ಈಗಲ್ಸ್ ಲೈನ್

Author : ರಾಜೇಶ್ ಕುಮಾರ್ ಕಲ್ಯಾ

Pages 184

₹ 220.00




Year of Publication: 2023
Published by: ವೀರಲೋಕ
Address: #207, 2ನೇ ಮಹಡಿ, 3ನೇ ಮೇನ್, ಚಾಮರಾಜಪೇಟೆ, ಬೆಂಗಳೂರು - 560018
Phone: 7022122121

Synopsys

‘ಈಗಲ್ಸ್ ಲೈನ್’ ರಾಜೇಶ್ ಕುಮಾರ್ ಕಲ್ಯಾ ಅವರ ಕಾದಂಬರಿ. ಈ ಕಾದಂಬರಿಗೆ ಲೇಖಕ ಎ.ಆರ್. ಮಣಿಕಾಂತ್ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ತನ್ನ ಹಿರಿಯರು ಬಾಳಿ ಬದುಕಿದ ಊರಿಗೆ, ನಾಯಕ ಅಧ್ಯಯನದ ನೆಪದಲ್ಲಿ ಬರುತ್ತಾನೆ. ಮಾಹಿತಿ ಸಂಗ್ರಹದ ನೆಪದಲ್ಲಿ ಊರಿನವರೊಂದಿಗೆ ಒಡನಾಟ ಬೆಳೆಸಿಕೊಳ್ಳುತ್ತಾನೆ. ಆನಂತರದಲ್ಲಿ ಅವನೆದುರಿಗೆ ಒಂದು ಅನೂಹ್ಯ ಲೋಕವೇ ತೆರೆದುಕೊಳ್ಳುತ್ತದೆ. ಕುತೂಹಲದಿಂದಲೇ ಪ್ರತಿಯೊಂದಕ್ಕೂ ಮುಖಾಮುಖಿಯಾಗುತ್ತಾನೆ. ಮುಗ್ಧತೆ, ಸ್ವಾರ್ಥ, ಈರ್ಷೆ, ದ್ವೇಷ, ಧೈರ್ಯ, ಉಡಾಫೆ, ಪೆದ್ದುತನ, ಸಿಟ್ಟು, ಸೆಡವು ಮುಂತಾದ ಗುಣಾವಗುಣಗಳನ್ನು ಹೊಂದಿದ ಜನರು ಒಂದೊಂದು ಪಾತ್ರಗಳ ರೂಪದಲ್ಲಿ ಪರಿಚಯವಾಗುತ್ತಾ ಹೋಗುತ್ತಾರೆ ಎನ್ನುತ್ತಾರೆ.

ಜೊತೆಗೆ ಈ ಕೃತಿಯ ಹಲವು ಅಧ್ಯಾಯಗಳಲ್ಲಿ ಒಂದೊಂದು ಕಥೆಗೆ ವಸ್ತುವಾಗುವಂಥ ಬೆರಗಿನ ವಿವರಗಳಿವೆ. ಸ್ವಾರಸ್ಯಕರ ಮಾಹಿತಿಗಳಿವೆ. ಹಾಗಂತ ಇದು ಅಜ್ಜಿಕಥೆಯಲ್ಲ. ಕುತೂಹಲ, ಪದೇಪದೇ ಕೈಜಗ್ಗುತ್ತದೆ; ಆದರೆ ಇದು ಸಸ್ಪೆನ್ಸ್ ಡ್ರಿಲ್ಲರ್ ಅಲ್ಲ. ಕಾಡಿನ ಹತ್ತಾರು ಜೀವಿಗಳ ಬದುಕಿನ ವಿವರವಿದ್ದರೂ ಇದು ಪರಿಸರದ ಕಥೆಯಷ್ಟೇ ಅಲ್ಲ. ಹಲವು ನಂಬಿಕೆ, ಆಚರಣೆಗಳ ಮೆರವಣಿಗೆಯಿದೆ. ಆದರೆ ಇದು ಕಾಡ೦ಚಿನ ಮಲೆನಾಡಿನ ಹಳ್ಳಿಯೊಂದರ ಕಥೆಯಷ್ಟೇ ಆಗಿ ಉಳಿಯುವುದಿಲ್ಲ. ಬದಲಿಗೆ, ಈ ಎಲ್ಲಾ ಅಂಶಗಳನ್ನೂ ಇಷ್ಟಿಷ್ಟೇ ಸೇರಿಸಿ ಹೆಣಿಗೆ ಹಾಕಿದ ಕಾದ೦ಬರಿ ಎ೦ಬ ಕುಲಾವಿ. ಕಾಡು, ಕಣಿವೆ, ಸಂಶೋಧನೆ, ಪರಿಸರ ಎನ್ನುವಾಗ, ಒಂದಿಡೀ ತಲೆಮಾರನ್ನು ಸೂಜಿಗಲ್ಲಿನಂತೆ ಸೆಳೆದ ಪೂರ್ಣಚಂದ್ರ ತೇಜಸ್ವಿಯವರನ್ನು ನೆನೆಯದೇ ಇರಲು ಸಾಧ್ಯವೇ ಇಲ್ಲ. ತೇಜಸ್ವಿಯವರ ಪರಮ ಅಭಿಮಾನಿಯಾದ ರಾಜೇಶ್ ಕುಮಾರ್, ಅವರನ್ನು ಧ್ಯಾನಿಸುತ್ತಲೇ ಕೃತಿ ರಚನೆಗೆ ಮುಂದಾದರೇನೋ. ಹಾಗಾಗಿಯೇ ಕಾದ೦ಬರಿಯ ಉದ್ದಕ್ಕೂ ಅದೆಷ್ಟೋ ಸಂದರ್ಭಗಳಲ್ಲಿ ತೇಜಸ್ವಿಯವರ 'ನೆರಳು' ಪದೇಪದೇ ಸುಳಿದುಹೋಗುತ್ತದೆ.

