ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಿನ ರಾಜಕೀಯದಿಂದ ತೊಡಗಿ, ಬ್ರಿಟಿಷರು ಭಾರತವನ್ನು ಬಿಟ್ಟಹೋದ ಬಳಿಕ ನಡೆದ ರಾಜಕಾರಣ, ಲಂಚಗುಳಿತನ, ವಂಚನೆ, ಭ್ರಷ್ಟಾಚಾರ, ನಾಯಕಪಟ್ಟಕ್ಕೆ ನಡೆಸುವ ಹೋರಾಟ, ಕುಯುಕ್ತಿ ಮೊದಲಾದ ರಾಜಕೀಯ ಸಮಯಸಾಧಕತನದ ಮಾರ್ಮಿಕ ಚಿತ್ರಣವನ್ನು ನೀಡಲಾಗಿದೆ.
ಯೋತ್ಪಾದಕ ಚಟುವಟಿಕೆಗಳ ಮೂಲಕ ಜನಪ್ರಿಯ ಸರಕಾರದ ನಾಯಕಿಯನ್ನು ಆಕೆಯ ಹಿಂಬಾಲಕರನ್ನು ನಾಶಮಾಡುವ ರುದ್ರನಾಟಕೀಯ ಸನ್ನಿವೇಶದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.
ನಾಲ್ಕೂವರೆ ದಶಕಗಳ ಹಿಂದೆ ಬರೆದಿದ್ದ ಕಾದಂಬರಿಯ ಮೂಲಕ ಕಾರಂತರು - ರಾಜಕೀಯ ಭಯೋತ್ಪಾದನೆಯ ಹುಟ್ಟಿನ ಬಗ್ಗೆ ಶಕುನ ನುಡಿದದ್ದು - ಇಂದು ಜಾಗತಿಕ ಸತ್ಯವಾಗಿ ಪರಿಣಮಿಸಿದೆ. ಕಾರಂತರ ರಾಜಕೀಯ ದ್ರಷ್ಟಾರತನಕ್ಕೆ ಕಾದಂಬರಿ ಅತ್ಯುತ್ತಮ ಉದಾಹರಣೆಯಾಗಿದೆ. ಗೊಂಡಾರಣ್ಯದ ರಾಜಕೀಯ ಗೂಂಡಾರಾಜ್ಯವಾಗುವ ಸ್ಥಿತಿಗೆ ತಲುಪುವ ವಿವಿಧ ಹಂತಗಳನ್ನು ಕಾದಂಬರಿಕಾರರು ಚಿತ್ರಿಸಿದ್ದನ್ನು ಭಾರತ ದೇಶದ ಪ್ರಚಲಿತ ರಾಜಕೀಯ ವಿದ್ಯಮಾನಗಳೊಂದಿಗೆ ಹೋಲಿಸಬಹುದು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE