ಅದೃಷ್ಟದ ಅಂಚಿನಲ್ಲಿ

Author : ಹೆಚ್.ಜಿ. ರಾಧಾದೇವಿ

Pages 223

₹ 38.00




Year of Publication: 1994
Published by: ಕೀರ್ತಿ ಪ್ರಕಾಶನ
Address: ನಂಬರ್ 2, ಎಸ್.ಡಿ.ಎಂ.ಲೇನ್, ಮನವಾರ್ತಿಪೇಟಿ, ಬೆಂಗಳೂರು- 53

Synopsys

‘ಅದೃಷ್ಟದ ಅಂಚಿನಲ್ಲಿ’ ಹೆಚ್. ಜಿ. ರಾಧಾದೇವಿ ಅವರ ಕಾದಂಬರಿ. ರೂಪ, ವಿದ್ಯೆ, ಹಣ ಏನೂ ಇಲ್ಲದ ಅಸಹಾಯಕ ಹೆಣ್ಣೊಬ್ಬಳು, ಬಾಲ್ಯದಲ್ಲಿ ತಂದೆಯಿಂದ ರಕ್ಷಣೆ ಪಡೆಯದೆ, ಯೌವನದಲ್ಲಿ ಪತಿಯಿಂದ ರಕ್ಷಣೆ ಪಡೆಯದೆ, ಮುಪ್ಪಿನಲ್ಲಿ ಮಗನಿಂದಲೂ ದೂರಾಗಿ ಒಂಟಿಯಾಗಿ ಬದುಕುವ ಪರಿಸ್ಥಿತಿ ಏಳು ಬೀಳಿನ ಚಿತ್ರಣವಿದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books