ಯಶಸ್ವಿ

Author : ಸುಧಾ ಮೂರ್ತಿ

Pages 219

₹ 130.00




Year of Publication: 2020
Published by: ಸಪ್ನ ಬುಕ್ಸ್‌
Address: #11, 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು-560009
Phone: 08040114455

Synopsys

ಒಟ್ಟು 18 ಮುದ್ರಣಗಳನ್ನು ಕಂಡ 'ಯಶಸ್ವಿ' ಕಾದಂಬರಿಯ ಲೇಖಕಿ ಸುಧಾಮೂರ್ತಿ. ತಮ್ಮ ಜೀವನಾನುಭವದ ಎಲ್ಲವನ್ನೂ ಕಥಾರೂಪದಲ್ಲಿ ಇಡಲು ಯತ್ನಿಸಿದ ಫಲವೇ ಈ ಕಾದಂಬರಿ. ಜೀವನದಲ್ಲಿ ಯಶಸ್ವಿಗೆ ಇರುವ ಮಾನದಂಡಗಳ ಬಗ್ಗೆ ಜಿಜ್ಞಾಸೆ ಇದೆ. ಯಾವ ಮಾನದಂಡ ಸರಿ ಯಾವುದು ತಪ್ಪು ಎಂಬುದರ ಸುದೀರ್ಘ ಚಿಂತನೆಯಲ್ಲಿ ಪಾತ್ರಗಳು ತೊಳಲಾಡುತ್ತವೆ. ಯಶಸ್ವಿಗೆ ಈ ಮಾನದಂಡವೇ ಸರಿ ಎಂದು ಹೊರಟವರ ”ಗೋಳು’ ಹಾಗೂ ಯಾವುದೇ ಮಾನದಂಡವಿರದೇ ಸಹಜ ಜೀವನವು ಯಶಸ್ವಿಯಾಗುತ್ತದೆ ಎಂಬ ಅಚ್ಚರಿಯೂ ಸಹ ಕಾದಂಬರಿಯ ಕಥಾವಸ್ತುವಾಗಿದೆ.

About the Author

ಸುಧಾ ಮೂರ್ತಿ
(18 August 1950)

ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್‌ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ.  ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.  ಸುಧಾ ಮೂರ್ತಿ ಅವರಿಗೆ ರೋಟರಿ ...

READ MORE

Related Books