ಮಾಕನಡುಕು

Author : ಕುಂ. ವೀರಭದ್ರಪ್ಪ

Pages 344

₹ 350.00
Year of Publication: 2023
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

'ಮಾಕನಡುಕು' (ಶತತಾರ ನಕ್ಷತ್ರ ವೃಷಭರಾಶಿಗೆ ಹೇಳಿದ ಪ್ರಸಂಗ) ಹಿರಿಯ ಲೇಖಕ ಕುಂ.ವೀರಭದ್ರಪ್ಪ ಅವರ ಕಾದಂಬರಿ. ಈ ಕೃತಿಗೆ ವಿನಯಾ ಒಕ್ಕುಂದ ಅವರು ಮುನ್ನುಡಿ ಬರೆದಿದ್ದು, ಕನ್ನಡದ ಕಥನವಂತಿಕೆಯ ತ್ರಾಣವನ್ನು ಹೆಚ್ಚಿಸಿದ ಕಥೆಗಾರ ಕುಂವೀ. ‘ನಾವು ಕಥೆಗಳ ನಡುವೆಯೇ ಬದುಕುತ್ತೇವೆ’- ಎಂದ ಮಾಕ್ರ್ವೇಜ್‍ನಂತೆ, ಜನರ ಬದುಕಿನ ಉಸಿರ ವಿನ್ಯಾಸಗಳನ್ನು ಕನ್ನಡದ ಸಂವೇದನೆಗೆ ತಾಕಿಸಿದವರು. ಕತ್ತಲ ಹಿಡಿದ ತ್ರಿಶೂಲದ ಹೊಳಪು ಇಂದಿಗೂ ಕನ್ನಡ ಕಥನದ ಹಾದಿಯಾಗಿದೆ. ಗೋರಿ ಬಗೆಯುತ್ತಿದ್ದ ಕಿವುಡನ ಕೈಗಳು ಅಸಹಾಯಕತೆಯ ಅಂತರಾಳವನ್ನು ಬಗೆಯುವ ಬಗೆಯನ್ನು ತೋರಿವೆ.

ಬಹುದೊಡ್ಡ ಸೃಜನಶೀಲ ಮತ್ತು ಚಿಂತನಾ ತಾಕತ್ತಿನ ಕುಂವೀ ತಮ್ಮ ಕಥನಕ್ರಮವನ್ನು ತಾವೇ ಬದಲಿಸಿಕೊಳ್ಳುತ್ತ ಬಂದವರು. ಈ ದಾರಿ ಈಗ ಮಾಕನಡುಕುವಿಗೆ ತಲುಪಿದೆ. ಮಾಕನಡುಕು ಐದು ದಶಕಗಳ ಹಿಂದಿನ ನಲ್ಲಮಲ ಕಾಡು (ಆಂಧ್ರಪ್ರದೇಶ) ಹೊಕ್ಕ ಅನುಭೂತಿಯ ಕೃತಿ. ಸರ್ಕಾರಿ ದಫ್ತರಲ್ಲಿ ಮಾತ್ರ ಉಳಿದಿದ್ದ ಶಾಲೆಗೆ ಮಾಸ್ತರನಾಗಿ ಹೋದವನು ಆ ದಟ್ಟ ದಾರಿದ್ರ್ಯದ ಬಾಳಿಗೆ ನಾಗರಿಕತೆಯ ಸ್ಪರ್ಶವನ್ನು ಅನ್ನಮಯವಾದ ಅಕ್ಷರವನ್ನೂ ಕೊಡಲೇಬೇಕು ಎಂಬ ಬದ್ಧತೆಯ ಕಾರಣಕ್ಕಾಗಿ ಪಡುವ ಪಾಡಿನಗುಂಟ ಈ ಕಥೆ ಸಾಗುತ್ತದೆ ಎಂದಿದ್ದಾರೆ.

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Related Books