ಅಮೋಘ ವರ್ಷ

Author : ಪ್ರಕಾಶ್‌ ಹೇಮಾವತಿ

Pages 154

₹ 100.00




Year of Publication: 2011
Published by: ಐಬಿಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone: 080- 48371555

Synopsys

'ಅಮೋಘ ವರ್ಷ' ಪ್ರಕಾಶ್‌ ಹೇಮಾವತಿ ಅವರ ಕೃತಿಯಾಗಿದೆ. ರಾಷ್ಟ್ರಕೂಟ ವಂಶದ ಅಮೋಘವರ್ಷ ನೃಪತುಂಗನು (೮೧೪-೮೭೮) ಕರ್ನಾಟಕದ, ಅಷ್ಟೆ ಏಕೆ, ಭಾರತದ ಓರ್ವ ಗಣ್ಯ ಚಕ್ರವರ್ತಿ. ಆತನ ಬಗ್ಗೆ ಬರೆದ ಈ ಕಾದಂಬರಿ ಅವನ ಸಾಧನೆಗಳ ಪರಿಚಯ ನೀಡುವ ಕೃತಿ. ಅನೇಕ ಇತಿಹಾಸ ಅಧ್ಯಾಪಕರಿಗೂ ತಿಳಿದಿರದ ಹೊಸ ಸಂಶೋಧನೆಯ ಅಂಶಗಳನ್ನು ಲೇಖಕರು ಇಲ್ಲಿ ಹೇಳಿದ್ದು ಮೆಚ್ಚಿಗೆಯ ವಿಷಯ. ಅರವತ್ನಾಲ್ಕು ವರ್ಷ ಆಳಿದ ವೀರನೂ, ವಿದ್ವಾಂಸನೂ, ಧಾರ್ಮಿಕನೂ, ಪಂಡಿತಾಶ್ರಯನೂ, ಜನಪರ ರಾಜನೂ ಆದ ಮೋಘವರ್ಷನ ಸಾಧನೆಯನ್ನು ಈ ಕೃತಿಯಲ್ಲಿ ಸೆರೆಹಿಡಿದ ಯತ್ನ ಬಹುಮಟ್ಟಿಗೆ ಯಶಸ್ವಿಯಾಗಿದೆ. ಲೇಖಕರು ವಿದೇಶದಲ್ಲಿ ಇದ್ದು ಮಾಡಿದ ಸಾಧನೆ ಇದು . ಆಗಿನ ಜಗತ್ತಿನ ನಾಲ್ಕು ವಿಶಾಲ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯ ಒಂದೆಂದು ಅರಬ್ ಪ್ರವಾಸಿ ಸುಲೇಮಾನ್ ಹೇಳಿದ್ದಾನೆ. ವೀರಸೇನ, ಜಿನಸೇನ, ಗುಣಭದ್ರ ಮುಂತಾದ ಅದ್ವಿತೀಯ ಜೈನ ಪಂಡಿತರೂ, ಶಾಕಟಾಯನನಂಥ ವೈಯ್ಯಾಕರಣಿ (‘ಅಮೋಘ ವೃತ್ತಿ’ ಕೃತಿಗೆ ತನ್ನ ಆಶ್ರಯದಾತನ ಹೆಸರಿಟ್ಟಿದ್ದಾನೆ), ಗಣಿತಜ್ಞ ಮಹಾವೀರ ಅವನ ಆಸ್ಥಾನದ ಝಗಝಗಿಸುವ ರತ್ನಗಳು. ಇಂಥಾ ವಿದ್ವಾಂಸ, ಸನ್ಯಾಸಿಗಳ ಸಹವಾಸದಲ್ಲೇ ವಿದ್ವಾಂಸ, ತತ್ವ ಚಿಂತಕ ಅಮೋಘವರ್ಷ ಕಾಲಕಳೆಯುತ್ತಿದ್ದ. ಆಗಲೇ ಕನ್ನಡದಲ್ಲಿ ಕೃತಿಗಳು ಪ್ರಕಟವಾಗಿದ್ದು, ‘ಕವಿರಾಜ ಮಾರ್ಗ’ ಶ್ರೀವಿಜಯ ರಚಿತ ಕೃತಿ. ಅಂಥ ಕವಿಗಳಿಗೆ ಮುಂದೆ ಮಾರ್ಗದರ್ಶಕವಾದ ‘ರಾಜ ಮಾರ್ಗ’. ‘ಪ್ರಶ್ನೋತ್ತರ ರತ್ನ ಮಾಲಿಕ’ ಎಂಬ ಅಮೋಘವರ್ಷನ ಸಂಸ್ಕೃತ ಕೃತಿ ಮುಂದೆ ಟಿಬೆಟ್‌ನ ಭಾಷೆಗೂ ಭಾಷಾಂತರವಾಗಿದೆ. ಪಟ್ಟದಕಲ್ಲಿನಲ್ಲಿ ಅವನ ಕಾಲದ ದೊಡ್ಡ ಬಸದಿ ಇದೆ. ಈ ಘನ ಚಕ್ರವರ್ತಿಯ ಪ್ರಮುಖ ಸಾಧನೆಗಳ ಪರಿಚಯ ನೀಡುವ ಈ ಕೃತಿ ಸ್ವಾಗತಾರ್ಹ. ಒಬ್ಬ ತಂತ್ರಜ್ಞ, ಇಷ್ಟೆಲ್ಲಾ ವಿಷಯಗಳನ್ನು ಸಂಗ್ರಹಿಸಿ ಕಲಾತ್ಮಕವಾಗಿ ಕಾದಂಬರಿ ಹೆಣೆದುದು ಸಂತಸದ ಸಂಗತಿ. ಇದರಲ್ಲಿ ಇರುವ ಲೋಪಗಳು ಕ್ಷಮಾರ್ಹ. ಲೇಖಕರ ಯತ್ನವನ್ನು ನಾನು ಅಭಿನಂದಿಸುತ್ತೇನೆ. ಎಂದು ಸೂರ್ಯನಾಥ್‌ ಕಾಮತ್‌ ಮುನ್ನುಡಿಯಲ್ಲಿ ಹೇಳಿದ್ದಾರೆ.

