ಕರ್ಣ ಪರ್ವ

Author : ವಿ.ಗಣೇಶ್‌

Pages 195

₹ 276.00
Year of Publication: 2019
Published by: ಈಶ್ವರಿ ಪ್ರಕಾಶನ
Address: ಅಗ್ರಹಾರ, ಮೈಸೂರು
Phone: 8310167626

Synopsys

'ಕರ್ಣ ಪರ್ವ’ ವಿ.ಗಣೇಶ್‌ ಅವರ ಕೃತಿಯಾಗಿದೆ. ಮೂವತ್ತೆಂಟು ಅಧ್ಯಾಯಗಳ: “ಕರ್ಣಪರ್ವ' ಅರ್ಜುನನ ಶಸ್ತ್ರಾಭ್ಯಾಸದ ಗರಡಿ ಮನೆಯಿಂದಲೇ ಆರಂಭಗೊಳ್ಳುತ್ತದೆ. ಆ ಆರಂಭದಲ್ಲೇ ಕರ್ಣ, “ಸಿಂಹದ ಮರಿಯಂತೆ ಹೆಜ್ಜೆ ಹಾಕುತ್ತ, ದೇವತಾಪುರುಷನಂತೆ ಬಂದು ದ್ರೋಣನಿಗೆ ನಮಸ್ಕರಿಸುತ್ತಾನೆ”. ಮಾತ್ರವಲ್ಲ, ಅರ್ಜುನನ ಕಡೆ ತಿರುಗಿ, “ಅರ್ಜುನ, ನೀನೇ ಜಗದೇಕ ವೀರ, ನಿನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ” ಎನ್ನುವ ಅಹಂಕಾರ ಬೇಡ. “ನೀನು ಮಾಡಿದ ಎಲ್ಲ ಪ್ರಯೋಗಗಳನ್ನು ನಾನು ಮಾಡಿ ತೋರಿಸುತ್ತೇನೆ” ಎಂದು ಹೂಂಕರಿಸುತ್ತಾ ಅವನನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ. ಹೀಗೆ ಅತ್ಯುತ್ಸಾಹದಿಂದ ಆರಂಭಗೊಳ್ಳುವ 'ಕರ್ಣಪರ್ವ ಕೊನೆಯ ಅಧ್ಯಾಯದವರೆಗೂ ಓದುಗನನ್ನು ತನ್ನ ತೆಕ್ಕೆಯಲ್ಲಿ ಬಂಧಿಸುವಲ್ಲಿ ಸಮರ್ಥವಾಗಿಬಿಡುತ್ತದೆ. ಕಾನೀನನೆಂದು, ಸೂತಪುತ್ರನೆಂದು, ರಾಧೇಯನೆಂದು, ವಸುಷೇಣನೆಂದು ಹೆಸರು ಪಡೆದು; ವೈವಿಧ್ಯಮಯ, ವೈರುಧ್ಯಮಯವಾದ ವ್ಯಕ್ತಿತ್ವದ ಕರ್ಣನ ಬದುಕು ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ಮಹಾಭಾರತದಲ್ಲಿ ಬರುವ ಒಂದು ಪಾತ್ರವನ್ನು ಕೈಗೆತ್ತಿಕೊಂಡು ಕಾದಂಬರಿಯನ್ನು ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಇದು ಪ್ರತಿಸೃಷ್ಟಿಯೂ ಹೌದು, ಪ್ರತಿಷ್ಟೆಯೂ ಹೌದು. ಇದೊಂದು ಸಾಹಸದ ಹಾಗೂ ಸವಾಲಿನ ಕೆಲಸ, ಈ ಸಾಹಸದ ಕೆಲಸಕ್ಕೆ ಕೈಹಾಕಿದ ವಿ.ಗಣೇಶ ಅವರನ್ನು ನಾನು ತುಂಬಾ ಮೆಚ್ಚಿಕೊಳ್ಳುತ್ತೇನೆ.

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books