ನಮ್ಮ ಮನೆ ಬೆಳಕು

Author : ಉಷಾ ನವರತ್ನರಾಂ

Pages 158

₹ 100.00




Year of Publication: 2018
Published by: ಇಂದಿರಾ ಪ್ರಕಾಶನ

Synopsys

ಉಷಾ ನವರತ್ನರಾಮ್ ಅವರ ನಮ್ಮ ಮನೆ ಬೆಳಕು, ಮುದ್ದಾದ ಪ್ರೇಮಿಗಳ ಕಥೆ, ಒಳಗೆ ಇರುವ ಪ್ರೀತಿಯ ಹೇಳಿಕೊಳ್ಳದೆ, ನೋವು ಅನುಭವಿಸುತ್ತಾ, ಎದುರುಬದುರಾದಾಗ ಸಿಡುಕುತ್ತಾ, ಕೊನೆಗೂ ಪ್ರೀತಿಯ ಅರಿತು ಒಂದಾದ ಸುಂದರ ಕಥೆ... ನಾಯಕ ವಿಶಾರದ, ನಾಯಕಿ ದೀಕ್ಷಾ ಆದರು, ಅವರಷ್ಟೆ ಪ್ರಮುಖ ಪಾತ್ರ ಕುಮುದಾ ಹಾಗು ಸೋಮಶೇಖರ, ಈ ಕಾದಂಬರಿ ಯಲ್ಲಿ ಪ್ರತಿ ಪಾತ್ರಗಳು ಮುಖ್ಯವೇ. ಕಾವೇರಿ, ಗಣಪತಿ, ಪಾರ್ಥ ಸಾರಥಿ,ದೀವಾಕರ, ಶೈಲಾ, ವಿನಿತಾ ಎಲ್ಲರೂ ಕಥೆಯ ತಿರುವಿಗೆ ಕಾರಣ ಆದವರೇನೆ…. ಪ್ರತಿ ಪಾತ್ರಕ್ಕೂ ನ್ಯಾಯ ಒದಗಿಸಿರುವ ಲೇಖಕಿ, ದೀಕ್ಷಾ ವಿಶಾರದ ನ ಮನಸಿನ ತೊಳಲಾಟವನ್ನು ಚೆನ್ನಾಗಿ ಕಟ್ಟಿಕೊಟ್ಟಿಕೊಟ್ಟಿದ್ದಾರೆ. ಇದೆಲ್ಲದರ ಜೊತೆಗೆ ದೀಕ್ಷಾಳ ತಾಯಿ ಕಾವೇರಿಯ ಅಹಂಕಾರ ಮುರಿದು ಬದಲಾಗಿದ್ದರೆ ಚಂದ ಇತ್ತು ಎನಿಸಿಬಿಡುತ್ತದೆ.

About the Author

ಉಷಾ ನವರತ್ನರಾಂ
(23 November 1939 - 10 October 2000)

ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...

READ MORE

Related Books