ನಿನಗೆ ಹೇಳದೆ ಉಳಿದ ಮಾತುಗಳು

Author : ಚಕ್ರವರ್ತಿ ಸಿ.

Pages 100

₹ 100.00
Year of Publication: 2020
Published by: ಎಚ್.ಎಸ್.ಆರ್.ಎ ಪಬ್ಲಿಕೇಷನ್
Address: ಬೆಂಗಳೂರು
Phone: 9880037963

Synopsys

ಲೇಖಕ ಚಕ್ರವರ್ತಿ ಸಿ. ಅವರು ‘ಮಹಿಳಾ ಸಬಲೀಕರಣ, ಕೃಷಿ, ಮನುಷ್ಯನ ವಿಕಾಸ’ಕ್ಕೆ ಸಂಬಂಧಿಸಿದಂತೆ ತಮ್ಮ ಕಾದಂಬರಿಯಲ್ಲಿ ಚರ್ಚಿಸಿದ್ದಾರೆ. ಕೃತಿಗೆ ಮುನ್ನುಡಿ ಬರೆದ ವೈದ್ಯೆ, ಲೇಖಕಿ ಕೆ.ಎಸ್. ಪವಿತ್ರ ಅವರು ಕುಟುಂಬದಲ್ಲಿಯೇ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡುವ ಸುಲಭದ, ಆತ್ಮೀಯ ಕ್ರಮವನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ. ಮುಟ್ಟಿನ ಬಗ್ಗೆ, ಗರ್ಭನಿರೋಧಕಗಳ ಬಗ್ಗೆ, ಲೈಂಗಿಕ ಕ್ರಿಯೆಯ ಬಗ್ಗೆ, ತಪ್ಪು ಕಲ್ಪನೆಗಳ ಬಗೆಗೆ ಮಕ್ಕಳೊಡನೆ, ಬೆಳೆದಿರುವ ಯುವಕ -ಯುವತಿಯರೊಡನೆ ಮಾತನಾಡುವುದು ಅಪ್ಪ-ಅಮ್ಮಂದಿರಿಗೆ ಸುಲಭವಲ್ಲ! ಆದರೆ ಈ ಕಾದಂಬರಿಯ ನಾಯಕಿ ‘ಸೋಮಿ’ ಅದನ್ನು ಸುಲಭವಾಗಿ, ಸಂಕೋಚವಿಲ್ಲದೆ ಮಾತನಾಡುವ ರೀತಿಯನ್ನು ತೋರಿಸಿಕೊಡುತ್ತಾಳೆ. ಮಹಿಳಾ ಸಬಲೀಕರಣಕ್ಕೆ, ಮಹಿಳೆಯರ ದೈಹಿಕ, ಮಾನಸಿಕ ಆರೋಗ್ಯಕ್ಕೆ ಬಹು ಮುಖ್ಯವಾದ ಅಡ್ಡಿಗಳಾಗಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಅಪ್ರಬುದ್ಧ ಲೈಂಗಿಕತೆ- ಅಕಾಲಿಕ ಪ್ರೇಮ ಪ್ರಕರಣಗಳನ್ನು ನಿಭಾಯಿಸಲು ಅಗತ್ಯವಾದ ಪ್ರಾಯೋಗಿಕ ಮಾಹಿತಿಯನ್ನು ಈ ಕಾದಂಬರಿಯ ಮೂಲಕ ಚಕ್ರವರ್ತಿಯವರು ನೀಡಿದ್ದಾರೆ" ಎಂದು ಪ್ರಶಂಸಿಸಿದ್ದಾರೆ. 

About the Author

ಚಕ್ರವರ್ತಿ ಸಿ.

ಲೇಖಕ ಚಕ್ರವರ್ತಿ ಸಿ. ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯವರು.  ಬರವಣಿಗೆ, ಸಾಹಿತ್ಯ ಓದು, ಪ್ರವಾಸ ಅವರ ಇಷ್ಟದ ಪ್ರವೃತ್ತಿ. ಅವರ ಮೊದಲ ಕೃತಿ ‘ನಿನಗೆ ಹೇಳದೆ ಉಳಿದ ಮಾತುಗಳು’ (ಕಾದಂಬರಿ) ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ 2019ರ ಯುವ ಬರಹಗಾರರ ಪ್ರೋತ್ಸಾಹ ಧನ ಸಹಾಯ ಪಡೆದಿದೆ. ...

READ MORE

Related Books