ಈ ಕಾದಂಬರಿಯಲ್ಲಿ ಬರುವ ಹಲವು ಸಂದರ್ಭಗಳನ್ನು ನಾವೂ ಕಂಡಿದ್ದೇವೆ, ಅನುಭವಿಸಿದ್ದೇವೆ ಅನ್ನಿಸಿದ ಸಂದರ್ಭದಲ್ಲಿಯೇ, ನಮಗೆ ಗೊತ್ತಿಲ್ಲದ ಎಷ್ಟೊಂದು ಸಂಗತಿಗಳು ಇವೆಯಲ್ಲ ಅನ್ನಿಸಿ ಸೋಜಿಗವೂ ಆಗುತ್ತದೆ. ಇಲ್ಲಿನ ಪ್ರತಿಯೊಂದು ಪಾತ್ರದ, ಸನ್ನಿವೇಶದ, ಮಾತುಕತೆಯ ವಿವರಗಳು 'ದೀರ್ಘ'ವಾಗಿವೆ, ಅದೇ ಈ ಕಾದಂಬರಿಯ ಶಕ್ತಿ ಮತ್ತು ಮಿತಿ ಆಗಿರುವುದು ವಿಶೇಷ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ರಾಜೇಶ್ ಕುಮಾರ್ ಕಲ್ಯಾ

ರಾಜೇಶ್ ಕುಮಾರ್ ಕಲ್ಯಾ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕಲ್ಯಾ ಎಂಬ ಪುಟ್ಟ ಹಳ್ಳಿಯವರು. ಪ್ರಕೃತಿಯ ಜೊತೆಯಲ್ಲಿ ಬೆಳೆದ ಇವರಿಗೆ ಪರಿಸರವೆಂದರೆ ಇನ್ನಿಲ್ಲದ ಪ್ರೀತಿ, ಪರಿಸರದ ಕುರಿತು ಮುಗಿಯದ ಅಧ್ಯಯನದ ಆಸಕ್ತಿ. ವೃತ್ತಿಯಲ್ಲಿ ಇಂಜಿನಿಯರ್ ಆದ ರಾಜೇಶ್, ವೃತ್ತಿಯ ಪರಿಧಿ ಮೀರಿದ ಓದು ಬರವಣಿಗೆಯ ಸಾಂಗತ್ಯವನ್ನು ಅಂಟಿಸಿಕೊಂಡವರು. ವಿಜ್ಞಾನ, ಜೀವನ, ಪರಿಸರ, ಪ್ರವಾಸ, ಸಮಾಜವನ್ನು ವೈಚಾರಿಕ ಚಿಂತನೆಗೆ ಪ್ರೇರೇಪಿಸುವ ಇವರ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಿರಿಯ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳೆಂದರೆ ಪ್ರೀತಿಯೊಂದಿರುವ ಇವರ ಚೊಚ್ಚಲ ಕೃತಿ “ಈಗಲ್ಸ್ ಲೈನ್" ವೀರಲೋಕ ...

READ MORE

Related Books