ಒಡಹುಟ್ಟಿದವರು

Author : ಶಿವರಾಮ ಕಾರಂತ

Pages 299

₹ 160.00

Buy Now


Year of Publication: 2014
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಒಡಹುಟ್ಟಿದವರು- ಡಾ. ಕೆ. ಶಿವರಾಮ ಕಾರಂತರ ಕಾದಂಬರಿ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದರೂ ತದ್ವಿರುದ್ಧವಾದ ಗುಣಗಳನ್ನು ಬೆಳೆಯಿಸಿಕೊಂಡು, ತಮ್ಮ ತಮ್ಮ ಸಂಸಾರಿಕ ಬದುಕಿಗೆ ಚೆಲುವನ್ನೋ, ಅಸಹ್ಯತನವನ್ನೋ, ತಮ್ಮ ತಮ್ಮ ನಡತೆಗಳ ಕಾರಣದಿಂದಾಗಿಯೇ ಸೃಷ್ಟಿಸಿಕೊಂಡ ವಾಸಂತಿ ಮತ್ತು ಶೇವಂತಿ ಎಂಬ ಅಕ್ಕತಂಗಿಯರ ಸುತ್ತ ಹೆಣೆದಿರುವ ಹಾಗೂ ದಾಂಪತ್ಯ ಜೀವನದ ಕಥಾನಕವೇ ಈ ಕಾದಂಬರಿ.

ವಾಸಂತಿಯ ಪತಿ ಸುಧಾಕರ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ವಿಲಾಸಮಯ ಜೀವನ ಇಷ್ಟಪಡುತ್ತಾನೆ. ಇದರಿಂದ, ಮಾವ ಗಜಾನನರಾಯರಿಗೆ ಚಿಂತೆ. ಇಂಗ್ಲೆಂಡಿನ ಎಮಿಲಿಗೆ ಈತನ ಮೇಲೆ ಪ್ರೀತಿ ಇದ್ದರೂ, ಈತನ ಮದುವೆಯಾದ ಸುದ್ದಿ ತಿಳಿದು ಸುಮ್ಮನಾಗುತ್ತಾಳೆ. ವಾಸಂತಿ ಮಾತ್ರ ನಿರಾಸೆಯಾಗದೇ ಅಧ್ಯಾಪಕಿಯಾಗಿರುತ್ತಾಳೆ. ಆಕೆಯ ಸಹನೆ ಈತನಲ್ಲಿ ತನ್ನ ತಪ್ಪಿಗೆ  ಪಶ್ಚಾತ್ತಾಪ ಪಡುವಂತೆ ಮಾಡುತ್ತದೆ.

ಇದು ವಾಸಂತಿಯ ಕಥೆಯಾದರೆ, ಶೇವಂತಿಯ ಕಥೆಯೇ ಬೇರೆ. ಸುಖದ ಬದುಕಿಗೆ ಹಾತೊರೆಯುವವಳು. ಶ್ರೀಮಂತ ವಾಸುದೇವನೊಂದಿಗೆ ಮದುವೆಯಾಗುತ್ತದೆ. ಆತ ಸಂಪ್ರದಾಯಸ್ಥ. ಆತನ ವೃದ್ಧ ತಂದೆ-ತಾಯಿಯೊಂದಿಗೂ ಈ ಶೇವಂತಿ ಹೊಂದಾಣಿಕೆ ಮಾಡಿಕೊಂಡು ಹೋಗುವುದಿಲ್ಲ. ಚಿನ್ನ-ಬೆಳ್ಳಿ-ವಸ್ತ್ರ ಎಂದು ಪೀಡಿಸುತ್ತಾ ಇರುತ್ತಾಳೆ. ಇದರಿಂದ ವಾಸುದೇವ ಬೇಸರ ತಾಳುತ್ತಾನೆ. ಒಂದು ದಿನ ಜಗಳವಾಡಿ ಶೇವಂತಿ ತವರಿಗೆ ತೆರಳುತ್ತಾಳೆ. ನಂತರದ ದಿನಗಳಲ್ಲಿ ಶೇವಂತಿ ತನ್ನ ಹಠ ಬಿಡದೇ, ಮರು ಮದುವೆಯಾಗಲೂ ಮನಸು ಮಾಡುತ್ತಾಳೆ. ಇತ್ತ ವಾಸುದೇವನೂ ಮತ್ತೊಂದು ಹೆಣ್ಣನ್ನು ಮದುವೆಯಾಗಲು ಬಯಸುತ್ತಾನೆ. ಈ ಹಂತದಲ್ಲಿ ವಾಸಂತಿ ಮಧ್ಯಸ್ಥಿಕೆ ವಹಿಸಿ, ಅವರಿಬ್ಬರನ್ನು ಮತ್ತೇ ಕೂಡಿಸುತ್ತಾಳೆ. ಅದೇ ವೇಳೆ, ಸುಧಾಕರನ ಪತ್ರದ ಪ್ರಸ್ತಾಪವಾಗುತ್ತದೆ. ‘ತಾನು ಸಂಶೋಧನೆಯಲ್ಲಿದ್ದು, ತನ್ನ ಬಗ್ಗೆ ಚಿಂತಿಸಬೇಡ’ ಎಂದಿರುತ್ತಾನೆ. ವಾಸಂತಿ-ಸುಧಾಕರ ಮಧ್ಯೆ ಇರುವ ಪರಸ್ಪರ ತಿಳಿವಳಿಕೆಯು ಸಂಸಾರದ ಗುಟ್ಟು ಎಂಬಂತೆ ಈ ಕಾದಂಬರಿಯು ಸಂದೇಶ ನೀಡುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1954 ರಲ್ಲಿ (ಪುಟ: 310) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.  

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books