ಉತ್ತರ

Author : ಸುಪ್ರೀತ್ ಕೆ ಎನ್

Pages 270

₹ 250.00




Year of Publication: 2021
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: #745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್ ರಾಜಾಜಿನಗರ, ಬೆಂಗಳೂರು- 560010
Phone: 9945939436

Synopsys

‘ಉತ್ತರ’ ಸುಪ್ರೀತ್ ಕೆ.ಎನ್ ಅವರ ಕಾದಂಬರಿ. ಕನ್ನಡದ ಭರವಸೆಯ ಕಾದಂಬರಿಕಾರರಲ್ಲಿ ಒಬ್ಬರಾದ ಸುಪ್ರೀತ್ ತಮ್ಮ ಪ್ರತಿ ಕೃತಿಯನ್ನೂ ಅಧ್ಯಾತ್ಮದ ಅಡಿಪಾಯದಲ್ಲೇ ರಚಿಸಿದರೂ, ಪ್ರತಿ ಕೃತಿಯಲ್ಲೂ ಅಧ್ಯಾತ್ಮದ ಬೇರೆ ಬೇರೆ ಆಯಾಮಗಳನ್ನು ಪರಿಚಯಿಸುತ್ತಾರೆ. ಈ ‘ಉತ್ತರ’ ಕಾದಂಬರಿಯ ಮೂಲ ವಸ್ತು 'ನೋವು'. ಕಥನಾಯಕ ಸ್ಕಂದ ನೋವಿನ ಪರಿಸ್ಥಿತಿಯೊಂದರಲ್ಲಿ ಸಿಲುಕಿದಾಗ, ಮನುಷ್ಯನಿಗೆ ನೋವು ಯಾಕೆ ಕಾಡುತ್ತದೆ? ನೋವಿನ‌ ಮೂಲವೇನು? ನಮ್ಮನ್ನು ಕಾಡುವ ನೋವಿನಿಂದ ಹೇಗೆ ಹೊರಬರಬೇಕು? ಎನ್ನುವಂತಹ ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಉತ್ತರ ಹುಡುಕುತ್ತಾ ಆಶ್ರಮವೊಂದಕ್ಕೆ ತೆರಳಿ ಅಲ್ಲಿ ಅಧ್ಯಾತ್ಮ ಸಾಧನೆಗಳನ್ನು ಮಾಡುತ್ತಾ ತನ್ನ ನೋವಿನ ಮೂಲ ಹುಡುಕುತ್ತಾನೆ. ಉತ್ತರ ಹುಡುಕುವ ಈ ಹಾದಿಯಲ್ಲಿ ಕರ್ಮ ಸಿದ್ಧಾಂತಗಳ ಹಲವು ಮಜಲುಗಳ ಪರಿಚಯವು ಆಗುತ್ತದೆ.

About the Author

ಸುಪ್ರೀತ್ ಕೆ ಎನ್
(04 October 1991)

ಸುಪ್ರೀತ್ ಕೆ.ಎನ್ ಮೂಲತಃ ಬೆಂಗಳೂರಿನವರು. 1991 ಅಕ್ಟೋಬರ್‍ 4 ರಂದು ಜನಿಸಿದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ  ಅವರು ವಾಹಿನಿಯೊಂದರ ಸಾಮಾಜಿಕ ಜಾಲತಾಣ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲೇ ’ಕಾದಂಬರಿ’, ಸ್ಟ್ಯಾಪಿಂಗ್ ಮತ್ತು ಮಂದಿರ ಮಸೀದಿ ಕಾದಂಬರಿಗಳನ್ನು ರಚಿಸಿದ್ದ ಸುಪ್ರೀತ್, ನಂತರದ ದಿನಗಳಲ್ಲಿ ತರ್ಕ ಮತ್ತು ಸಾವು ಕೃತಿಗಳನ್ನು ರಚಿಸಿದರು. ಆಧ್ಯಾತ್ಮ, ತತ್ವಶಾಸ್ತ್ರ ಮತ್ತು ವಿಜ್ಞಾನ ವಿಷಯಗಳಲ್ಲಿ ಇವರಿಗೆ ಅಪಾರವಾದ ಆಸಕ್ತಿ. ಇವರು ಅವರ ಕಾದಂಬರಿಗಳಲ್ಲಿ ಈ ತಲೆಮಾರಿನ ಹುಡುಗ ಹುಡುಗಿಯರ ಮುಂದುವರೆದ ಜೀವನ ಭಾಗವನ್ನು ತೆರೆದಿಡುತ್ತಿದ್ದಾರೆ. ತರ್ಕ ಕಾದಂಬರಿಯಲ್ಲಿ ಶ್ರೀಚಕ್ರ ಯಂತ್ರ, ಫಿಸಿಕ್ಸ್, ಮಂತ್ರಗಳ ಹಿಂದಿರುವ ವಿಜ್ಞಾನ, ...

READ MORE

Conversation

Related Books