ಔದಾರ್ಯದ ಉರುಳಲ್ಲಿ

Author : ಶಿವರಾಮ ಕಾರಂತ

Pages 466

₹ 380.00
Year of Publication: 2018
Published by: ಐಬಿಎಚ್‌ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone:  080 2667 6003

Synopsys

‘ಔದಾರ್ಯದ ಉರುಳಲ್ಲಿ’ ಎಂಬುದು ಶಿವರಾಮ ಕಾರಂತರ ಕಾದಂಬರಿ. ರಾಜಕೀಯ ಕಥಾನಕವನ್ನು ಒಳಗೊಂಡಿದೆ. ಸ್ವಾತಂತ್ಯ್ರ ಹೋರಾಟದ ನಾಯಕರು ಎನಿಸಿಕೊಂಡವರು ತಮ್ಮ ದ್ವಿಮುಖ ನೀತಿಯನ್ನು ತೋರಿಸುತ್ತಾರೆ. ಇಂತಹವರ ಮುಖವಾಡವನ್ನು ಈ ಕಾದಂಬರಿಯು ಬಯಲು ಮಾಡುತ್ತದೆ. 

ಮಹಾತ್ಮ ಗಾಂಧೀಜಿಯ ಸ್ವಾತಂತ್ಯ್ರ ಹೋರಾಟದಲ್ಲಿ ಧುಮುಕುವ ರಾಧಾಕೃಷ್ಣ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಾನೆ. ಆದರೆ, ಗೆಳೆಯ ಸುಖಾರಾಮ ಮಾತ್ರ ಶಾಲಾ ಶಿಕ್ಷಕನಾಗಿರುತ್ತಾನೆ. ಮಂಗಳೂರಿಗೆ ಗಾಂಧೀಜಿ ಬಂದಾಗ ‘ಸರ್ಕಾರದ ದಾಸ್ಯಕ್ಕಿಂತ ಮಹಾಪರಾಧವಿಲ್ಲ’ ಎಂಬ ಘೋಷಣೆ ಮೊಳಗಿರುತ್ತದೆ. ಅದಕ್ಕೆ ಮಾರು ಹೋಗುವ ರಾಧಾಕೃಷ್ಣ, ರಾಷ್ಟ್ರೀಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾನೆ. ಜನರನ್ನು ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಊರೂರು ಅಲೆಯುತ್ತಾನೆ. ಇದರಿಂದ, ಗೆಳೆಯರಾದ ಸದಾನಂದ ಹಾಗೂ ಸುಖಾರಾಮ ಅವರಿಗೆ ಸುಸ್ತಾಗಿ ಕೊನೆಗೆ ದೇಶಸೇವೆಗಾಗಿ ಸಂಗ್ರಹಿಸಿದ್ದ ಹಣದೊಂದಿಗೆ ಪರಾರಿಯಾಗುತ್ತಾರೆ. ರಾಧಾಕೃಷ್ಣನಿಗೆ ಸುಸ್ತಾದರೂ ಹೋರಾಟದಲ್ಲಿರುತ್ತಾನೆ. ಈ ಮಧ್ಯೆ, ಮಂಜಯ್ಯನ ಮೂಲಕ ಸತ್ಕಳ ಅವಳೊಂದಿಗೆ ಮದುವೆಯಾಗುತ್ತದೆ. ಇದಕ್ಕೆ ತಂದೆಯ ಒಪ್ಪಿಗೆ ಇರಲಿಲ್ಲ.

ಮುಂದೊಂದು ದಿನ ಮಂಗಳೂರಿನಲ್ಲಿ ಜೋರು ಮಳೆ ಸುರಿಯಲಾರಂಭಿಸಿ, ಹಳ್ಳಿಗಳನ್ನು ಕೊಚ್ಚಿಕೊಂಡು ಹೋಗುತ್ತದೆ. ಅಲ್ಲಿ ಅನಾಥ ಮಗು ಈತನಿಗೆ ಸಿಕ್ಕು ಅದರ ನಿರ್ವಹಣೆಯನ್ನೂ ಹೊರುತ್ತಾನೆ. ಆದರೆ, ಗಂಡನ ಸತತ ಸಂಚಾರ, ಸಮಾಜ ಸೇವೆ ಇತ್ಯಾದಿಯಿಂದ ಬೇಸತ್ತಿದ್ದ ಪತ್ನಿಯು ತವರಿಗೆ ಹೋದವಳು ತಿರುಗಿ ಬರುವುದಿಲ್ಲ. ಜ್ವರ ಬಂದು ಮಗು ಸಾಯುತ್ತದೆ. ಇದರಿಂದ, ರಾಧಾಕೃಷ್ಣನ ದುಃಖ ಇಮ್ಮಡಿಗೊಳ್ಳುತ್ತದೆ. ಈ ಮಧ್ಯೆ ಹತ್ತು ಹಲವು ಅವಾಂತರಗಳು ಜರುಗುತ್ತವೆ. ಬದುಕು ಸುಧಾರಿಸಿಕೊಳ್ಳಲು ಮುಂಬೈಗೆ ತೆರಳುತ್ತಾನೆ. ಮತ್ತೇ, ಸ್ವಾತಂತ್ಯ್ರ ಹೋರಾಟದ ಗದ್ದಲ ಕೇಳಿ ಬರುತ್ತದೆ. ಮತ್ತೇ ಹೋರಾಟದಲ್ಲಿ ಪಾಲ್ಗೊಳ್ಳುತ್ತಾನೆ. ಹೋರಾಟದ ನೆಪದಲ್ಲಿ ನಕಲಿ ಹೋರಾಟಗಾರರಿರುವುದನ್ನು ಕಂಡು ಬೇಸರಗೊಳ್ಳುತ್ತಾನೆ. ‘ಇಂತಹ ಜನರೇ ತುಂಬಿರುವ ದೇಶದಲ್ಲಿ ಯಾವ ಹಿರಿಯ ಆಸೆಯೂ ಕೈಗೂಡುವ ಸಾಧ್ಯತೆಗಳಿಲ್ಲ. ದೇಶ ದೊಡ್ಡದಾಗಬೇಕಾದರೆ ಊರಿನ ಜನರು ದೊಡ್ಡವರಿರಬೇಕು. ನಮ್ಮಲ್ಲಿ ಅದೇ ಕಾಣಿಸದಾಗಿದೆ. ನಮ್ಮ ಶೀಲವೇ ನಷ್ಟವಾಗಿರುವಾಗ ದೇಶದ ಬಗ್ಗೆ ನಾವೆಷ್ಟು ಹೆಮ್ಮೆ ತಾಳಿದರೇನು? ಎಂಬ ತೀರ್ಮಾನಕ್ಕೆ ಬರುತ್ತಾನೆ. ಆದರೂ, ನೈಜ ಹೋರಾಟಗಾರ ಮಾತ್ರ ತನ್ನ ಕರ್ತವ್ಯವನ್ನು ಮಾಡಿ ಮುಗಿಸುತ್ತಾನೆ ಎಂಬ ಸಂದೇಶದೊಂದಿಗೆ ಈ ಕಾದಂಬರಿ ಮುಕ್ತಾಯಗೊಳ್ಳುತ್ತದೆ. .  

:ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1947ರಲ್ಲಿ (ಪುಟ:623) ಈ ಕಾದಂಬರಿಯು ಮೊದಲ ಬಾರಿಗೆ ಪ್ರಕಟಿಸಿತ್ತು. 

 

 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books