ಸಮೀಕ್ಷೆ (ಕಾದಂಬರಿ)

Author : ಶಿವರಾಮ ಕಾರಂತ

Pages 276

₹ 150.00




Year of Publication: 2016
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಸಮೀಕ್ಷೆ-ಡಾ. ಶಿವರಾಮ ಕಾರಂತರ ಕಾದಂಬರಿ. ಕಾಲೇಜು ಕಲಿಯುತ್ತಿದ್ದ ಹುಡುಗರು ಒಂದಲ್ಲ ಒಂದು ಕನಸನ್ನು ಹೊತ್ತುಕೊಂಡಂತೆ ಕಥಾನಾಯಕ ಶ್ರೀನಿವಾಸನೂ ತನ್ನ ಬದುಕನ್ನು ರೂಪಿಸಿಕೊಳ್ಳುತ್ತಾನೆ. ಅವನಿಗೆ ತನ್ನ ಸಹಪಾಠಿ ಗೆಳೆಯರು ತಂತಮ್ಮ ಆದರ್ಶಗಳನ್ನು ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆಂಬುದನ್ನು ನೋಡುವ ಕುತೂಹಲವಾಗಿ, ಅವರೆಲ್ಲರ ಜೀವನವನ್ನು ಪರಿಶೀಲಿಸುತ್ತಾನೆ. ಅನೇಕ ವ್ಯಕ್ತಿಗಳ ಜೀವನದರ್ಶನ ಅವನಿಗುಂಟಾಗುತ್ತದೆ. ಅವನು ನಡೆಸಿದ್ದ ಬಾಳಿನ ಸಮೀಕ್ಷೆಯಲ್ಲಿ ಜೀವನದ ಟೊಳ್ಳು-ಗಟ್ಟಿಗಳ ಕಲ್ಪನೆ ಅವನ ಮನಸ್ಸಿಗೆ ಸ್ಪಷ್ಟವಾಗುತ್ತದೆ.

ಶ್ರೀನಿವಾಸ ಉಪಾಧ್ಯಾಯರಾದ ಮೇಲೂ ಮದುವೆ ಮುಂದೂಡಿದ್ದ. ಆದರ್ಶವಾದಿಯಾಗುವ ಬಯಕೆ ಅವನದು. ತಂದೆ ರಾಮಚಂದ್ರನ ಆರೋಗ್ಯ ಹದಗೆಡುತ್ತಾ ಹೋಗುತ್ತದೆ. ಅಂತೂ ಶ್ರೀನಿವಾಸ ಶಾರದೆಯೊಂದಿಗೆ ಮದುವೆಯಾಗುತ್ತಾನೆ. ಆಕೆ ಶ್ರೀಮಂತ ಕುಟುಂಬದಲ್ಲಿ ಬೆಳೆದವಳು. ಈತನೊಂದಿಗೆ ಹೊಂದಿಕೆಯಾಗಳು. ಜೊತೆಗೆ, ಮದುವೆಗೆ ಮುನ್ನ ಆನಂದ ಎಂಬಾತನಲ್ಲಿ ಈಕೆಯ ಮನಸ್ಸಿರುತ್ತದೆ. ಇಂತಹ ಎಲ್ಲ ಗೊಂದಲಗಳು. ಗೆಳೆಯ ವಾಸುದೇವನ ನೆನಪಾಗುತ್ತದೆ. ಸ್ವತಃ ತಾಯಿಯೇ ವೇಶ್ಯಾವಟಿಕೆಗೆ ತಳ್ಳಲು ಬಯಸಿದ್ದನ್ನು ತಿಳಿಸಿ, ರಕ್ಷಣೆ ಕೋರಿ ಬಂದಿದ್ದ ಕುಸುಮೆಯೊಂದಿಗೆ ಮದುವೆಯಾದಾತ-ವಾಸುದೇವ. ಜಾತಿ ಅಡ್ಡ ಬಂದು ಇದೇ ಶ್ರೀನಿವಾಸನು ವಾಸುದೇವನ ನೆರವಿಗೆ ಬಂದು, ಹಿರಿಯರನ್ನು ಒಪ್ಪಿಸುತ್ತಾನೆ. ಗೆಳೆಯ ನರಸಿಂಹನ ಬದುಕು ನೆನಪಾಗುತ್ತದೆ. ಈತ ಬಂಧುಗಳ ಆಸ್ತಿ ಕಬಳಿಸಿರುತ್ತಾನೆ. ನಂತರ, ಅಕ್ಕಲಕೋಟೆಯ ಸ್ವಾಮೀಜಿಯ ಕಳ್ಳ ನಾಟಕ,...ಹೀಗೆ ಬದುಕಿನ ಅಸಹ್ಯತನವನ್ನು ಕಾಣುತ್ತಾನೆ. ಸೂರ ಮತ್ತು ಕಾಳಿ ಎಂಬ ವೃದ್ಧ ಬಡ ದಂಪತಿಯ ಪ್ರಸ್ತಾಪವಾಗುತ್ತದೆ. ಇಂದಿನ ಅನ್ನಕ್ಕಾಗಿ ಮಾತ್ರ ಅವರು ಭಿಕ್ಷೆ ಬೇಡುತ್ತಾರೆ. ತಾವೂ ಕೆಟ್ಟವರಾಗದೇ, ಯಾರಿಗೂ ಕೆಟ್ಟದ್ದು ಬಯಸದೇ  ಇರುವ ಆದರ್ಶಮಯ ಬದುಕು ಅದು. ಕಾಳಿ ಸಾಯುತ್ತಾಳೆ. ಗೆಳೆಯ ವಾಸುದೇವ ಮಾನಸಿಕ ವಿಭ್ರಮೆಗೆ ಒಳಗಾಗಿರುತ್ತಾನೆ. ಕೊನೆಗೆ ಈ ಕಾದಂಬರಿಯು ಪ್ರವಾಹವನ್ನು ಸಾಂಕೇತಿಸಿ, ಉತ್ತಮರು ಮಾತ್ರವೇ ಈ ಪ್ರವಾಹದಲ್ಲಿ ಬದುಕುಳಿಯುತ್ತಾರೆ ಎಂದು ಶ್ರೀನಿವಾಸ ತಿಳಿಯುತ್ತಾನೆ. ಇದಕ್ಕೆ ಪೂರಕವಾಗಿ, ಕಥೆಗಾರ ಶಿವರಾಮ ಕಾರಂತರು ‘ಹೊತ್ತಂತು ಆಗಿಯೇ ಆಗುತ್ತದೆ; ಗೊತ್ತು ಆಗುವುದಕ್ಕೆ ಎಷ್ಟೆಲ್ಲ ಕಷ್ಟ’ ಎಂದು ಶ್ರೀನಿವಾಸ ಮನದಲ್ಲೇ ಹೇಳಿಕೊಳ್ಳುವ ಮಾತು ಇಡೀ ಕಾದಂಬರಿಯ ಅರ್ಥಪೂರ್ಣತೆಯನ್ನು ಹೆಚ್ಚಿಸುತ್ತದೆ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1956 ರಲ್ಲಿ (ಪುಟ: 254) ಈ ಕಾದಂಬರಿಯು ಮೊದಲ ಬಾರಿಗೆ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books