ದಂದುಗ

Author : ನಾಗೇಶ್‍ ತಳವಾರ

Pages 136

₹ 100.00




Year of Publication: 2017
Published by: ಸ್ನೇಹ ಬುಕ್‍ ಹೌಸ್‍
Address: ಸ್ನೇಹ ಬುಕ್‍ ಹೌಸ್‍, 20 ಮೈನ್ ರೋಡ್, 7 ಬ್ಲಾಕ್, ಕೋರಮಂಗಲ, ಬೆಂಗಳೂರು, 560085
Phone: 9845031335

Synopsys

ಹಳ್ಳಿಗಾಡಿನ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳ ಬವಣೆಯನ್ನು ಹೇಳುವವರಿಲ್ಲ, ಹೇಳುವವರಿದ್ದರೂ ಕೇಳುವವರಿಲ್ಲ ಎನ್ನುವ ಪರಿಸ್ಥಿತಿ. ಜಗತ್ತು ಎಷ್ಟೇ ಮುಂದುವರೆದರೂ ಇವತ್ತಿಗೂ ಹಲವು ಕುಟುಂಬದ ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ನಡುವೆ ತಮ್ಮ ಜೀವ ಮತ್ತು ಜೀವನ ಎರಡನ್ನೂ ಕಳೆಯುವ ಅಸಹಾಯಕ ಪರಿಸ್ಥಿತಿಗೆ ತಲುಪಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಈ ಸಮಾಜ ಅವರನ್ನು ಇಂತಹ ಸ್ಥಿತಿಗೆ ತಳ್ಳಿದೆ ಎಂದರೆ ತಪ್ಪಾಗಲಾರದು. ಇಂತಹ ಹೆಣ್ಣು ಮಕ್ಕಳ ಪರಿಸ್ಥಿತಿಯ ಕುರಿತಾಗಿ ಬರೆದಂತಹ ಸುಂದರವಾದ ಕಾದಂಬರಿ ‘ದಂದುಗ’. ಕೇವಲ ಕವನಗಳನ್ನು ಮಾತ್ರ ಬರೆಯುವುದರಲ್ಲಿ ಸದಾ ನಿರತರಾಗಿರುವ ಯುವ ಜನರಲ್ಲಿ ಕಾದಂಬರಿಯನ್ನು ಬರೆಯುವಂತಹ ತಾಳ್ಮೆ ಇರುವುದು ಕಡಿಮೆ. ಅಂತಹುದರಲ್ಲಿ, ಒಂದು ಸಂಪೂರ್ಣ ಕಾದಂಬರಿಯನ್ನು ಬರೆದ ನಾಗೇಶ್‍ ಅವರು ತಮ್ಮ ಕೃತಿಯಲ್ಲಿ ಹೆಣ್ಣು ಮಕ್ಕಳ ಅಂತರಾಳವನ್ನು ವಿಶ್ಲೇಷಿಸುವ ಸಾಹಸವನ್ನು ಮಾಡಿದ್ದಾರೆ. ಇಂತಹ ಕೃತಿಗಳು ಕನ್ನಡದಲ್ಲಿ ಕಾಣಸಿಗುವುದು ಬಲು ಅಪರೂಪ. ಕಷ್ಟಸಾಧ್ಯವಾದ ಸಾಹಸಕ್ಕೆ ಕೈಹಾಕಿ ಜಯಿಸಿರುವ ನಾಗೇಶ್‍ ಅವರ ಕಾದಂಬರಿ ಓದುಗರನ್ನು ಓದಿಸಿಕೊಂಡು ಹೋಗುವುದರಲ್ಲಿ ಸಂಶಯವಿಲ್ಲ.

About the Author

ನಾಗೇಶ್‍ ತಳವಾರ
(16 April 1987)

ನಾಗೇಶ್ ತಳವಾರ ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ 16-04-1987 ರಲ್ಲಿ ಜನಿಸಿದರು. ನಾಗೇಶ್ ಶಂಕ್ರಮ್ಮಾ ಮಾದೇವ ತಳವಾರ ಇವರ ಪೂರ್ತಿ ಹೆಸರು. ಬಾಲವಾಡಿಯಿಂದ ಹೈಸ್ಕೂಲ್ ವರೆಗಿನ ಓದು ಸಿಂದಗಿಯಲ್ಲಿ ಮುಗಿಸಿದ್ರು. ಮುಂದಿನ ಓದು ವಿದ್ಯಾಕಾಶಿ ಧಾರವಾಡದಲ್ಲಿ ಆರಂಭಿಸಿ ಅಲ್ಲಿಯೇ ಎಂ.ಎ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಮುಗಿಸಿದ್ದಾರೆ. ಬರವಣಿಗೆ, ನಾಟಕ, ಡ್ಯಾನ್ಸ್ ಅನ್ನೋದು ಇವರಿಗೆ ಧಾರವಾಡ ನೆಲದ ಮಣ್ಣಿನಿಂದ ಮೈ ಮನಕ್ಕೆ ಮೆತ್ತಿಕೊಂಡಿದೆ. ನಾಲ್ಕೈದು ವರ್ಷಗಳ ಕಾಲ ಡ್ಯಾನ್ಸ್ ನಾಟಕ ಅಂತ ಅಲೆದಾಡಿದ್ದಾರೆ. ಹೀಗಾಗಿ ಕಾಲೇಜು ಜೀವನಕ್ಕೆ ಒಂದಿಷ್ಟು ಚಕ್ಕರ್ ಹಾಕಿದ್ರು. ಇದೆಲ್ಲಾ ಆದ್ಮೇಲೆ ...

READ MORE

Related Books