ಲಕ್ಷ್ಮೀ ಪೂಜೆ

Author : ಬೀchi

Pages 208

₹ 70.00
Year of Publication: 2012
Published by: ಸಮಾಜ ಪುಸ್ತಕಾಲಯ
Address: ಸಮಾಜ ಪುಸ್ತಕಾಲಯ, ಶಿವಾಜಿ ರೋಡ್, ಧಾರವಾಡ
Phone: 8762102715

Synopsys

ಕೆಟ್ಟ ಕೃತ್ಯ ಮಾಡುವ ವ್ಯಕ್ತಿಗಳೂ ದೇವರನ್ನು ಪೂಜಿಸುವ ವಿಡಂಬನೆಯನ್ನು ಹೊಂದಿದ ಕೃತಿ ಇದು. ಹಾಗೆಂದೇ ಕಾದಂಬರಿಯ ಶೀರ್ಷಿಕೆಯೂ ವ್ಯಂಗ್ಯದಿಂದ ಕೂಡಿದೆ. ಅಧಿಕಾರ ಹಿಡಿಯುವವರ ಲಂಪಟತನ, ಧನದಾಹವನ್ನು ಕೃತಿ ಚಿತ್ರಿಸುತ್ತದೆ. ’ಸರಸ್ವತಿ ಸಂಹಾರ’ದ ಮುಂದುವರಿಕೆಯಂತೆಯೂ ತೋರುವ ಕೃತಿ ವಸ್ತುವಿನ ಕಾರಣಕ್ಕೆ ಭಿನ್ನವಾಗಿಯೇ ನಿಲ್ಲುತ್ತದೆ. 

About the Author

ಬೀchi
(23 April 1913 - 07 December 1980)

'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...

READ MORE

Related Books