ಜನ್ಮ ಜನ್ಮದ ಅನುಬಂಧ

Author : ಎ. ಸರಸಮ್ಮ

Pages 284

₹ 230.00




Year of Publication: 2021
Published by: ವ್ಯಾಸ ಪಬ್ಲಿಕೇಷನ್ಸ್
Address: ನಂ.373, 9ನೇ ಮೂಕ್ಯ ಪೈಪ್ ಲೈನ್ ರಸ್ತೆ, ಹನುಮಂತನಗರ, ಬೆಂಗಳೂರು-560 01

Synopsys

‘ಜನ್ಮ ಜನ್ಮದ ಅನುಬಂಧ’ ಎ. ಸರಸಮ್ಮನವರ ಸಾಮಾಜಿಕ ಕಾದಂಬರಿಯಾಗಿದೆ.  ಕೃತಿಯ ಕುರಿತು ತಿಳಿಸಿರುವ ಲೇಖಕಿ 'ಭೂಮಿಯ ಮೇಲೆ ಪ್ರತಿಯೊಬ್ಬ ಮಾನವನು ನೆಮ್ಮದಿಯ ಜೀವನ ಮಾಡಲು ಬಯಸುತ್ತಾನೆ. ನೂರಾರು ಆಸೆಗಳನ್ನು ಹೊತ್ತು ಸಂಬಂಧಗಳ ಕೊಂಡಿಯನ್ನು ಬಿಗಿದು ಪ್ರೀತಿ ಮಮಕಾರಗಳ ಬಂಧನದಲ್ಲಿ ಸಿಲುಕಿ ಸಂತೋಷದಿಂದ ಬಾಳಲು ಆಶಿಸುತ್ತಾನೆ. ತನ್ನಾಲೋಚನೆಗಳು, ಬಯಕೆಗಳು ಸಾವಿರವಿದ್ದರೂ ಮುಂದಿನ ಭವಿಷ್ಯದ ಬಗ್ಗೆ ಕನಸುಗಳನ್ನು ಕಾಣುತ್ತಾ ಬದುಕು ಉಜ್ವಲವಾಗಲು ಶ್ರಮಿಸುತ್ತಾನೆ. ಆಚಾರ, ಸಂಪ್ರದಾಯ, ಜಾತಿ, ಮತಗಳ ಆಚರಣೆಯಿಂದ ಮೇಲು-ಕೀಳು ಎಂಬ ಭೇದಭಾವವನ್ನು ತೋರುತ್ತ ಶೋಷಣೆಗೆ ಒಳಗಾಗುತ್ತಾನೆ. ಬದಲಾವಣೆ ಕಾಲದ ನಿಯಮವೆಂದು ಮನುಷ್ಯ ಬದಲಾಗಿ ಮಾನವರೆಲ್ಲ ಒಂದೆ ಎನ್ನುವ ಮಾನವೀಯ ಮೌಲ್ಯಗಳನ್ನು ಅರಿತು ಮಾನವರೆಲ್ಲರೂ ಸಮಾನರು ಎಂದು ಅರಿತಾಗ ಎಲ್ಲರೂ ಸುಖ ಸಂತೋಷದಿಂದ ಬಾಳಬಹುದು. ನಮ್ಮ ಬದುಕಲ್ಲಿ ಏನೇ ದುರಂತಗಳಾದರೂ ಎಲ್ಲಾ ವಿಧಿ ನಿಯಮವೆಂದು ತಿಳಿಯದೆ ಮುಂಜಾಗ್ರತೆ ವಹಿಸಿ ಆಗುವ ಅನಾಹುತಗಳನ್ನು ತಡೆಯುವ ಮಾರ್ಗ ಅರಿತು ಸಾಗಿದಾಗ ನಮ್ಮ ಬಾಳ ದಾರಿ ಸುಖ ತೀರ ಸೇರುವುದು. ಮಾನವನು ಪರಿಸ್ಥಿತಿಗಳ ಒತ್ತಡಕ್ಕೆ ಸಿಲುಕಿ ನೋವು, ಕಷ್ಟ ಅನುಭವಿಸಿ ಕಾರಣಾಂತರಗಳಿಂದ ದೂರವಾದರೂ "ಜನ್ಮ ಜನ್ಮದ ಅನುಬಂಧ" ಇರಲು ವಿಧಿಯು ಮತ್ತೆ ಅವರನ್ನು ಒಟ್ಟುಗೂಡಿಸುವುದು ಇದೇ ಜೀವನ ಎಂಬುವುದನ್ನು ಈ ಪುಸ್ತಕ ತಿಳಿಸುತ್ತದೆ ಎಂದಿದ್ದಾರೆ.

About the Author

ಎ. ಸರಸಮ್ಮ

ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ.  ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...

READ MORE

Related Books