ತ್ರಿವೇಣಿ ಅವರ ಕಾದಂಬರಿ-ಮುಚ್ಚಿದ ಬಾಗಿಲು. ವಿಧವೆಯರಿಗೂ ಮರುಮದುವೆಯಾಗಿ ಗಂಡನೊಂದಿಗೆ ಬಾಳಬೇಕು ಎಂಬ ಹಂಬಲ ಇರುತ್ತದೆ. ಅದಕ್ಕೆ ಸಮಾಜ ಅವಕಾಶ ನೀಡಬೇಕು ಎಂಬುದು ಕಾದಂಬರಿಯ ಒತ್ತಾಸೆ. ಮಾನವ ಸಹಜ ಲೈಂಗಿಕ ತೃಷೆಯ ತಣಿಸುವಿಕೆಯಲ್ಲಿ ವ್ಯಕ್ತಿಗತ ಹಾಗೂ ಸಾಮಾಜಿಕ ಆರೋಗ್ಯವೂ ಅಡಗಿದೆ ಎಂಬ ಸೂಕ್ಷ್ಮತೆಯ ಸಂದೇಶವನ್ನು ಇಲ್ಲಿ ನಿರೀಕ್ಷಿಸಬಹುದು. ವಿಧವೆಯು ವಿಧುರನೊಂದಿಗೆ ಅಥವಾ ಅವಿವಾಹಿತ ತರುಣನೊಂದಿಗೆ ಮದುವೆಯಾದರೆ ತಪ್ಪಿಲ್ಲ. ಕಥಾನಾಯಕಿ ವಿಧವೆಯು ಅವಿವಾಹಿತ ತರುಣನೊಂದಿಗೆ ಮದುವೆ ಮಾಡಿಕೊಳ್ಳುವುದು ಕಾದಂಬರಿಯು ಮುಕ್ತಾಯವೂ ಆಗಿದೆ.
ಮನಸ್ಸಿನ ಕ್ರಿಯೆಗಳಿಗೆ ಕಥಾರೂಪ ನೀಡಿ ಕಾದಂಬರಿಗಳನ್ನು ರಚಿಸಿದ್ದು ತ್ರಿವೇಣಿ ಅವರ ಹೆಗ್ಗಳಿಕೆ. ಇವರು 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಜನಿಸಿದರು. ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು 20 ಕಾದಂಬರಿಗಳನ್ನು ಹಾಗೂ 3 ಕತಾ ಸಂಕಲನಗಳನ್ನು ರಚಿಸಿದ್ದಾರೆ. ಇವರ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿವೆ. ಇವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ – 'ಅವಳ ಮನೆ' ...
READ MORE