ಕಡಿವಾಣ

Author : ಎನ್‌. ಬೋರಲಿಂಗಯ್ಯ

Pages 376

₹ 225.00




Year of Publication: 2014
Published by: ದಾರಿದೀಪ ಪ್ರಕಾಶನ
Address: ದಾರಿದೀಪ ಸಂಶೋಧನಾ ಕೇಂದ್ರ ಬೋಗಾದಿ ಬಡಾವಣೆ ಮೈಸೂರು- 570026
Phone: 9008556888

Synopsys

‘ಕಡಿವಾಣ’ ಎನ್‌. ಬೋರಲಿಂಗಯ್ಯ ಅವರ ರಚನೆಯ ಕಾದಂಬರಿಯಾಗಿದೆ. ಬೇಸಾಯ ಮಾಡುವ ಕೆಲಸದಲ್ಲಯೇ ಧರ್ಮಕ್ಕಿಂತ ಭಿನ್ನವಾದ ಜೀವಂತಿಕೆಯಿದೆ. ಅದನ್ನು ವಿವರಗಳಲ್ಲಿ ಕಟ್ಟಿಕೊಡುವ ಕೆಲಸವನ್ನು ಈ ಕಾದಂಬರಿಯು ಬಹಳ ಚೆನ್ನಾಗಿ ಮಾಡಿದೆ. ಹಾಗೆ ನೋಡಿದರೆ ಕುವೆಂಪು ಅವರು ಹೇಳದ ನಿಜವಾದ ಅರ್ಥದಲ್ಲಿ ಈ ಕಾದಂಬಲಿಗಳು ಅನೇಕ “ಶೂದ್ರ ತಪಸ್ವಿನಿಯರು' ಮತ್ತು 'ಶೂದ್ರ ತಪಸ್ವಿ'ಗಳ ತಂಗುದಾಣ... ಬೋರಲಿಂಗಯ್ಯನವರ ಆಸಕ್ತಿಯಿರುವುದು ಒಂದು ಜೀವನ ಕ್ರಮ, ಭಾವನಾಕ್ರಮ ಮತ್ತು ಆಲೋಚನಾಕ್ರಮಗಳನ್ನು ಕಟ್ಟಿಕೊಡುವುದೇ ವಿನಾ ಕಾದಂಬರಿ ಬರೆಯುವುದಲ್ಲ. ಆ ಕೆಲಸದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಕಾದಂಬರಿಯನ್ನು ದೇಸಿವಾದವೆಂಬ ಹಿನ್ನೆಲೆಯಲ್ಲಿ ಬಹಳ ಎಚ್ಚರಿಕೆಯಿಂದ ಗಮನಿಸಬೇಕು... ಅವರು ಸೃಷ್ಟಿಸುವ ನಾಯಕರು 'ಸಕಲ ಜೀವಾತ್ಮಗಳಿಗೆ ಲೇಸನೇ ಬಯಸುವ' ಜವನಕ್ಕನ ಮೂಸೆಯಲ್ಲಿ ಕರಗಿ ಬಂದವರು. ಅವರು ಮುಂದಾಳುಗಳೇ ವಿನಾ ನಾಯಕರಲ್ಲ. ಗಾಂಧೀ, ಶಾರದಾ ದೇವಿ, ಐನ್‌ಸ್ಟನ್ ಮತ್ತು ಮ್ಯಾಕ್ಸ್ ಪ್ಲಾಂಕ್, ಈ ನಾಲ್ವರೂ ನಮ್ಮ ಗ್ರಾಮೀಣ ಬದುಕಿನಲ್ಲಿ ಒಡಬಾಳು ನಡೆಸುವ ಸಾಧ್ಯತೆಗಳನ್ನು ಬಯಲಿಗೆ ತಂಬಿರುವುದು ಈ ಕೃತಿಗಳ ದರ್ಶನ. - ಡಾ.ಎಚ್.ಎಸ್. ರಾಘವೇಂದ್ರರಾವ್‌

About the Author

ಎನ್‌. ಬೋರಲಿಂಗಯ್ಯ

ಎನ್‌. ಬೋರಲಿಂಗಯ್ಯ ಅವರು ಹಿರಿಯ ವಿಮರ್ಶಕ ಮತ್ತು ಕಾದಂಬರಿಕಾರಾಗಿದ್ದಾರೆ. ಕನ್ನಡ ಪ್ರಧ್ಯಾಪಕರಾಗಿ ಸ್ವಯಂ ನಿವೃತ್ತಿ ಪಡೆದ ಅವರು ತಮ್ಮದೇ ಆದ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ.  ಕೃತಿಗಳು : ಕನ್ನಡ ಸಾಹಿತ್ಯ ಸಂದರ್ಭ ಮತ್ತು ಕುವೆಂಪು, ವಚನ ಕಟ್ಟಿದ ಅಲ್ಲಮ, ನೈಮಿತ್ತಿಕ, ಕಡಿವಾಣ ...

READ MORE

Related Books