ಶಾಂತಿಧಾಮ

Author : ಸಿರಿಮೂರ್ತಿ ಕಾಸರವಳ್ಳಿ

Pages 128

₹ 160.00
Year of Publication: 2024
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: #745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560010

Synopsys

‘ಶಾಂತಿಧಾಮ’ ಸಿರಿಮೂರ್ತಿ ಕಾಸರವಳ್ಳಿ ಅವರ ಕಾದಂಬರಿ. ಕೃತಿಗೆ ಹಿರಿಯ ಸಾಹಿತಿ ಗಜಾನನ ಶರ್ಮಾ ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ ಸಮೃದ್ಧ ಮತ್ತು ಸಂತೃಪ್ತಿಯ ಬದುಕಿಗೆ ಆಶ್ರಯವಾಗಿದ್ದ ಮಲೆನಾಡು, ಕಳೆದ ಕೆಲವು ದಶಕಗಳಿಂದ ಎದುರಿಸುತ್ತ ಬಂದ ಸ್ಥಿತ್ಯಂತರಗಳನ್ನು, ಸರಳ, ಸುಂದರ ಕಥನದ ರೂಪದಲ್ಲಿ ನಿರೂಪಿಸುವ ಕೃತಿ 'ಶಾಂತಿಧಾಮ'. ಒಂದು ಕಾಲದಲ್ಲಿ ನೆಮ್ಮದಿಯ ಬದುಕಿಗೆ ನೆಲೆಯಾಗಿದ್ದ ಗ್ರಾಮೀಣ ಕೂಡು ಕುಟುಂಬಗಳು ಛಿದ್ರಗೊಂಡು, ಹಳ್ಳಿಗಾಡಿನ ಸಾಮುದಾಯಿಕ ಬದುಕು ಹಲಬಗೆಯ ತವಕ ತಲ್ಲಣಗಳಿಗೆ ತುತ್ತಾಗಿ, ಹತಾಶ ಸ್ಥಿತಿಗೆ ತಲುಪುತ್ತಿರುವ ವಿಷಾದ ಈ ಕೃತಿಯ ಉದ್ದಕ್ಕೂ ಅಂತಃಸ್ರೋತವಾಗಿ ಪ್ರವಹಿಸಿದೆ ಎಂದಿದ್ದಾರೆ.

ಜೊತೆಗೆ ಈ 'ಶಾಂತಿಧಾಮ' ದಲ್ಲಿ ನೆಲೆಸಿದ ಮಲೆನಾಡು ಪ್ರಾಂತ್ಯದ ಸಭ್ಯ, ಸುಸಂಸ್ಕೃತ ಶ್ರೀಮಂತ ಕುಟುಂಬವೊಂದು, ಕೇವಲ ಎರಡು ತಲೆಮಾರುಗಳ ಅವಧಿಯಲ್ಲಿ ತನ್ನ ಸುತ್ತ ಸಂಭವಿಸಿದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗಳ ಸುಳಿಗೆ ಸಿಲುಕಿ, ಅನಿವಾರ್ಯವಾಗಿ ತನ್ನನ್ನು ತಾನು 'ಆಧುನಿಕತೆ'ಯ ತೆಕ್ಕೆಗೆ ಒಡ್ಡಿಕೊಂಡ ಕಥಾನಕ ಈ ಕಾದಂಬರಿ ಎಂದು ತಿಳಿಸಿದ್ದಾರೆ.

About the Author

ಸಿರಿಮೂರ್ತಿ ಕಾಸರವಳ್ಳಿ

ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಮೂಲತಃ ಹೊಸನಗರದ ಹುಲಿಕಲ್ ನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರ ಅನೇಕ ಕತೆಗಳು ನಾಡಿವ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆ ಹಾಗೂ ಬರಹ ಅವರ  ಆಸಕ್ತಿದಾಯಕ ಕ್ಷೇತ್ರ. ಮೈಸೂರು ಚಿತ್ರಕಲೆ, ತಂಜಾವೂರ್ ಚಿತ್ರಕಲೆ, ಬೌಟಿಕ್ ಚಿತ್ರಕಲೆ, ಕಲಾಕೃತಿ, ದೂರದರ್ಶನದಲ್ಲಿ ಕಸೂತಿ ಕಲೆ ಪ್ರದರ್ಶನ, ಮತ್ತು ಪರಿಕಲ್ಪನೆಯ ಹಲವು ನಾಟಕಗಳ ಪ್ರದರ್ಶನಗಳನ್ನು ನೀಡಿರುತ್ತಾರೆ. ಚಂದನ ವಾಹಿನಿಯಲ್ಲಿ ಸಾಹಿತ್ಯ ಕುರಿತು ಸಂದರ್ಶನ ನೀಡಿದ್ದು, ಆಕಾಶವಾಣಿ ವನಿತಾ ವಿಭಾಗದಲ್ಲಿ ಕತೆ ಪ್ರಸ್ತುತಿಯನ್ನು ಮಾಡಿರುತ್ತಾರೆ. ಕೃತಿಗಳು : ಭಕ್ತಿ ಭಾವ ಸಿರಿ (ಭಕ್ತಿ ಗೀತೆಗಳ ಸಂಕಲನ), ನಡೆದು ಬಂದ ...

READ MORE

Related Books