ಕೆಂಪು ಹಳದಿ ಹಸಿರು

Author : ಜಯಶ್ರೀ ದೇಶಪಾಂಡೆ

Pages 104

₹ 90.00
Published by: ನ್ಯೂ ವೇವ್ ಬುಕ್ಸ್

Synopsys

ಜಯಶ್ರೀ ದೇಶಪಾಂಡೆ ಅವರ ಕಾದಂಬರಿ ಕೆಂಪು ಹಳದಿ ಹಸಿರು. ಕೃತಿಗೆ ಬೆನ್ನುಡಿಯನ್ನು ರಾಮನಾಥ ರವರು ಬರೆದಿದ್ದು, ‘ಈ ಕಾದಂಬರಿ ಕೈಗೆತ್ತಿಕೊಂಡರೆ, ಸಂಪೂರ್ಣ ಹಸಿರು ನಿಶಾನೆಯಲ್ಲಿ ಸಾಗಿ ಗುರಿ ಮುಟ್ಟಿಸುತ್ತದೆ. ಹಾಗಿದೆ ಈ ಕತೆಯ ಓಘ !’ ಎಂಬುದಾಗಿ ಹೇಳಿದ್ದಾರೆ. ಈ ಸಂಕಲನದಲ್ಲಿ ಲೇಖಕಿ ನಮ್ಮ ಬದುಕನ್ನು ಟ್ರಾಫಿಕ್ ಸಿಗ್ನಲಿಗೆ ಹೋಲಿಸಿದ್ದಾರೆ. ಈ ಕೆಂಪು ಹಳದಿ ಮತ್ತು ಹಸಿರು ನಮ್ಮ ಬದುಕಿನಲ್ಲಿ ಬರುವಂತಹ ಕೆಲವು ಘಟಗಳು. ಒಮ್ಮೆ ನಿಲ್ಲು ಎಂದು ತೋರುವ ಕೆಂಪು ನಿಶಾನೆ, ನಂತರ ಸಾವರಿಸಿಕೊಂಡು ಎದ್ದೇಳು ಎನ್ನುವ ಹಳದಿ ನಿಶಾನೆ, ಕೊನೆಗೆ ಬಂದದ್ದು ಬರಲಿ ಬದುಕಿನ ಗಾಡಿ ಓಡಿಸು ಎನ್ನುವ ಹಸಿರು ನಿಶಾನೆ. ಒಂದು ಸಕಾರಾತ್ಮಕ ಸಾರ್ಥಕ ಬದುಕು ಹೇಗೆ ಬದುಕಬೇಕು ಎನ್ನುವ ಕಥಾವಸ್ತು ಹೊಂದಿರುವ ಕಾದಂಬರಿ. ಜಯಶ್ರೀ ದೇಶಪಾಂಡೆಯವರು ಪ್ರಕೃತಿ ಪ್ರಿಯರು. ಅವರ ಭಾಷೆಯ ಶೈಲಿ ಮತ್ತು ವರ್ಣನೆಯ ಶೈಲಿ ವಿಭಿನ್ನವಾಗಿದೆ. ಅದು ಹಸಿರಿನಿಂದ ಸಮೃದ್ದವಾದ ಮಹಾರಾಷ್ಟ್ರದ ಮಹಾಬಲೇಶ್ವರ ಬೆಟ್ಟವೇ ಇರಲಿ ಅಥವಾ ನಮ್ಮ ಕರ್ನಾಟಕದ ಹಂಪೆಯ ಒಣ ಪ್ರದೇಶವೇ ಇರಲಿ ಅವರ ವರ್ಣನೆ ಮಾತ್ರ ಅದ್ಭುತ. ಇಲ್ಲಿ ಬರುವ ಎರಡು ಮಹಿಳಾ ಪಾತ್ರಗಳು - ಸೀಮಾ ಮತ್ತು ಪಾರ್ವತಿ. ಇಬ್ಬರೂ ವಿಧವೆಯರು. ಈ ಕಾದಂಬರಿ " ತರಂಗ " ದಲ್ಲಿ 2000 ಇಸವಿಯಲ್ಲಿ ಧಾರವಾಹಿಯಾಗಿ ಮೂಡಿ ಬಂದು ಬಹಳ ಜನಪ್ರಿಯವಾಗಿತ್ತು.

About the Author

ಜಯಶ್ರೀ ದೇಶಪಾಂಡೆ

ಲೇಖಕಿ ಜಯಶ್ರೀ ದೇಶಪಾಂಡೆ  ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ.  ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ   ಕೆಂದಾಯಿ  ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ)  ಹೌದದ್ದು ಅಲ್ಲ‌ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು‌ (ವಿಜಯ ಕರ್ನಾಟಕ),  ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ)   ಇವು ಧಾರಾವಾಹಿಯಾಗಿ ...

READ MORE

Related Books