ಜೋಗೋ ಜೊಎಕ್ಕಲು ಜೋಗೋ

Author : ಅಂಜನಾ ಕೃಷ್ಣಪ್ಪ

Pages 66

₹ 80.00




Year of Publication: 2017
Published by: ರೋಹಿಣಿ ಪ್ರಕಾಶನ
Address: ಹೂವಿನಹಡಗಲಿ, ಬಳ್ಳಾರಿ- 583219
Phone: 9880691945

Synopsys

‘ಜೋಗೋ ಜೊಎಕ್ಕಲು ಜೋಗೋ’ ಲೇಖಕಿ ಅಂಜನಾ ಕೃಷ್ಣಪ್ಪ ಅವರ ಕಾದಂಬರಿ. ಈ ಕೃತಿಗೆ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಮುನ್ನುಡಿ ಬರೆದಿದ್ದಾರೆ. ಇಂದಿಗೂ ಜೀವಂತವಾಗಿರುವ ಹಳ್ಳಿಯ ಬದುಕಿನ ವಾಸ್ತವತೆಯನ್ನು ಲೇಖಕಿ ಸರಿಯಾಗಿ ಗ್ರಹಿಸಿದ್ದಾರೆ. ನುಡಿಗಟ್ಟುಗಳನ್ನು ಬಳಸುವ ರೀತಿ, ಪಾತ್ರಗಳನ್ನು ಕೆಲವೇ ಕೆಲವು ಶಬ್ಧಗಳಲ್ಲಿ ಚಿತ್ರಿಸಿ ಬಿಡುವ ಶಕ್ತಿ ಲೇಖಕಿಗಿದೆ ಎನ್ನುತ್ತಾರೆ ಚಂದ್ರಶೇಖರ ಪಾಟೀಲರು. ಅನಾವಶ್ಯಕ ವಿವರಣೆಗಳಿಲ್ಲದೆ ಆಧುನಿಕ ಯುಗದ ಜನರು ಕಥೆಯ ಸಾರವನ್ನು ಸುಲಭವಾಗಿ ಓದಿ ಸರಳವಾಗಿ ಅರಗಿಸಿಕೊಳ್ಳಬಹುದು. ಓದುಗರನ್ನು ಆಕರ್ಷಿಸುವ ಶಕ್ತಿ ಕಥೆಗಿದೆ ಎಂದೂ ಹೇಳುತ್ತಾರೆ.

About the Author

ಅಂಜನಾ ಕೃಷ್ಣಪ್ಪ
(01 June 1953)

ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...

READ MORE

Related Books