಂಡಿದೆ. 

About the Author

ಮುಕ್ತಾ ಸಿ. ಎನ್.

ಮುಕ್ತಾ ಸಿ. ಎನ್. ಅವರು ಮೂಲತಃ ಚಿತ್ರದುರ್ಗದವರು. 1951 ಏಪ್ರಿಲ್ 30ರಂದು ಜನನ. ಸಹಾಯಕ ಶಿಕ್ಷಕಿಯಾಗಿ ನಂಜನಗೂಡಿನ ಬಾಲಕಿಯರ ವಸತಿ ಸಹಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ಸಿ.ಬಿ ನರಸಿಂಹಮೂರ್ತಿ, ತಾಯಿ – ಸಿ.ಎನ್ ಕಮಲಮ್ಮ. ಚಿಕ್ಕಂದಿನಲ್ಲೇ ಸಾಹಿತ್ಯದ ಒಡನಾಟದಲ್ಲಿ ಬೆಳೆದ ಮುಕ್ತಾ ಅವರು ಸಾಹಿತ್ಯ ಕೃಷಿಯಲ್ಲಿ ತಮ್ಮದೇ ಬರಹಗಳ ಮೂಲಕ ಮನೆಮಾತಾಗಿದ್ದಾರೆ. 1953 ರಲ್ಲಿ ಆಶ್ರಯ, 1975 ರಲ್ಲಿ ಮರೀಚಿಕೆ, 1982  ರಲ್ಲಿ ವಿಮುಕ್ತೆ,  1983 ರಲ್ಲಿ ದಡ ಸೇರಿದ ನೌಕೆ, ಸುವರ್ಣ ಸಂಕೋಲೆ, ನನಸಾಗದ ಕನಸು, ಸುಖದ ಸೋಪಾನಗಳು, ಒಲವಿನ ಉಯ್ಯಾಲೆ, ಕಳೆದು ಹೋದವರು ಮುಂತಾದವುಗಳು ಇವರ ...

READ MORE

Related Books