ಬಂಡಾಯ

Author : ವ್ಯಾಸರಾಯ ಬಲ್ಲಾಳ



Year of Publication: 1985
Published by: ಗೀತಾ ಬುಕ್ ಹೌಸ್
Address: ಮೈಸೂರು

Synopsys

‘ಬಂಡಾಯ’ ವ್ಯಾಸರಾಯ ಬಲ್ಲಾಳ ಅವರ ಕಾದಂಬರಿ. ಕಾರ್ಮಿಕ ಚಳವಳಿ ಮತ್ತು ಮಾಲೀಕ- ಉದ್ಯೋಗಿಗಳ ಸಂಘರ್ಷವನ್ನೇ ವಸ್ತುವಾಗಿರಿಸಿ ರಚಿಸಲ್ಪಟ್ಟ ಸಾಹಿತ್ಯ ಕೃತಿಗಳು ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ವಿರಳವಾಗಿದ್ದು, ಅದರಲ್ಲಿ ಈ ಕಾದಂಬರಿ ಪ್ರಮುಖವಾಗಿದೆ. ವ್ಯಾಸರಾಯರ ‘ಬಂಡಾಯ’ ಕಾದಂಬರಿಯು ಕಾರ್ಮಿಕ ಸಂಘಗಳ ಉದ್ದೇಶ, ಅವುಗಳ ಕಾರ್ಯವೈಖರಿ, ನಾಯಕರ ಧೋರಣೆಗಳು ಮತ್ತು ಉದ್ಯೋಗಪತಿಗಳ ಗುರಿಗಳು ಮುಂತಾದ ವಿಷಯಗಳ ಕುರಿತು ಮುಕ್ತ ವಿಶ್ಲೇಷಣೆ ನಡೆಸುವ ರೀತಿ ಅನನ್ಯವಾಗಿದೆ. ಕಾರ್ಮಿಕ ಚಳವಳಿಯಲ್ಲಿ ಸಾಮೂಹಿಕ ಪ್ರತಿಭಟನೆಯೇ ದಾರಿ. ಅಲ್ಲಿ ಹಿಂಸೆಗೆ ಜಾಗವಿರಲಿಲ್ಲವೆಂದಲ್ಲ. ಸಂಘದಲ್ಲಿ ಆಂತರಿಕ ವೈಷಮ್ಯ ಹುಟ್ಟಿದಾಗ ಒಂದು ತಂಡ ತನ್ನ ಪ್ರಾಬಲ್ಯವನ್ನು ತೋರಿಸಲು ಅಥವಾ ಬೆದರಿಕೆ ಹುಟ್ಟಿಸಲು ಇನ್ನೊಂದು ಪಂಗಡದ ಮೇಲೆ ಹಲ್ಲೆ ನಡೆಸಿದ ಸಂದರ್ಭಗಳಿವೆ. ಬಂಡಾಯವನ್ನು ಓದುತ್ತಿದ್ದಂತೆ ಓದುಗರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ.

About the Author

ವ್ಯಾಸರಾಯ ಬಲ್ಲಾಳ
(01 December 1923 - 30 January 2008)

ಆರು ದಶಕಗಳ ಕಾಲ ಸಣ್ಣಕತೆಯ ಪ್ರಕಾರದಲ್ಲಿ ನಿರಂತರವಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡು ಬಂದಿರುವ ಬಲ್ಲಾಳರು ವಸ್ತುವೈವಿಧ್ಯದಲ್ಲಿ, ಅಭಿವ್ಯಕ್ತ ವಿಧಾನದಲ್ಲಿ ಕನ್ನಡ ಕತಾ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ್ದಾರೆ. ಪ್ರಗತಿಶೀಲ ಚಳುವಳಿಯಿರಬಹುದು, ನವೋದಯ ಸಂಪ್ರದಾಯದ ರೀತಿಯಿರಬಹುದು, ನವ್ಯ ಪ್ರಜ್ಞೆಯ ಪ್ರಭಾವವಿರಬಹುದು- ಈ ಎಲ್ಲವನ್ನೂ ತಮ್ಮ ಸೃಜನಶೀಲ ಪಯಣದಲ್ಲಿ ಬಲ್ಲಾಳರು ಮುಖಾಮುಖಿಯಾಗಿದ್ದಾರೆ. ಆದರೆ ಯಾವ ಪಂಥದ ಜೊತೆಗೂ ತಮ್ಮನ್ನು ಅವರು ಸಮೀಕರಿಸಿಕೊಳ್ಳದೆ ಅನನ್ಯವೆಂಬಂತೆ ಬರೆಯುತ್ತಾ ಬಂದಿದ್ದಾರೆ. ಅವರು 1923 ಡಿಸೆಂಬರ್‌ 01ರಂದು ಉಡುಪಿಯಲ್ಲಿ ಜನಿಸಿದರು. ತಂದೆ ರಾಮದಾಸ, ತಾಯಿ ಕಲ್ಯಾಣಿ. ಮುಂಬಯಿ ಮಹಾನಗರದಲ್ಲಿ ಉದ್ಯೋಗವನ್ನರಿಸದ ಅವರು ವಿದೇಶಿ ತೈಲ ಕಂಪನಿ ಒಂದರಲ್ಲಿ ಶೀಘ್ರಲಿಪಿಕಾರರಾಗಿ ...

READ MORE

Awards & Recognitions

Related Books