ಮೂಲ

Author : ವಿಶ್ವಾಸ

Pages 198

₹ 120.00
Year of Publication: 2005
Published by: ಭಾಗೀರಥಿ ಪ್ರಕಾಶನ
Phone: 9449036277

Synopsys

ಲೇಖಕ ಹೆಚ್. ಆರ್. ವಿಶ್ವಾಸ ಅವರ ಕಾದಂಬರಿ ಮೂಲ. ಬೇರೆ ಬೇರೆ ಕಾರಣಗಳಿಂದಾಗಿ ತನ್ನ ಮೂಲವನ್ನು ಬಿಟ್ಟು ದೇಶ-ವಿದೇಶಗಳವರೆಗೆ ಮನುಷ್ಯ ತೆರಳಿದರೂ, ದೈಹಿಕವಾಗಿ ಎಷ್ಟೇ ದೂರವಿದ್ದರೂ ಭಾವಜೀವಿಯೊಬ್ಬನ ಮನಸ್ಸು ಮತ್ತೆ ಮತ್ತೆ ತುಡಿಯುತ್ತಿರುವುದು ತನ್ನ ಬೇರುಗಳತ್ತವೇ. ಆತ ಸಂತೃಪ್ತಿ ಕಂಡುಕೊಳ್ಳುವುದು ತನ್ನ ಮೂಲದಲ್ಲಿಯೇ. ಆದುದರಿಂದ ತಿಳಿದೋ ತಿಳಿಯದೆಯೋ ಪ್ರತಿಯೊಬ್ಬನೂ ತನ್ನ ಮೂಲವನ್ನು ಶೋಧಿಸುವ ಹುಡುಗಾಟದಲ್ಲೇ ತೊಡಗಿರುತ್ತಾನೆ ಎಂಬ ನಂಬಿಕೆಯನ್ನು ಆಧಾರವಾಗಿಸಿಕೊಂಡು, ಅದಕ್ಕೆ ಬೇಕಾದ ಪರಿಕರಗಳನ್ನು ರ‍್ಕಶುದ್ಧವಾಗಿ ಜೋಡಿಸಿಕೊಂಡು ಆರ‍್ಷಕ ಶೈಲಿಯಲ್ಲಿ ಹೆಣೆಯಲ್ಪಟ್ಟಿದೆ ಈ ಕಾದಂಬರಿ. ಮೂಲದ ಅನ್ವೇಷಣೆಯಲ್ಲಿ ಭಾಷೆಯೂ ಒಂದು ಪರಿಕರವಾಗಿದೆ. ಮಲೆನಾಡಿನ ಸಾಂದ್ರ ಅನುಭವಗಳ ಹಿನ್ನೆಲೆಯೂ ಇದಕ್ಕಿದೆ. ಸುಮತೀಂದ್ರ ನಾಡಿಗರ ವಿಸ್ತೃತವಾದ ಮುನ್ನುಡಿ ಹಾಗೂ ಸುಧಾಕರ ರ‍್ಬೆಯವರ ಆರ‍್ಷಕ ಮುಖಪುಟ ವಿನ್ಯಾಸ ಪುಸ್ತಕದ ತೂಕವನ್ನು ಹೆಚ್ಚಿಸಿವೆ.

About the Author

ವಿಶ್ವಾಸ
(01 March 1959)

ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ  ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...

READ MORE

Related Books