About the Author

ಪ್ರಕಾಶ್‌ ಹೇಮಾವತಿ

ಮೂಲತಃ ಬೆಂಗಳೂರಿನವರಾಗಿದ್ದು ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಚರಿತ್ರೆಗಳ ಬಗೆಗೆ ಅಪಾರ ಅಸಕ್ತಿ ಬೆಳೆಸಿಕೊಂಡಿರುವ ಪ್ರಕಾಶ ಹೇಮಾವತಿಯವರು ಬೆಂಗಳೂರಿನ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಾಸ್ತುಶಿಲ್ಪ ಶಾಸ್ತದ ಪದವೀಧರರು. ಕಳೆದ ನಲವತ್ತು ವರುಷಗಳಿಂದಲೂ ಅಮೇರಿಕಾದಲ್ಲಿ ನೆಲೆಸಿರುವ ಇವರು ಇದುವರೆಗೆ ಕರ್ನಾಟಕ ಚರಿತ್ರೆಯ ಬಗೆಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇದರೊಂದಿಗೆ ಕಾದಂಬರಿ, ಕಥೆ, ಕವನ, ನಾಟಕಗಳನ್ನು ಸಹ ರಚಿಸಿದ್ದಾರೆ. ಹಲವು ನಾಟಕಗಳನ್ನು ಬರೆದು ಶಿಕಾಗೋ ಹಾಗೂ ಇನ್ನಿತರೆಡೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಕೃತಿಗಳು "ಅಮೋಘವರ್ಷ" , "ಒಬಾಮ", "ಇಮ್ಮಡಿ ಪುಲಿಕೇಶಿ". ...

READ MORE

Related Books