ಸಾಂಸಾರಿಕ ಜಂಜಡದಿಂದ ಆಚೆಗೆ ಬಂದ ವ್ಯಕ್ತಿಯೊಬ್ಬ ಮತ್ತೆ ನುಷ್ಯ ಸಹಜ ದೌರ್ಬಲ್ಯಕ್ಕೆ ಒಳಗಾಗಿ ಬಳಿಕ ಆತ್ಮಶೋಧನೆ ಮಾಡಿಕೊಂಡು ನಿಷ್ಕಪಟತನದಿಂದ ನಡೆದುಕೊಂಡ ನಿದರ್ಶನ ಕಾದಂಬರಿಯಲ್ಲಿದೆ.
ಸ್ವಾಮೀಜಿಯ ಜ್ಞಾನಮಂದಿರ ಸಿದ್ಧಗೊಂಡಿರುತ್ತದೆ. ಅದರ ಉದ್ಘಾಟನೆಗೆ ಸಾಕಷ್ಟು ಜನ ಸೇರಿರುತ್ತಾರೆ. ಸಭಿಕರಲ್ಲಿ ವಿದೇಶೀಯರೂ ಇರುತ್ತಾರೆ. 'ಈಗ ನಮ್ಮ ರಾಯರು ತಮ್ಮನ್ನು ಸ್ವಾಗತಿಸುತ್ತ ಬಣ್ಣಿಸಿದ ಭಗವಾನ್ ಅಭಿನ್ನಾನಂದರು ಈಗ ಮಾತಾಡುತಲಿಲ್ಲ, ಅಭಿನ್ನಾನಂದ ಎಂದು ತನ್ನ ಖುಷಿಗೆ ತಾನೇ ಹೆಸರಿಸಿಕೊಂಡ ನಿಮ್ಮಂತೆಯೇ ವಿಧಗಳಲ್ಲೂ ಇರುವ, ಭಗವಾನ್ ಅಲ್ಲವೇ ಅಲ್ಲದ ಒಬ್ಬ ವ್ಯಕ್ತಿ ನಾಲ್ಕು ಮಾತುಗಳನ್ನು ಕೇಳುತಾನೆ'' ಎಂದು ಸ್ವಾಮೀಜಿ ತಮ್ಮ ಪ್ರಾಸ್ತಾವಿಕ ಭಾಷಣವನ್ನು ಆರಂಭಿಸುತ್ತ, ಸುತ್ತಲಿನ ಬದುಕಿನೊಂದಿಗೆ ಉತ್ತಮ ಸಂಬಂಧವನ್ನಿರಿಸಿಕೊಂಡು ಬಾಳುವುದೇ ಉತ್ತಮ ಮಾರ್ಗವೆಂದು ತಿಳಿಸುತ್ತಾರೆ. ನೆರೆದ ಶೋತಾರರ ಪ್ರಶ್ನೆಗಳಿಗೆ ವೈಚಾರಿಕ ಉತ್ತರಗಳನ್ನು ಕೊಟ್ಟು, ಅವರನ್ನು ಬೆರಗುಪಡಿಸುತ್ತಾರೆ. ಆತ್ಮ, ಪರಮಾತ್ಮ , ಹುಟ್ಟು , ಸಾವುಗಳಿಗೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿ, ನಂಬಿಕೆಯಿಂದ ಜಡ್ಡುಗಟ್ಟಿದ ಮನಸ್ಸುಗಳಿಗೆ ಬಿಸಿಯಾದ ವೈಚಾರಿಕತೆಯ ಶಾಖವನ್ನು ಕೊಡುತ್ತಾರೆ. ಈ ಸಂಭಾಷಣೆ ನಡೆಯುತ್ತಿರುವಾಗ ಶಾಂತಿ ಪೆಚ್ಚುಮೋರೆ ಹಾಕಿಕೊಂಡು ಅವರ ಮುಖವನ್ನೇ ನೋಡುತ್ತಾಳೆ. ಇತರ ಸಭಿಕರೂ ಅಚ್ಚರಿಗೊಳ್ಳುತ್ತಾರೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE