ಈ ಕಾದಂಬರಿಯ ಕಥಾವಸ್ತು ಅಪಮೌಲ್ಯಗಳಿಗೆ ಬಲಿಯಾದ ನಮ್ಮ ಸಮಾಜ ಜೀವನದ ವಿಡಂಬನೆಯ ವಸ್ತುವುಳ್ಳದ್ದು. ಮಹಾನಗರ ಎಂಬ ಊರಿನ ಮುನಸಿಪಾಲಿಟಿ ರಕ್ಷಿಸುತ್ತ ಬಂದಿರುವ ಒಂದು ಭಾರೀ ಉದ್ಯಾನ ಗುಡ್ಡದ ನಾಲ್ಕು ಸುತ್ತಲೂ ಹಬ್ಬಿದ ಒಮದು ಸುಂದರ ಅರಣ್ಯದಂತಿರುತ್ತದೆ. ಆ ಬೆಟ್ಟದ ಕುಡಿಯಿಂದ ಬಂಡಿಯ ಚಕ್ರದ ಕವೆಗಳಂತೆ ಎಂಟು ದಿಕ್ಕಿಗೆ ಎಂಟು ರಸ್ತೆಗಳನ್ನು ಮಾಡಿ, ಅದರ ಒಂದೊಂದು ಕುಡಿಯಲ್ಲೂ ನಗರಪಿತರ ಪ್ರತಿಮೆ ನಿಲ್ಲಿಸಿದ್ದು, ಅವರೆಲ್ಲ ಮಹಾನ್ ವ್ಯಕ್ತಿಗಳು ಎಂಬ ಪ್ರಸಿದ್ದಿಯಿಂದ ಪ್ರವಾಸಿಗರನ್ನು ಆ ಊರು ಸೆಳೆದಿರುತ್ತದೆ. ಕಾದಂಬರಿಯ ಒಂದು ಪಾತ್ರವಾಗಿರುವ ಲೇಖಕರರೂ ಒಬ್ಬ ಎಳೆಯ ಪ್ರಕರ್ತ ಸ್ನೇಹಿತನನ್ನು ಕೂಡಿಕೊಂಡು, ಆ ಪ್ರತಿಮೆಗಳ – ನಿಜವಾದ ವ್ಯಕ್ತಿಗಳ-ಇತಿಹಾಸವನ್ನು ತಿಳಿಯಲು ಸುತ್ತಾಡಿ, ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಅಗ, ಅವರಿಗೆ ಮತ ಪ್ರಸಿದ್ದ ವ್ಯಕ್ತಿಗಳೆಲ್ಲರೂ ನಿಜಕ್ಕೂ ಒಳ್ಳೆಯ ಕೆಲಸದಿಂದ ಪ್ರಸಿದ್ದರಾದದಲ್ಲ, ಒಂದಲ್ಲ ಒಂದು ರೀತಿಯ ಅಡ್ಡದಾರಿಯ ಮೂಲಕ ಪ್ರಸಿದ್ದಿಯ ಪೈಪೋಟಿಯಲ್ಲಿ ಯಶಸ್ಸು ಪಡೆದವರೆಂಬ ಸತ್ಯಸಂಗತಿ ತಿಳಿದು ನಿರಾಶೆಯಾಗುತ್ತದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE