ನಂಜಾದ ನೆನಪು

Author : ಚಿತ್ರಲೇಖಾ ಎಸ್.

₹ 80.00




Year of Publication: 1967
Published by: ಸುಧಾ ಶಿಶು ಸಾಹಿತ್ಯ ಮಾಲೆ

Synopsys

ಮನೋವೈಜ್ಞಾನಿಕ ಕಾದಂಬರಿಯ ಸಾಲಿಗೆ ಸೇರಿದ ' ನಂಜಾದ ನೆನಪು' ಸುಭಾಷ್ ಹಾಗೂ ಧಾರಿಣಿಯ ಅನುರೂಪದ ದಾಂಪತ್ಯದ ನಡುವೆ ತೊಡಕಾಗಿ ಕಾಡುವ ಧಾರಿಣಿಯ ಫಿಟ್ಸ್ ಕಾಯಿಲೆಯ ಸುತ್ತ ಹೆಣೆದ ಚಂದದ ಕಾದಂಬರಿ. ಚಿತ್ರಲೇಖ ಅವರ ಆಪ್ತವಾದ ಶೈಲಿಯಂತೂ ಓದುಗರನ್ನು ಹಿಡಿದಿರಿಸುತ್ತದೆ. ಪ್ರೀತಿಸಿ , ಹಿರಿಯರ ಒಪ್ಪಿಗೆ ಇಲ್ಲದೆ ಮದುವೆಯಾದ ಸುಭಾಷ್ ಧಾರಿಣಿಯ ಒಲವಿನ ಬದುಕು ಚಿಗುರೊಡೆಯುವ ಸಂಭ್ರಮದ ಸಂದರ್ಭದಲ್ಲಿ ಎರಡು ಬಾರಿ ಕಮರಿ ಹೋಗುತ್ತದೆ. ಮೂರನೇ ಬಾರಿ ಬಸುರಾದಾಗ ಕಾಡುವ ಸಮಸ್ಯೆಯೇ ಈ ಅನಾರೋಗ್ಯ. ಧಾರಿಣಿಯ ಬದುಕಿನ ಹಿನ್ನೆಲೆಯ ಜಾಡು ಹಿಡಿದು ಹೋದಾಗ ಅನೇಕ ವೈವಿಧ್ಯಮಯ ವಿಚಾರಗಳ ಅನಾವರಣವಾಗುತ್ತದೆ. ' ಜನರಿಗೆ ದೇವರ ಮೇಲಿನ ನಂಬಿಕೆ ಮುಖ್ಯ. ಹಾಗೆಂದು ಅದು ಮೂಢನಂಬಿಕೆಯಾಗಬಾರದು. ಇತರ ಧರ್ಮಗಳಲ್ಲಿರುವ ಉತ್ತಮ ವಿಚಾರಗಳನ್ನು ಗೌರವಿಸುವ ಜೊತೆಗೆ ಎಲ್ಲಾ ಧರ್ಮದ ಮೂಲತತ್ವವೂ ಒಂದೇ. ಎಲ್ಲೂ ಬಲವಂತದ ಹೇರಿಕೆ ಸಲ್ಲದು , ಹಾಗಾದಾಗ ಅದು ಮನೋವಿಪ್ಲವಕ್ಕೆ ನಾಂದಿಯಾಗುತ್ತದೆ ' ಎಂಬ ಸಂದೇಶ ಹೊತ್ತ ಕಾದಂಬರಿಯಿದು.

About the Author

ಚಿತ್ರಲೇಖಾ ಎಸ್.
(06 May 1945)

ಸಾಹಿತಿ, ಕಾದಂಬರಿಗಾರ್ತಿ ಚಿತ್ರಲೇಖಾ ಎಸ್ ಅವರು 1945 ಮೇ 01 ಜನಿಸಿದರು.  ಇವರ ಬಹುತೇಕ ಕಾದಂಬರಿಗಳು ಸಿನಿಮಾಗಳಾಗಿವೆ. ‘ಮುದುಡಿದ ತಾವರೆ ಅರಳಿತು, ಸಮಯದ ಗೊಂಬೆ’ ಕನ್ನಡದಲ್ಲಿ ಚಲನಚಿತ್ರವಾಗಿದೆ.  ‘ಪ್ರೇಮಪಲ್ಲವಿ, ಸ್ವರ್ಗದ ನೆರಳು, ಕೆಂಪಾದ ದೀಪ, ಹೂಮಂಚ, 47 ದಿನಗಳು 1987, ಕರುಣಹತ್ಯೆ, ನಂಜಾದ ನೆನಪು, ಸಂಗಮಿಸದ ನದಿಗಳು’ ಅವರ ಪ್ರಮುಖ ಕಾದಂಬರಿಗಳು. ...

READ MORE

Related Books