ಆ ವಿಜಯನಗರ

Author : ಕೌಂಡಿನ್ಯ ನಾಗೇಶ

Pages 190

₹ 171.00




Year of Publication: 2022
Published by: ವಂಶಿ ಪಬ್ಲಿಕೇಶನ್ಸ್‌
Phone: 9916595916

Synopsys

’ಆ ವಿಜಯನಗರ’ ಕೌಂಡಿನ್ಯ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಹಿಂದೂಗಳ, ಹಿಂದೂ ಧರ್ಮದ ರಕ್ಷಾ ಕವಚವಾಗಿ, ಸಾಮ್ರಾಜ್ಯ ವಿಸ್ತರಣೆ ಮತ್ತು ಆಡಳಿತದಲ್ಲಿ ದಕ್ಷತೆಯಿಂದ ಮತ್ತು ಹಿಂದೆ ಎಂದೂ ಕಾಣದ ಮಹಾವೈಭವವನ್ನು ದೇಶ-ವಿದೇಶಗಳಲ್ಲಿ ಪ್ರಖ್ಯಾತಗೊಳ್ಳುವಂತೆ ಮಾಡಿದ್ದ ಏಕೈಕ ಸಾಮ್ರಾಜ್ಯವೇ ವಿಜಯನಗರ, ಎಲ್ಲವೂ ಎಲ್ಲಾ ಕಾಲದಲ್ಲಿ ಒಂದೇ ರೀತಿ ಇರುವುದಿಲ್ಲ. ಇದು ಪ್ರಾಯೋಗಿಕ ಸತ್ಯ. ಕ್ರಿ.ಶ. ೧೫೬೫ರಲ್ಲಿ ನಡೆದ ರಕ್ಕಸತಂಗಡಿ ಯುದ್ಧದ ನಂತರ, ಈ ಮಹಾ ಸಾಮ್ರಾಜ್ಯ ಸರ್ವನಾಶದತ್ತ ಸಾಗಿತು. ಇದರೊಂದಿಗೆ, ಸಿಂಹಾಸನದ ಅಧಿಕಾರಕ್ಕಾಗಿ ಸ್ವಾರ್ಥಿಗಳು ಮಹಾನ್ ದುಷ್ಟರು ವಂಚನೆಯ ಸಂಚಿನ ಆಟ ಆಡಿದರು. ಈ ಇಡೀ ಕಥನವನ್ನು ಹೇಳುವ ಕೃತಿ ಇದಾಗಿದೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books