ಅಂಚು

Author : ಎಸ್.ಎಲ್. ಭೈರಪ್ಪ

Pages 351

₹ 415.00

Buy Now


Year of Publication: 1990
Published by: ಸಾಹಿತ್ಯ ಭಂಡಾರ
Address: ಶಾಪ್ ನಂ.8, ಜೆಎಂ ಲೇನ್, ಬಳೆಪೇಟೆ, ಬೆಂಗಳೂರು ಕರ್ನಾಟಕ 560053
Phone: 080 2287 7618

Synopsys

ಪ್ರಮುಖ ಕಾದಂಬರಿಕಾರ, ಚಿಂತಕರಾದ ಎಸ್.ಎಲ್. ಭೈರಪ್ಪನವರ ’ಅಂಚು’ ಕಾದಂಬರಿಯು 1990ರಲ್ಲಿ ರಚನೆಯಾಗಿದೆ.

ಜೀವನಪ್ರೀತಿ ಮತ್ತು ಸಾವಿನ ಪ್ರಪಾತಗಳ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಲು ಬೇಕಾದ ಪ್ರೀತಿಯು ಕ್ರೌರ್ಯಕ್ಕೆ ವಿರುದ್ಧ ತೂಕವನ್ನು ಸೃಷ್ಟಿಸುತ್ತದೆ. ಸ್ಥೂಲವಸ್ತುವಿನ ಹಂದರದಲ್ಲಿ ಸ್ಫುಟವಾಗಿ ನಿಲ್ಲುವ ಪಾತ್ರಗಳು, ಮಾನವ ಸನ್ನಿವೇಶಗಳು ಹಾಗೂ ಮನಃಪ್ರವೃತ್ತಿಯ ಗುಹ್ಯಸ್ಥಾನಗಳಿಗೆ ಟಾರ್ಚ್ ಹಾಕಿ ತೋರಿಸುವ ತಂತ್ರವಿಶ್ಲೇಷಣೆಗಳಿಂದ ಬೈರಪ್ಪನವರು ಕಾದಂಬರಿಯಲ್ಲಿ ಹೊಸ ದ್ರವ್ಯ ಹಾಗೂ ವಿಧಾನಗಳನ್ನು ಆವಿಷ್ಕರಿಸಿದ್ದಾರೆ.

ಕಾದಂಬರಿಯಲ್ಲಿ ಎರಡು ಪಾತ್ರಗಳು ವಿವಿಧ ಸಂಧರ್ಭಗಳಲ್ಲಿ ಅನುಭವಿಸುವ ಮಾನಸಿಕ ಎರುಪೇರುಗಳನ್ನು, ಭಾವನತ್ಮಕ ಹೋರಾಟವನ್ನು, ನೈತಿಕ ಯುದ್ದವನ್ನು ಕಾದಂಬರಿಯು ಬಹುಮುಖ್ಯವಾಗಿ ಕಟ್ಟಿಕೊಡುತ್ತದೆ. ಇದರ ಜೊತೆಗೆ ಕಾದಂಬರಿಯ ಅನೇಕ ಕಡೆಗಳಲ್ಲಿ ಮೈಸೂರಿನ  ಸುಂದರ ಚಿತ್ರಣವನ್ನು ಕಾದಂಬರಿ ಬಿಚ್ಚಿಡುತ್ತದೆ.

About the Author

ಎಸ್.ಎಲ್. ಭೈರಪ್ಪ
(20 August 1931)

ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ...

READ MORE

Related Books