ಸಾವಿನ ದಶಾವತಾರ

Author : ಕೆ. ಸತ್ಯನಾರಾಯಣ

Pages 180

₹ 150.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕಥೆಗಾರ, ಲೇಖಕ ಕೆ. ಸತ್ಯನಾರಾಯಣರ ಕೃತಿ ’ಸಾವಿನ ದಶಾವತಾರ’. ಕನ್ನಡದ ಮಟ್ಟಿಗಂತೂ ಒಂದು ಹೊಸ ಕಾದಂಬರಿಯ ಮೀಮಾಂಸೆಯನ್ನು ತೆರೆದಿಡುತ್ತದೆ.

ಚಿಕಿತ್ಸಕವಾದ ನಿರೂಪಣೆಯ ಕ್ರಮವನ್ನು ಈ ಕೃತಿಯಲ್ಲಿ ಕಟ್ಟಿದ್ದಾರೆ. ಸತ್ಯನಾರಾಯಣರ ಕತೆಯ ವಿನ್ಯಾಸವನ್ನು ಬಿಟ್ಟು ಮಾತುಕತೆಯ ವಿನ್ಯಾಸವನ್ನು ನೆಚ್ಚಿಕೊಂಡಿರುವಂಥದ್ದು. ಈ ಕಾದಂಬರಿ ಕತೆಯ ಹಂಗನ್ನು ಬಿಟ್ಟಿದವಂಥದ್ದು. ಕೃತಿಯ ವಸ್ತು ವಿಷಯವೂ ಕೂಡ ಕತೆಯ ಮಿತಿಯನ್ನು ಹಿಡಿದಿಟ್ಟಿದೆ.  ತನ್ನ ಜೀವನದ ಬಗ್ಗೆ ಹೇಳಿಕೊಳ್ಳುವ ವಿಚಾರಗಳನ್ನು ಒಂದರ ನಂತರ ಒಂದನ್ನು ಜೋಡಿಸಿ ನೋಡಿದಾಗ ಅವನ ಜೀವನವನ್ನು ನಾವೇ ಚಿಕಿತ್ಸಕವಾಗಿ ನೋಡಲು ಸಾಧ್ಯವಾಗುತ್ತವೆ. ಕಾದಂಬರಿಯ ನಿಜವಾದ ಕಸುಬುಗಾರಿಕೆ ಇರುವುದು ಒಂದು ಗಡುಸಾದ, ಅನುಭವ ನಿಷ್ಠವಾದ, ಸಹಜ ದನಿಯಲ್ಲಿ. ಅದರಲ್ಲಿ ಒಂದು ಗಹನವಾದ ವಿಷಣ್ಣತೆ ಇದೆ. ಆದರೆ ಅದು ಸೆಂಟಿಮೆಂಟಲ್ ಆದದ್ದಲ್ಲ. ಸತ್ಯನಾರಾಯಣರಲ್ಲಿ ಕಾಣುವ ಒಂದು ಅಂಶವೆಂದರೆ ಫಿಲಾಸಫಿಕಲ್ ಸೆಂಟಿಮೆಂಟಲಿಸ್ಟ್ ಆದ ಧ್ವನಿಯನ್ನು ಓದುಗರು ಗ್ರಹಿಸಬಹುದು. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Conversation

Related Books