ಅಲೆ ನೆಲೆ

Author : ವಾಣಿ

Pages 228

₹ 190.00
Year of Publication: 1995
Published by: ವಿಸ್ಮಯ ಪಬ್ಲಿಕೇಷನ್ಸ್ಸ್
Address: #892, 15 ನೇ ಅಡ್ಡರಸ್ತೆ, 1 ನೇ ಹಂತ, ಚಂದ್ರಾ ಲೇಔಟ್, \nಬೆಂಗಳೂರು - 72
Phone: 9916916828

Synopsys

‘ಅಲೆ ನೆಲೆ’ ಕಾದಂಬರಿಯು ಒಂದು ಸರಳ ಹಾಗೂ ಸುಂದರ ಸಾಮಾಜಿಕ ಕಾದಂಬರಿಯಾಗಿದ್ದು ಒಂದು ಕುಟುಂಬದ ಸಾಂಸಾರಿಕ ಬದುಕನ್ನು ಚಿತ್ರಿಸುತ್ತದೆ. ಪ್ರಸ್ತುತ ನೆಲೆಸಿರುವ ಅತೀ ಆಧುನಿಕ ಬೆಂಗಳೂರಿನಲ್ಲಿ ಈಗ್ಗೆ ದಶಕಗಳ ಹಿಂದಿನ ಹಳೆಯ ಜನ ಜೀವನ ಹೇಗಿತ್ತು ಎಂಬುದು ನನಗೆ ಸದಾ ಕುತೂಹಲ ಹುಟ್ಟಿಸುವ ಸಂಗತಿ. ಬೆಂಗಳೂರಿನ ಚಿತ್ರಣ ಇರುವ ಕಾದಂಬರಿಗಳಲ್ಲಿ ಅದರ ಹುಡುಕಾಟ ನಡೆಸುತ್ತಿರುತ್ತೇನೆ. ಅದರದ್ದೊಂದು ಪಾರ್ಶ್ವ ನೋಟ ಇಲ್ಲಿ ಲಭ್ಯವಾಯಿತು. ಕೃಷ್ಣಪ್ಪನಂತಹ ಸದ್ಗೃಹಸ್ಥ ವ್ಯಕ್ತಿ, ಅವರ ಪತ್ನಿ ಗೃಹಿಣಿಯಾದ ಮೂರು ಮಕ್ಕಳ ತಾಯಿ ಸುನಂದಾ, ಕೃಷ್ಣಪ್ಪನ‌ ಸೋದರ ಮಾವ ಶಿವರಾಮಯ್ಯ ಎಂಬ ಅಂತಃಕರಣವುಳ್ಳ ಪರೋಪಕಾರಿ, ಮನೆ ತುಂಬಾ ಜನರಿದ್ದರೂ ಒಂಟಿಯಾದ ಶಿವರಾಮಯ್ಯರ ಸ್ನೇಹಿತ ಮಾನವೀಯ‌ ಹೃದಯದ ರಾಯರು... ಹೀಗೆ ಅದರ್ಶಯುತ ಪಾತ್ರಗಳು ಹಲವಿವೆ.

About the Author

ವಾಣಿ

ವಾಣಿ- ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಎಸ್.ಎಸ್.ಎಲ್.ಸಿ. ತನಕ ಶಿಕ್ಷಣ ಪಡೆದಿದ್ದ ಅವರು 1917 ಮೇ 12ರಂದು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಂದೆ ಟಿ. ನರಸಿಂಗರಾಯರು, ತಾಯಿ ಹಿರಿಯಕ್ಕಮ್ಮ. ಬಿಡುಗಡೆ, ಎರಡು ಕನಸು, ಶುಭ ಮಂಗಳ, ಕಾವೇರಿಯ ಮಡಿಲಲ್ಲಿ, ಹೊಸ ಬೆಳಕು, ಅನಿರೀಕ್ಷಿತ, ಪ್ರೇಮ ಸೇತು, ತ್ರಿಶೂಲ, ಸುಲಗ್ನ ಸಾವಧಾನ, ನೆರಳು ಬೆಳಕು, ಚಿನ್ನದ ಪಂಜರ, ಮನೆಮಗಳು, ಅವಳ ಭಾಗ್ಯ, ಅಂಜಲಿ, ಬಾಳೆಯ ನೆರಳು, ಹೂವು ಮುಳ್ಳು, ಬಲೆ, ಅಲೆನೆಲೆ, ಹಾಲು ಒಡೆದಾಗ ಇವರ ಜನಪ್ರಿಯ ಕಾದಂಬರಿಗಳು. ಅವರ ಹಲವು ಕಾದಂಬರಿಗಳು ಚಲನಚಿತ್ರವಾಗಿ ಪ್ರಸಿದ್ದಿಯನ್ನು ಗಳಿಸಿತು. ಕಸ್ತೂರಿ, ನಾಣಿಯ ಮದುವೆ, ಬಾಬು ...

READ MORE

Related Books