ಧರ್ಮಯುದ್ಧ

Author : ನಾ. ಮೊಗಸಾಲೆ

Pages 230

₹ 230.00




Year of Publication: 2021
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

‘ಧರ್ಮಯುದ್ಧ’ ಹಿರಿಯ ಲೇಖಕ ಡಾ.ನಾ. ಮೊಗಸಾಲೆ ಅವರ ಕಾದಂಬರಿ. ಈ ಕೃತಿಗೆ ಲೇಖಕ ನರೇಂದ್ರ ಪೈ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಬದಕನ್ನು ಸಮಗ್ರವಾಗಿ ಗ್ರಹಿಸಿ, ಒಂದು ಪಾತ್ರವನ್ನು ಹೇಗೋ ಹಾಗೆಯೇ ಒಂದು ಊರನ್ನು ಅದರ ಸಕಲ ಚರಾಚರ ವ್ಯಕ್ತಿ, ವಸ್ತು, ವಿಷಯ, ವಿವರಗಳಲ್ಲಿ ಸಮೃದ್ಧಗೊಳಿಸಬಲ್ಲ ಕಲೆಗಾರಿಕೆ ಮೊಗಸಾಲೆಯವರಿಗೆ ಸಹಜವಾಗಿ ಸಿದ್ಧಿಸಿದೆ. ಏವರ ಯಾವುದೇ ಕೃತಿಯನ್ನು ಕೈಗೆತ್ತಿಕೊಂಡರೂ ಒಂದು ಅಥೆಂಟಿಕ್ ಜಗತ್ತು ತೆರೆದುಕೊಳ್ಳುವುದು ನಿಶ್ಚಿತ. ಕಾದಂಬರಿಯೊಂದು ಇಷ್ಟನ್ನೇ ಅಚ್ಚುಕಟ್ಟಾಗಿ ಮಾಡಿದರೂ ಸಾಕು ಅದೊಂದು ಅದ್ಭುತ ಕೃತಿಯಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ನರೇಂದ್ರ ಪೈ. ಒಂದು ಪಂಜುರ್ಲಿ ಗುಡಿಯ ಜೀರ್ಣೋದ್ಧಾರವನ್ನೇ ವಸ್ತುವಾಗಿಸಿಕೊಂಡು ಏನು ಮಹಾ ಸಾಧಿಸಬಹುದು ಅನಿಸಿದರೆ. ಬಹುಬೇಗ ಮೊಗಸಾಲೆಯವರು ನಮ್ಮನ್ನು ಬೆಚ್ಚಿ ಬೀಳಿಸುವಂತೆ ಆದಿಶಂಕರ, ಬಸವ, ವೈದಿಕ ಎಂದೆಲ್ಲಾ ಅಷ್ಟಾವಧಾನಕ್ಕೆ ಕುಳಿತವರಂತೆ ತಮ್ಮ ವಸ್ತು ಹೇಗೆ ಜಾನಪದ, ಹೇಗೆ ಸಾಂಸ್ಕೃತಿಕ, ಹೇಗೆ ಧಾರ್ಮಿಕ ಮತ್ತು ಹೇಗೆ ರಾಜಕೀಯ ಕೂಡ ಎಂದೆಲ್ಲಾ ಅದರ ಎಂಟೂ ಮಗ್ಗುಲುಗಳನ್ನು ಪರಿಚಯಿಸುತ್ತಾ ಸಾಗುತ್ತಾರೆ.

ಕಳ್ಳಬಟ್ಟಿ ತಯಾರಿ, ಕೋಳಿ ಅಂಕ, ವಾಲೆಬೆಲ್ಲದ ಪಾಕಶಾಸ್ತ್ರದಿಂದ ಹಿಡಿದು, ಹೇಗೆ ನಮ್ಮ ಅಂತರಂಗ ಶುದ್ಧಿಗೆ ಬೇಕಾದ ಧರ್ಮ, ಆಚರಣೆಯ ಪ್ರದರ್ಶನಕ್ಕಿಳಿದು ಕ್ರಮೇಣ ಪವರ್ ಪಾಲಿಟಿಕ್ಸಿಗೂ ಬಳಸಲ್ಪಡುವ ಸರಕಾಯಿತು ಎನ್ನುವುದನ್ನು ಅಷ್ಟಮಂಗಲ ಪ್ರಶ್ನೆ, ಪಂಚಾಯತನ, ಷೋಡಶೋಪಚಾರ, ಬ್ರಹ್ಮಕಲಶದ ಅರ್ಥ ಎಂದೆಲ್ಲಾ ವಿವರವಿವರವಾಗಿ ತೆರೆದಿಡುವ ಅದ್ಭುತವಾದ ಹರಹುವುಳ್ಳ ಒಂದು ಅನನ್ಯ ಕೃತಿಯಿದು ಎಂದು ನರೇಂದ್ರ ಪೈ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಕಾದಂಬರಿಯ ಗಾತ್ರ ಸಣ್ಣಕತೆಗಳನ್ನು ಓದಿ ಭ್ರಮನಿರಸನಗೊಂಡಿರುವ ಕನ್ನಡ ಓದುಗರಿಗೆ ಈ ಕೃತಿ ಕಾದಂಬರಿಯ ಸಂತೃಪ್ತಿ ಒದಗಿಸುವ ಚೇತೋಹಾರಿ ಕಾಣಿಕೆಯಾಗಿದೆ ಎನ್ನುತ್ತಾರೆ.

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Conversation

Related Books