ಪ್ರೀತ್‌ಸು

Author : ರಾಜೀವ ನಾರಾಯಣ ನಾಯಕ

Pages 144

₹ 144.00
Year of Publication: 2022
Published by: ವೀರಲೋಕ ಬುಕ್ಸ್
Address: ಬೆಂಗಳೂರು

Synopsys

ಪ್ರೀತ್‌ಸ್‌ ರಾಜೀವ ನಾರಾಯಣ ನಾಯಕ ಅವರ ಕಾದಂಬರಿಯಾಗಿದೆ. ಅಪರೂಪಕ್ಕೆ ಕತೆಗಳನ್ನು ಬರೆದುಕೊಂಡಿದ್ದ ನಾನು ಕಾದ೦ಬರಿ ಬರೆಯುವಂತಾದದ್ದು ನನಗೇ ಅಚ್ಚರಿಯೆನಿಸುತ್ತದೆ. ಏಕೆಂದರೆ ದೀರ್ಘ ಬರವಣಿಗೆಗೆ ಬೇಕಾದ ತಾಳ್ಮೆ ಮತ್ತು ತಯಾರಿ ನನ್ನಲ್ಲಿರಲಿಲ್ಲ. ಕಾದಂಬರಿ ಬರೆಯುವ ಯೋಚನೆ ಅಥವಾ ಯೋಜನೆಗಳೂ ಇರಲಿಲ್ಲ. ಇದು ಶುರುವಾದದ್ದು ಒಂದು ಕತೆಯಾಗಿಯೇ, ನನ್ನ ಕತೆಗಳು ಪ್ರಕಟವಾದಾಗೆಲ್ಲ ತಪ್ಪದೇ ಓದುವ ಆತ್ಮೀಯರೊಬ್ಬರು 'ಒಂದು ಪ್ಯೂರ್ ಲವ್ ಸ್ಟೋರಿ ಬರಿ, ಎಂದು ಯಾವಾಗಲೂ ಹೇಳುತ್ತಿದ್ದರು. ಅವರ ಪ್ರೀತಿಯ ವರಾತೆ ಇದನ್ನು ಬರೆಯಲು ಹಚ್ಚಿದ್ದು ನಿಜ. ನಾಗತಿಹಳ್ಳಿ ಚಂದ್ರಶೇಖರ್ ಅವರ ಕತೆಯೊಂದು ಇದಕ್ಕೆ ಪ್ರೇರಣೆ ನೀಡಿದ್ದೂ ನಿಜ. ಒಂದು ಸಣ್ಣ ಕತೆಯಿಂದ ಶುರುವಾದ ಬರವಣಿಗೆ ನೀಳತೆಯಾಗಿ, ಕಾದಂಬರಿ ಸ್ವರೂಪವನ್ನೇ ಪಡೆದುಕೊಳ್ಳಲು ಬಹುಶ: ಕಾರವಾರದ ಕಡಲೂ ಕಾರಣವಾಗಿರಬಹುದು ಎಂದು ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ರಾಜೀವ ನಾರಾಯಣ ನಾಯಕ

ಲೇಖಕ ರಾಜೀವ ನಾರಾಯಣ ನಾಯಕ ಅವರು ಮುಂಬೈ ಕನ್ನಡಿಗ. ಬರವಣಿಗೆಯ ಮೇಲೆ ಹಿಂದಿನಿಂದಲೂ ಆಸಕ್ತಿ ಬೆಳೆಸಿಕೊಂಡು ಬಂದಿದ್ದು, ಇವರು ರಚಿಸಿದ ಕತೆಗಳು ಹಲವಾರು ಕಥಾಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಅವೆಲ್ಲವನ್ನೂ ಸೇರಿಸಿ ʻಗುರ್ಬಾಣಕ್ಕಿʼ ಮತ್ತು ‌ʻಲಾಸ್ಟ್‌ ಲೋಕಲ್ ಲೋಸ್ಟ್ ಲವ್‌ʼ ಎಂಬ ಎರಡು ಕಥಾಸಂಕಲನಗಳನ್ನು ಹೊರತಂದಿದ್ದಾರೆ.  ಸಾಹಿತ್ಯದ ಜೊತೆ ರಂಗಭೂಮಿ ಇವರ ಮತ್ತೊಂದು ಆಸಕ್ತಿದಾಯಕ ಕ್ಷೇತ್ರವಾಗಿದೆ.    ...

READ MORE

Related Books