ಚಕ್ರಾಯಣ

Author : ಇಂದಿರಾತನಯ (ವಿ.ಆರ್.ಶ್ಯಾಂ)

Pages 264

₹ 150.00
Published by: ಅಂಕಿತ ಪುಸ್ತಕ
Address: ಬೆಂಗಳೂರು

Synopsys

ಲೇಖಕ ಇಂದಿರಾತನಯ ಅವರ ಕೃತಿ ಚಕ್ರಾಯಣ. ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ, ನಾಗರಿಕತೆಯ ಹೆಸರಿನಲ್ಲಿ, ವಿಜ್ಞಾನದ ಬೆಳಕಿನಲ್ಲಿ ತರ್ಕಕ್ಕೆ ಸಿಗದ ಘಟನೆಗಳ ಅತೀಂದ್ರಿಯ ಲೋಕವೊಂದು ಈ ಕೃತಿಯಲ್ಲಿದೆ. ಮನುಷ್ಯನ ಎಲ್ಲೆಯಿರದ ಮನಃಶಕ್ತಿಯನ್ನು ಮನವರಿಕೆ ಮಾಡಿಕೊಡುವ ಇಂದಿರಾತನಯರ ಕೃತಿಗಳು ಒಂದು ಅರ್ಥದಲ್ಲಿ ಕಾದಂಬರಿ, ನಿಜ. ಆದರೆ ವ್ಯಾಪಕ ಅರ್ಥದಲ್ಲಿ ಸಂಕಲಕ್ಪಶಕ್ತಿಯಿಂದ ಪ್ರೇರಿತವಾದ ಮಾನವಮನಸ್ಸಿನ ಸೂಕ್ಷ್ಮಗಳನ್ನು ಆಧಾರಗಳ ಮೂಲಕ ನಿರೂಪಿಸುವ ಅಪೂರ್ವ ಗ್ರಂಥಗಳು. ಕನ್ನಡದಲ್ಲಿ ಈ ಬಗೆಯ ಕಾದಂಬರಿಗಳನ್ನು ಮೊಟ್ಟಮೊದಲಿಗೆ ಬರೆದವರು ಇಂದಿರಾತನಯ. ಅತ್ಯಂತ ಕ್ಲಿಷ್ಟವಾದ ಮಂತ್ರತಂತ್ರ ವಿದ್ಯೆಗಳನ್ನು ಸಮಾಜ ಜೀವನದ ಗಾಜಿನ ಮೂಲಕ ಹಾಯಿಸಿ, ಒಂದು ಗಾಢ ಅನುಭವ ಉಂಟಾಗುವಂತೆ ಮಾಡುವ ಅವರ ಬರವಣಿಗೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರ ಅಪರೂಪವಾದದ್ದು.

About the Author

ಇಂದಿರಾತನಯ (ವಿ.ಆರ್.ಶ್ಯಾಂ)

ತಮ್ಮ ಮಾಂತ್ರಿಕ ಬರಹದಿಂದ ಓದುಗ ಬಳಗವನ್ನು ಸೃಷ್ಟಿಸಿಕೊಂಡ ಲೇಖಕ ವಿ.ಆರ್.ಶ್ಯಾಂ. ಇಂದಿರಾತನಯ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ಬರೆದ ಇವರು ಸುಮಾರು 50ಕ್ಕೂ ಹೆಚ್ಚು ಕಾದಂಬರಿ ಹಾಗೂ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.ತಾಂತ್ರಿಕ ವಿಷಯದ ಬಗ್ಗೆ ಕುತೂಹಲಕಾರಿ ಕಾದಂಬರಿಗಳನ್ನು ರಚಿಸಿರುವ ಇಂದಿರಾತನಯ ತಮ್ಮ ಪ್ರಯೋಗಶೀಲತೆಯಿಂದ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮ ಮೂಡಿಸಿದವರು. ಅವರ ಶಾಕ್ತ್ಯಪಂಥದ ಪ್ರಯೋಗಶೀಲ ಕೃತಿಗಳಾದ ‘ಮಂತ್ರಶಕ್ತಿ’, ಶಕ್ತಿಪೂಜೆ, ಸೇಡಿನಕಿಡಿ, ಹಾಗೂ ಪೂಜಾತಂತ್ರ ಅತ್ಯಂತ ಜನಪ್ರಿಯ ಕಾದಂಬರಿಗಳು. ಅವರ ‘ಚಕ್ರಾಯಣ’ ಸ್ವಾಮಿ ರಮಾನಂದರ ಹಿಮಾಲಯದ ತಪ್ಪಲಿನಲ್ಲಿ ಕೃತಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ...

READ MORE

Related Books