ಬಯಕೆಯ ಬೆಂಕಿ

Author : ಎ. ಪಂಕಜ

Pages 120

₹ 60.00
Year of Publication: 2011
Published by: ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ
Address: ನಂ. 298, 6ನೇ ಕ್ರಾಸ್, ತ್ರಿವೇಣಿ ರಸ್ತೆ, ಯಶವಂತಪುರ, ಬೆಂಗಳೂರು-560022
Phone: 080-23371913

Synopsys

ಮನುಜ ಜೀವನವೆಂದರೆ ಏರು ಪೇರುಗಳ ಪಯಣ. ತೃಪ್ತಿ, ಅತೃಪ್ತಿ,ಹಿಂಸೆ, ಸುಖ, ಈ ಎಲ್ಲದರ ಮಿಶ್ರಣವೇ ಈ ಬದುಕು. ಮನುಜನ ಬಾಲ್ಯದಲ್ಲಿ ಅವನು ಯಾವ ಪರಿಸರದಲ್ಲಿ ಬೆಳೆಯುತ್ತಾನೆ ಅನ್ನೋದೇ ಅವನ ಬದುಕಿನ ಮುಂದಿನ ಪುಟಗಳನ್ನು ನಿರ್ಧರಿಸುತ್ತದೆ. "ಬಯಕೆಯ ಬೆಂಕಿ" ಕಾದಂಬರಿಯ ಮುಖ್ಯ ಪಾತ್ರವಾದ " ರಂಗನಾಥ"ನದ್ದು ಇದೇ ಪರಿಸ್ಥಿತಿ. ಅವನ ಬಯಕೆಗಳು ಅವನನ್ನೇ ದಹಿಸಿತು. ಅದು ಎಂತಹ ಬಯಕೆ? ದೈಹಿಕ ಬಯಕೆಯೇ, ತನಗೆ ದೊರೆಯದ ಪ್ರೀತಿ, ಆದರ ವಿಶ್ವಾಸಗಳನ್ನು ಪಡೆಯುವ ಬಯಕೆಯ ಬೆಂಕಿ.

About the Author

ಎ. ಪಂಕಜ
(20 April 1932)

ಎ. ಪಂಕಜ ಅವರು ತುಮಕೂರು ಜಿಲ್ಲೆಯ ಪಾವಗಡದಲ್ಲಿ 1932 ರ ಏಪ್ರಿಲ್‌ 20ರಂದು ಜನಿಸಿದರು. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಅಭಿನಯಿಸಿ ಹಲವಾರು ಬಹುಮಾನ ಪಡೆದಿದ್ದರು. ಓದಿದ್ದು ಇಂಟರ್ ಮೀಡಿಯಟ್‌ ಆದರೂ ಹಿಂದಿ ಭಾಷೆಯಲ್ಲಿ ವಿದ್ವಾನ್‌ ಪದವಿ ಪಡೆದಿದ್ದಾರೆ. ಅವರ ಮೊದಲ ಕವನ ‘ಜ್ಯೋತಿ ನಂದಿತು’. ಇಂಗ್ಲಿಷ್‌, ಹಿಂದಿ, ತೆಲುಗು ಭಾಷೆಯಿಂದ  ಕನ್ನಡಕ್ಕೆ ಹಲವಾರು ಕಥೆಗಳನ್ನು ಅನುವಾದಿಸಿದ್ದಾರೆ. ಇವರ ಮೊದಲ ಕಥೆ ಪ್ರಕಟವಾದುದು ‘ತಾಯಿನಾಡು’ ಪತ್ರಿಕೆಯಲ್ಲಿ. ನಂತರ ‘ಸೋದರಿ’, ‘ವಿಶ್ವಬಂಧು’ ಮುಂತಾದ ಪತ್ರಿಕೆಗಳಿಗೂ ಬರೆಯತೊಡಗಿದರು. ‘ನಾದಭಂಗ’, ‘ವಿಜಯಗೀತ’, ‘ಸೊಗಸುಗಾತಿ’, ‘ಬಂಗಾರದ ಬಲೆ’, ‘ಕಾಗದದ ದೋಣಿ’, ‘ಬಲಿಪಶು’, ‘ಮಧು’, ‘ನಾಗರ ನೆರಳು’ ಅವರ ...

READ MORE

Related Books