ಬೆಳ್ಳಿಮೋಡ

Author : ತ್ರಿವೇಣಿ

Pages 166

₹ 90.00
Year of Publication: 2011
Published by: ತ್ರಿವೇಣಿ ಪಬ್ಲಿಕೇಷನ್ಸ್
Address: ಚಾಮರಾಜಪುರಂ, ಮೈಸೂರು

Synopsys

ಬೆಳ್ಳಿಮೋಡ- ತ್ರಿವೇಣಿ ಅವರು ಬರೆದ ಕಾದಂಬರಿ. ಬೆಳ್ಳಿಮೋಡ ತೋಟದ ಮಾಲೀಕನ ಮಗಳು ಸಾಮಾನ್ಯ ಹುಡುಗನನ್ನು ಪ್ರೀತಿಸಿ, ಮದುವೆಯಾಗುತ್ತಾಳೆ. ಮಾಲೀಕ ತೀರಿಹೋದ ಮೇಲೆ ಆತನ ಹೆಂಡತಿ ಮಗುವಿಗೆ ಜನ್ಮ ನೀಡುತ್ತಾಳೆ. ಇದು ಮಗಳ ಕನಸುಗಳನ್ನೇ ನುಚ್ಚುನೂರಾಗಿಸುತ್ತದೆ. ವಿಧಿಯು ಏಕಾಏಕಿಯಾಗಿ ಅವರ ಬದುಕಿನಲ್ಲಿ ಇಣುಕಿದ ಪರಿಯೇ ಕಥೆಯ ಅರ್ಥದ ವಿಸ್ತಾರ-ಆಳ ಹಾಗೂ  ಪರಿಣಾಮಕತೆಯನ್ನು ಹೆಚ್ಚಿಸಿದೆ.

ಹೆಣ್ಣಿನಲ್ಲಿ ಗಂಡಿಗಿರುವಂತೆ ಪ್ರಣಯದ ಬಯಕೆಯೂ ಹಾಗೂ ಅದರ ನಿರಾಕರಣೆಯೂ ಇದೆ. ಅದು ಆಕೆಯ ಹಕ್ಕೂ ಆಗಿದೆ. ಆದ್ದರಿಂದ, ಪ್ವ್ಯರೇಮದ ಆಳ ತಿಳಿಯದ ಹಾಗೂ ಪ್ರೇಮದಲ್ಲೂ ವ್ಯಾಪಾರಸ್ಥನಂತೆ ವರ್ತಿಸುವ ಪತಿಯನ್ನೂ ಅವಳು ತಿರಸ್ಕರಿಸುವ ಮೂಲಕ ಹೆಣ್ಣಿನ ಹಕ್ಕನ್ನು ಪ್ರತಿಪಾದಿಸುವ ಪ್ರತಿನಿಧಿಯಾಗುತ್ತಾಳೆ. ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಈ ಕಥೆಯನ್ನು ಚಲನಚಿತ್ರಕ್ಕಾಗಿ ನಿರ್ದೇಶಿಸಿದ್ದರು.

About the Author

ತ್ರಿವೇಣಿ
(01 September 1928 - 05 July 1963)

ಮನಸ್ಸಿನ ಕ್ರಿಯೆಗಳಿಗೆ ಕಥಾರೂಪ ನೀಡಿ ಕಾದಂಬರಿಗಳನ್ನು ರಚಿಸಿದ್ದು ತ್ರಿವೇಣಿ ಅವರ ಹೆಗ್ಗಳಿಕೆ. ಇವರು 1928 ರ ಸೆಪ್ಟಂಬರ್ 1 ರಂದು  ಮೈಸೂರಿನಲ್ಲಿ ಜನಿಸಿದರು. ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು  20 ಕಾದಂಬರಿಗಳನ್ನು ಹಾಗೂ 3 ಕತಾ ಸಂಕಲನಗಳನ್ನು ರಚಿಸಿದ್ದಾರೆ. ಇವರ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿವೆ. ಇವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ – 'ಅವಳ ಮನೆ' ...

READ MORE

Related Books